ಮೊಗರ್ನಾಡ್ ಚರ್ಚ್ ನ ಹೊಸಾನ್ನಾ ವಲಯದಲ್ಲಿ ವಿವಾಹಿತ ದಂಪತಿಗಳ ದಿನ ಆಚರಣೆ
ಮೊಗರ್ನಾಡು ದೇವಮಾತಾ ಚರ್ಚ್ ನ ಸ್ಥಾಪನಾ 250ನೇ ವರ್ಷದ ಜುಬಿಲಿ ಸಂಭ್ರಮಾಚರಣೆಯ ಪ್ರಯುಕ್ತ ಹೊಸಾನ್ನಾ ವಲಯದಲ್ಲಿ ವಿವಾಹಿತ ದಂಪತಿಗಳ ದಿನ ಆಚರಣೆಯನ್ನು ಬಹಳ ಸಂಭ್ರಮದಿಂದ ಜುಲಾಯ್ 20ರಂದು ಆದಿತ್ಯವಾರ ಸಂಜೆ 5:00 ಗಂಟೆಗೆ ಕಾನ್ಫರೆನ್ಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪ್ರಾರ್ಥನಾ ಕೂಟದ ಬಳಿಕ ಪತಿಯಂದಿರು ತಮ್ಮ ಪತ್ನಿಗೆ ಹೂಗಳನ್ನು ಮುಡಿಗೆ ಮುಡಿಸಿ, ಹಳೆ ನೆನಪುಗಳನ್ನು ಮೆಲುಕು ಹಾಕಿ ಆನಂದಿಸಿದರು.









ಮೊಗರ್ನಾಡ್ ಚರ್ಚ್ ಪ್ರಧಾನ ಧರ್ಮಗುರುಗಳಾದ ವಂದನೀಯ ಫಾದರ್ ಅನಿಲ್ ಕೆನ್ಯೂಟ್ ಡಿಮೆಲ್ಲೊರವರು “ಸತಿ-ಪತಿಯರು ಕಷ್ಟಸುಖಗಳಲ್ಲಿ ಸಮಭಾಗಿಗಳಾಗಿದ್ದು, ಒಬ್ಬರಿಗೊಬ್ಬರು ಪ್ರೀತಿ ವಿಶ್ವಾಸದಿಂದಿರಬೇಕು” ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಂದನೀಯ ಫಾದರ್ ಆಸ್ಟಿನ್ ಫೆರ್ನಾಂಡಿಸ್ ರವರು ನೆರೆದ ಎಲ್ಲಾ ದಂಪತಿಗಳನ್ನು ಸನ್ಮಾನಿಸಿದರು. ಗೌರವಾಧ್ಯಕ್ಷರಾಗಿ ದೇವಮಾತಾ ಕಾನ್ವೆಂಟಿನ ಭಗಿನಿ ಲೋರಿನ್ ಮತ್ತು ಸಂಪನ್ಮೂಲ ವ್ಯಕ್ತಿಗಳಾಗಿ ಚೇಳೂರಿನ ನಿವೃತ್ತ ಶಿಕ್ಷಕ ಫೆಲಿಕ್ಸ್ ಡಿಸೋಜ ಆಗಮಿಸಿದ್ದರು.










ದಂಪತಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಹಿರಿಯ ದಂಪತಿಗಳು ತಮ್ಮ ವೈವಾಹಿಕ ಜೀವನದ ಅನಿಸಿಕೆಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೊ, ಆಯೋಗಗಳ ಸಂಯೋಜಕಿ ಎಮಿಲಿಯಾನ ಡಿಕುನ್ಹಾ, ವಾಳೆಗಳ ಗುರಿಕಾರರಾದ ಫೆಡ್ರಿಕ್ ಫುಡ್ತಾದೊ, ರವಿ ಫೆರಾವೊ, ವಿಲಿಯಂ ಪಿರೇರಾ ಮತ್ತು ರಾಜೇಶ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.





ಫ್ಲೇವಿ ಲೋಬೊ ವಂದನಾರ್ಪಣೆಗೈದರು. ಮೆಲ್ವಿಟಾ ಪಿರೇರಾ ಮತ್ತು ಪ್ರೀಮಲ್ ಲೋಬೊ ಕಾರ್ಯಕ್ರಮ ನಿರ್ವಹಿಸಿದರು. ಈ ಭವ್ಯ ಕಾರ್ಯಕ್ರಮದಲ್ಲಿ ಅಧಿಕ ದಂಪತಿಗಳು ಭಾಗವಹಿಸಿ ಸಾಕ್ಷಿಯಾದರು. ನೆರೆದ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.




