ಇಜಿ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಲೈಕೋರಾ ಕನ್ಸಲ್ಟಿಂಗ್ ಸಂಸ್ಥೆ ಆಯೋಜಿಸಿರುವ ಉದ್ಘಾಟನಾ ಅಕ್ಯೂಮೈಂಡ್ ಕಾರ್ಪೊರೇಟ್ ಕ್ವಿಝ್
ಮಂಗಳೂರಿನ ವಿವೆಂಟಾದಲ್ಲಿ ಆಗಸ್ಟ್ 8ರಂದು ನಡೆಯಲಿರುವ ಕಾರ್ಯಕ್ರಮ

ಮಂಗಳೂರಿನಲ್ಲಿ ಮೊದಲ ಕಾರ್ಪೊರೇಟ್ ಕ್ವಿಜ್ ಸ್ಪರ್ಧೆ ಅಕ್ಯೂಮೈಂಡ್ ಅನ್ನು ಆಗಸ್ಟ್ 8ರಂದು ನಡೆಸಲು ಸಿದ್ಧತೆಗಳು ನಡೆದಿದ್ದು, ಇದರೊಂದಿಗೆ ಮಂಗಳೂರು ಕ್ವಿಜ್ ಭೂಪಟದಲ್ಲಿ ಗುರುತಿಸಿಕೊಳ್ಳಲಿದೆ. ಕ್ವಿಜ್ ಪ್ರಪಂಚಕ್ಕೆ ಗಣನೀಯವಾಗಿ ಉತ್ತೇಜನ ನೀಡಲು ಹಾಗೂ ಉನ್ನತ ಮಟ್ಟದ ಬೌದ್ಧಿಕ ಸವಾಲಿಗೆ ವೃತ್ತಿಪರರನ್ನು ಮತ್ತು ವಿದ್ಯಾರ್ಥಿಗಳನ್ನು ಒಟ್ಟುಗೂಡಿಸುವ ನಿಟ್ಟಿನಲ್ಲಿ ಈ ಕ್ವಿಜ್ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವು ಆಗಸ್ಟ್ 8ರಂದು ಮಂಗಳೂರಿನ ವಿವೆಂಟಾದಲ್ಲಿ ನಡೆಯಲಿದೆ. ಲೈಕೋರಾ ಕನ್ಸಲ್ಟಿಂಗ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಈ ಕ್ವಿಝ್ ಸ್ಪರ್ಧೆಯನ್ನು ಆಯೋಜಿಸಿದ್ದು ಇಜಿಡಿಕೆ ಇಂಡಿಯಾ ಪ್ರೈವೇಟ್ ಲಿಮಿಟೆಡ್ (EG ಇಂಡಿಯಾ) ಸಂಸ್ಥೆಯು ಪ್ರಾಯೋಜಿಸಿದೆ. ಪೂರ್ಣ ಕಾಲಿಕ ಕಾರ್ಪೊರೇಟ್ ಉದ್ಯೋಗಿಗಳಿಗೆ ಹಾಗೂ ಎಂಜಿನಿಯರಿಂಗ್, ಮ್ಯಾನೇಜ್ಮೆಂಟ್ ಮತ್ತು ಇತರ ಪದವಿ ಅಥವಾ ಸ್ನಾತಕೋತ್ತರ ಪದವಿ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಕ್ವಿಜ್ ಸ್ಪರ್ಧೆಯಲ್ಲಿ ಮುಕ್ತವಾಗಿ ಭಾಗವಹಿಸ ಬಹುದಾಗಿದೆ. ಇದಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ.

ಅಕ್ಯೂಮೈಂಡ್ ಕ್ವಿಜ್ ಕುಶಾಗ್ರಮತಿ ಹಾಗೂ ಸಮಸ್ಯೆಗಳ ಪರಿಹಾರದ ಬೌದ್ಧಿಕ ಅನುಭವವನ್ನು ನೀಡುತ್ತದೆ. ಜತೆಗೆ ಅತ್ಯಾಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶವನ್ನು ಕಲ್ಪಿಸುತ್ತದೆ. ಕರ್ನಾಟಕ, ಕೇರಳ ಮತ್ತು ಗೋವಾ ರಾಜ್ಯಗಳ ಪ್ರತಿಭಾನ್ವಿತರು ಇದರಲ್ಲಿ ಭಾಗವಹಿಸ ಬಹುದಾಗಿದೆ. ಈ ರಸಪ್ರಶ್ನೆ ಸ್ಪರ್ಧೆಯನ್ನು ‘ಪಿಕ್‌ಬ್ರೈನ್’ ಎಂದೇ ಪ್ರಸಿದ್ಧರಾಗಿರುವ ಕ್ವಿಜ್ ಮಾಸ್ಟರ್ ಗಿರಿ ಬಾಲಸುಬ್ರಮಣ್ಯಂ ಮತ್ತು ಏಷ್ಯಾದ ಏಕೈಕ ವೃತ್ತಿಪರ ಮಹಿಳಾ ಕ್ವಿಜ್ ನಿರೂಪಕಿ ರಶ್ಮಿ ಫುರ್ಟಾಡೊ ಅವರು ನಡೆಸಿ ಕೊಡಲಿದ್ದಾರೆ. ಸ್ಪರ್ಧಾತ್ಮಕ ಕಲಿಕೆಯ ಹಂಚಿಕೆಯ ವೇದಿಕೆಯ ಮೂಲಕ ವ್ಯವಹಾರ, ತಂತ್ರಜ್ಞಾನ ಮತ್ತು ಶೈಕ್ಷಣಿಕ ಪ್ರಪಂಚಗಳನ್ನು ಜೋಡಿಸುವ ಗುರಿಯನ್ನು ಅಕ್ಯೂಮೈಂಡ್ ಹೊಂದಿದೆ. “ಮಂಗಳೂರು ನಗರವು ತಂತ್ರಜ್ಞಾನ ಮತ್ತು ಪ್ರತಿಭೆಯ ಪ್ರಾದೇಶಿಕ ಹಬ್ ಆಗಿ ವೇಗವಾಗಿ ಹೊರಹೊಮ್ಮುತ್ತಿದೆ. ಆ ಶಕ್ತಿಯನ್ನು ಪರಿಣಾಮಕಾರಿ ಚಿಂತನೆ ಮತ್ತು ಸಾಂಘಿಕ ಮನೋಭಾವವನ್ನು ಪ್ರದರ್ಶನದ ವೇದಿಕೆಯಾಗಿ ಪ್ರವಹಿಸುವಂತೆ ಮಾಡುವ ನಮ್ಮ ಪ್ರಯತ್ನವೇ ಅಕ್ಯೂಮೈಂಡ್ ಆಗಿದೆ” ಎಂದು ಲೈಕೋರಾ ಕನ್ಸಲ್ಟಿಂಗ್‌ನ ಆಡಳಿತ ನಿರ್ದೇಶಕ ಕೀತ್ ಲೋಬೊರವರು ತಿಳಿಸಿದ್ದಾರೆ. ರಾಷ್ಟ್ರೀಯ ಕ್ವಿಝ್ ಪ್ರಪಂಚದಲ್ಲಿ ಮಂಗಳೂರಿಗೂ ಸ್ಥಾನ ಕಲ್ಪಿಸುವ ದೀರ್ಘಾವಧಿಯ ಪ್ರಯತ್ನದ ಆರಂಭವಾಗಿ ನಾವು ಇದನ್ನು ಪರಿಗಣಿಸುತ್ತಿದ್ದೇವೆ ಎಂದಿದ್ದಾರೆ.

ಡೆನ್ಮಾರ್ಕ್ ಮೂಲದ EG A/S ಸಂಸ್ಥೆಯ ಸ್ವಾಮ್ಯದ ಅಂಗಸಂಸ್ಥೆಯಾಗಿರುವ ಇಜಿ ಇಂಡಿಯಾ, ಭಾರತದ ತಂತ್ರಜ್ಞಾನ ವಲಯದ ಪ್ರತಿಭೆಯನ್ನು ಪ್ರೋತ್ಸಾಹಿಸುವ ಬದ್ಧತೆಯ ಭಾಗವಾಗಿ ಈ ಕಾರ್ಯಕ್ರಮವನ್ನು ಬೆಂಬಲಿಸುತ್ತಿದೆ. ನಿರ್ದಿಷ್ಟ ಸಾಫ್ಟ್‌ವೇರ್ ಸೊಲ್ಯೂಶನ್ ಗಳಲ್ಲಿ ಪರಿಣತಿ ಹೊಂದಿರುವ ಕಂಪೆನಿಯು, ಮುಂದಿನ ಪೀಳಿಗೆಯಲ್ಲಿ ಕುತೂಹಲ ಮತ್ತು ನಾಯಕತ್ವ ಗುಣಗಳನ್ನು ಬೆಂಬಲಿಸುವ ಒಂದು ಪ್ರಕ್ರಿಯೆಯಾಗಿ ಈ ಕಾರ್ಯಕ್ರಮವನ್ನು ಪರಿಗಣಿಸಿದೆ. “ಮಂಗಳೂರು ನಗರವು ತಂತ್ರಜ್ಞಾನ ಮತ್ತು ನಾವೀನ್ಯತೆಯ ಕೇಂದ್ರವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಕೌತುಕ ಮೂಡಿಸುವ, ಸಮುದಾಯ ಮತ್ತು ಆರೋಗ್ಯಕರ ಸ್ಪರ್ಧೆಯನ್ನು ಪ್ರೋತ್ಸಾಹಿಸುವ ಅಕ್ಯೂಮೈಂಡ್ ನಂತಹ ಕಾರ್ಯಕ್ರಮಗಳನ್ನು ಬೆಂಬಲಿಸಲು ಇ.ಜಿ. ಸಂಸ್ಥೆಯು ಹೆಮ್ಮೆಪಡುತ್ತದೆ. ಈ ರೀತಿಯ ಕಾರ್ಯಕ್ರಮಗಳು ಉದ್ಯಮ ಮತ್ತು ಶಿಕ್ಷಣವನ್ನು ಬೆಸೆಯಲು ಸಹಾಯ ಮಾಡುತ್ತವೆ, ಜ್ಞಾನದ ವಿನಿಮಯ ಮತ್ತು ನೈಜ ನಾವೀನ್ಯತೆಗಾಗಿ ಅವಕಾಶವನ್ನು ಅಕ್ಯೂಮೈಂಡ್ ಸೃಷ್ಟಿಸುತ್ತದೆ ಹಾಗೂ ನೈಜ ಪ್ರಗತಿ ಇಲ್ಲಿ ಪ್ರಾರಂಭವಾಗುತ್ತದೆ” ಎಂದು ಇ.ಜಿ. ಇಂಡಿಯಾದ ಸಿಇಒ ಮತ್ತು ನಿರ್ದೇಶಕ ಶ್ರೀ ಆನಂದ್ ಫೆರ್ನಾಂಡಿಸ್ ಹೇಳುತ್ತಾರೆ.

“ಜ್ಞಾನ, ಸಹಯೋಗವನ್ನು ಆಚರಿಸುವ ವೇದಿಕೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಮಂಗಳೂರಿನ ಪ್ರತಿಭಾ ಸಮುದಾಯವನ್ನು ಬೆಂಬಲಿಸಲು ಇ.ಜಿ. ಬದ್ಧವಾಗಿದೆ” ಎಂದು ಕಂಟ್ರಿ ಮಾನವ ಸಂಪನ್ಮೂಲ ಮುಖ್ಯಸ್ಥ ಜೀವನ್ ಡಿಸೋಜರವರು ಅಭಿಪ್ರಾಯ ಪಡುತ್ತಾರೆ. “ಭವಿಷ್ಯ ನಿರ್ಮಾಣಕ್ಕೆ ಸಿದ್ಧವಾಗಿರುವ ಚಿಂತನೆಯನ್ನು ಪ್ರೋತ್ಸಾಹಿಸುವ ನಮ್ಮ ಮೌಲ್ಯಗಳೊಂದಿಗೆ ಅಕ್ಯೂಮೈಂಡ್ ಸಹಯೋಗ ನೀಡುತ್ತದೆ. ಇದೊಂದು ಕೇವಲ ಕ್ವಿಝ್ ಅಲ್ಲ, ಬದಲಾಗಿ ಇದು ಜನರು ಮತ್ತು ಸಂಸ್ಥೆಗಳಲ್ಲಿ ಬೆಳವಣಿಗೆಯನ್ನು ಹೆಚ್ಚಿಸುವ ಗುಣಗಳನ್ನು ಪೋಷಿಸುವ ಒಂದು ಮಾರ್ಗವಾಗಿದೆ.” ಅಕ್ಯೂಮೈಂಡ್ ನಲ್ಲಿ ಕರಾವಳಿಯಾದ್ಯಂತದ ಜನರು ಭಾಗವಹಿಸುವ ನಿರೀಕ್ಷೆ ಇದೆ. ತಮ್ಮ ಜ್ಞಾನವನ್ನು ಪರೀಕ್ಷಿಸಲು ಮತ್ತು ಬೌದ್ಧಿಕ ವಿನಿಮಯದಲ್ಲಿ ತೊಡಗಿಸಿಕೊಳ್ಳಲು ಉತ್ಸುಕರಾಗಿರುವ ವೈವಿಧ್ಯಮಯ ಕ್ವಿಝ್ ಉತ್ಸಾಹಿಗಳನ್ನು ಇದು ಆಕರ್ಷಿಸಲಿದೆ.
ಹೆಚ್ಚಿನ ಮಾಹಿತಿಗಾಗಿ https://www.lykoraconsulting.com/accumind ಸಂಪರ್ಕಿಸಬಹುದು.




