September 12, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಯುವ ವಕೀಲೆ ರಾಜಶ್ರೀ ಪೂಜಾರಿ ನಿಧನ

ಕಳೆದ ಎರಡು ವರ್ಷಗಳಿಂದ ಮಂಗಳೂರಿನಲ್ಲಿ ವಕೀಲೆಯಾಗಿ ವೃತ್ತಿ ನಿರ್ವಹಿಸುತ್ತಿದ್ದ ಬಹುಮುಖ ಪ್ರತಿಭೆಯುಳ್ಳ ಯುವ ವಕೀಲೆ ರಾಜಶ್ರೀ ಜಯರಾಜ್ ಪೂಜಾರಿಯವರು ಅನಾರೋಗ್ಯದಿಂದ ಇಂದು ಜುಲಾಯ್ 25ರಂದು ಶುಕ್ರವಾರ ವಿಧಿವಶರಾಗಿದ್ದಾರೆ. ತಮ್ಮ ಐದು ವರ್ಷದ 2017 ರಿಂದ 2022 ತನಕ ಕಾನೂನು ಶಿಕ್ಷಣವನ್ನು ಮಂಗಳೂರಿನ SDM ಕಾನೂನು ಕಾಲೇಜಿನಲ್ಲಿ ಪಡೆದುಕೊಂಡಿದ್ದರು.

ಹವ್ಯಾಸದಲ್ಲಿ ಕವಯಿತ್ರಿ, ಬರಹಗಾರ್ತಿ, ಲೇಖಕಿ, ಯುವಸಾಹಿತಿ, ವಾಗ್ಮಿ, ನಿರೂಪಕಿ, ಕಥಾವಾಚಕಿ, ಹಿನ್ನೆಲೆ ಧ್ವನಿ ಕಲಾವಿದೆ, ಯೋಗಪಟು, ರಂಗಭೂಮಿ ಕಲಾವಿದೆ, ಹವ್ಯಾಸಿ ಪ್ರವಾಸಿ, ಪುಸ್ತಕ ಪ್ರೇಮಿಯಾಗಿ ಹೀಗೆ ಹತ್ತು ಹಲವು ವಿಭಿನ್ನ ಕ್ಷೇತ್ರದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ರಾಜಶ್ರಿಯವರು ಬರೆದ ಅನೇಕ ಕತೆ, ಕವಿತೆ, ಲೇಖನ, ವ್ಯಕ್ತಿ ಪರಿಚಯ, ಪ್ರಬಂಧಗಳು ಇತ್ಯಾದಿ ಉದಯವಾಣಿ, ವಿಜಯವಾಣಿ, ಜಯಕಿರಣ, ವಿಶ್ವವಾಣಿ, ತುಳುನಾಡು ವಾರ್ತೆ, ಪ್ರಜಾವಾಣಿ ಮತ್ತು ಬುಕ್‌ ಬ್ರಹ್ಮ ವೆಬ್ ಸೈಟ್ ಹೀಗೆ ನಾಡಿನ ಅನೇಕ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

 

You may also like

News

ರಾಜ್ಯಮಟ್ಟದ ಭಾಷಣ ಸ್ಪರ್ಧೆಯಲ್ಲಿ ಬೈಂದೂರಿನ ಆಶಾ ವೀಣಾ ಡಯಾಸ್‌ ಅವರಿಗೆ ದ್ವಿತೀಯ ಸ್ಥಾನ

ಕಿರಣ್ ಬೇಡಿ ಅವರ ಕುರಿತು 5 ನಿಮಿಷಗಳ ಭಾಷಣ – ಪ್ರತಿಭೆಗೆ ರಾಜ್ಯಮಟ್ಟದಲ್ಲಿ ಮೆಚ್ಚುಗೆ ಕರ್ನಾಟಕ ರಾಜ್ಯದ ಸಮಾಜ ವಿಜ್ಞಾನ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ
News

ಸೆಪ್ಟೆಂಬರ್ 14ರಿಂದ ಪಾದ್ರೆ ಪಿಯೊ ಪುಣ್ಯ ಕ್ಷೇತ್ರದ 9 ದಿನಗಳ ನೊವೇನಾ – ಸೆಪ್ಟೆಂಬರ್ 23ರಂದು ವಾರ್ಷಿಕ ಮಹೋತ್ಸವ

ಸಿಟಿ ವಲಯದ ಶ್ರೇಷ್ಠಗುರು ಫಾದರ್ ರಿಚಾರ್ಡ್ ಕುವೆಲ್ಲೊ ಅವರಿಂದ ಧ್ವಜಾರೋಹಣ ಮಂಗಳೂರಿನ ಜೈಲ್ ರಸ್ತೆಯ ಕಪುಚಿನ್ ಧರ್ಮಗುರುಗಳ ಸೈಂಟ್ ಆನ್ಸ್ ಫ್ರೈರಿ ಆವರಣದಲ್ಲಿರುವ ಸೈಂಟ್ ಪಾದ್ರೆ ಪಿಯೊ

You cannot copy content of this page