ಬಜ್ಪೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿಂಡರ್ ಗಾರ್ಟನ್ ಮಕ್ಕಳೊಂದಿಗೆ ಪರಿಸರ ಹಾಗೂ ಹಸಿರು ದಿನ ಆಚರಣೆ
ಬಜ್ಪೆಯ ಬೆಥನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಿಂಡರ್ ಗಾರ್ಟನ್ (ಕೆ.ಜಿ.) ವಿಭಾಗದ ಮಕ್ಕಳೊಂದಿಗೆ ಪರಿಸರ ದಿನ ಹಾಗೂ ಹಸಿರು ದಿನವನ್ನು ಜುಲಾಯ್ 21ರಂದು ಸೋಮವಾರ ಉತ್ಸಾಹಭರಿತವಾಗಿ ಆಚರಿಸಲಾಯಿತು.









ಈ ವಿಶೇಷ ದಿನದ ಅಂಗವಾಗಿ ಮಕ್ಕಳು ಹಸಿರು ಬಟ್ಟೆ ಧರಿಸಿ, ಹಸಿರು ಸಸ್ಯಗಳನ್ನು ನೆಟ್ಟು ಪರಿಸರದ ಮಹತ್ವವನ್ನು ಅರಿತುಕೊಂಡರು. ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಆಗಮಿಸಿದ್ದ ಚೈತ್ರರವರು ಮಾತನಾಡಿ, “ಪರಿಸರವನ್ನು ಉಳಿಸುವುದು ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯ ಕಟ್ಟುವ ಮೊದಲ ಹೆಜ್ಜೆ. ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಪರಿಸರ ಅರಿವು ಮೂಡುವುದು ಆಶಾಸ್ಪದವಾಗಿದೆ” ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು.

ಶಾಲಾ ಮುಖ್ಯ ಶಿಕ್ಷಕಿ ವಂದನೀಯ ಭಗಿನಿ ವೀಣಾ ಡಿಸೋಜರವರು ಮಕ್ಕಳಿಗೆ ಪರಿಸರ ಸಂರಕ್ಷಣೆ, ಗಿಡಗಳ ಮಹತ್ವ ಮತ್ತು ಪ್ರಕೃತಿಯ ಕುರಿತಾದ ವಿಷಯದ ಬಗ್ಗೆ ತಿಳಿವು ನೀಡಿದರು. ವಿವಿಧ ಚಟುವಟಿಕೆಗಳು ಮತ್ತು ನೃತ್ಯಗಳ ಮೂಲಕ ಮಕ್ಕಳು ತಮ್ಮ ಸೃಜನ ಶೀಲತೆಯನ್ನು ಪ್ರದರ್ಶಿಸಿದರು. ಮುಖ್ಯ ಶಿಕ್ಷಕರು ನೀಡಿದ ಚಟುವಟಿಕೆಯಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಬಹುಮಾಗಳನ್ನು ಕೊಟ್ಟು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು. ವಿದ್ಯಾರ್ಥಿಗಳು ಹಾಗೂ ಕೆ.ಜಿ. ಶಿಕ್ಷಕರು ಈ ಕಾರ್ಯಕ್ರಮವನ್ನು ನೆರವೇರಿಸಿಕೊಟ್ಟರು.




