ಕಥೊಲಿಕ್ ಸಭಾ ಬಂಟ್ವಾಳ ವಲಯ ಮುಂದಾಳತ್ವದಲ್ಲಿ ಅಲ್ಪಸಂಖ್ಯಾತರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಶಿಬಿರ
MLC ಐವನ್ ಡಿಸೋಜರವರಿಂದ ಉದ್ಘಾಟನೆ




ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಬಂಟ್ವಾಳ ವಲಯ ಇದರ ಮುಂದಾಳತ್ವದಲ್ಲಿ ದಕ್ಷಿಣ ಕನ್ನಡ ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ನಿಗಮ ಹಾಗೂ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಇದರ ಸಹಯೋಗದೊಂದಿಗೆ ಅಲ್ಪ ಸಂಖ್ಯಾತರಿಗೆ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ಶಿಬಿರವನ್ನು ಇಂದು ಜುಲಾಯಿ 27ರಂದು ಆದಿತ್ಯವಾರ MLC ಐವನ್ ಡಿಸೋಜರವರು ಉದ್ಘಾಟಿಸಿ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಹಾಗೂ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದಿಂದ ಸಿಗುವ ನಮ್ಮ ಸಮುದಾಯದ ಫಲಾನುಭವಿಗಳಿಗೆ ಸರಕಾರ ಕೊಡುವ ಸೌಲಭ್ಯಗಳ ಮಾಹಿತಿಯನ್ನು ಪಡೆದು ಅದನ್ನು ಪಡೆಯಲು ಪ್ರಯತ್ನಿಸಬೇಕು. ಕಥೊಲಿಕ್ ಸಭಾ ಸಂಘಟನೆಯು ಇದರ ಮುಂದಾಳತ್ವವನ್ನು ವಹಿಸಿ ಅಗತ್ಯವಿರುವ ಎಲ್ಲಾ ಫಲಾನುಭವಿಗಳಿಗೆ ಸಿಗುವಂತೆ ಮಾಡಬೇಕೆಂದು ಕರೆ ಕೊಟ್ಟರು.











ಕಾರ್ಯಕ್ರಮಕ್ಕೆ ಆಶೀರ್ವಚನವನ್ನಿತ್ತು ಮಾತನಾಡಿದ ಕಥೊಲಿಕ್ ಸಭಾ ಬಂಟ್ವಾಳ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ಅತೀ ವಂದನೀಯ ಫಾದರ್ ವಿಕ್ಟರ್ ಡಿಸೋಜರವರು ಮಾತನಾಡಿ ಅಲ್ಪಸಂಖ್ಯಾತರಿಗೆ ಸಿಗುವ ಎಲ್ಲಾ ಸವಲತ್ತುಗಳನ್ನು ಅಗತ್ಯ ಇರುವ ಫಲಾನುಭವಿಗಳಿಗೆ ಎಲ್ಲಾ ಚರ್ಚ್ ಹಾಗೂ ವಾಳೆಯ ಮುಖಾಂತರ ದೊರಕಿಸಿ ಕೊಡಬೇಕಾಗಿ ಹೇಳಿದರು. ಮುಖ್ಯ ಅಥಿತಿಯಾಗಿ ಬಾಗವಹಿಸಿದ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಕೇಂದ್ರೀಯ ಅಧ್ಯಕ್ಷ ಸಂತೋಷ್ ಡಿಸೋಜ ಬಜ್ಪೆ ಇವರು ಮಾತನಾಡಿ ಅಲ್ಪಸಂಖ್ಯಾತರಿಗೆ ಸಿಗುವ ಸವಲತ್ತುಗಳನ್ನು ಮತ್ತು ಮಾಹಿತಿ ಶಿಬಿರವನ್ನು ಆಯೋಜಿಸಿದಕ್ಕೆ ಕಥೊಲಿಕ್ ಸಭಾ ಬಂಟ್ವಾಳ ವಲಯ ಅದ್ಯಕ್ಷರಿಗೆ, ಪದಾಧಿಕಾರಿಗಳಿಗೆ ಹಾಗೂ ಎಲ್ಲಾ ಸದಸ್ಯರಿಗೆ ಅಭಿನಂದಿಸಿದರು. ಇನ್ನೋರ್ವ ಮುಖ್ಯ ಅತಿಥಿ ಪಿಯೂಸ್ ಲೆವಿನ್ ರೊಡ್ರಿಗಸ್ ರವರು ಮಾತನಾಡಿ ಕೇವಲ ಅಲ್ಪಸಂಖ್ಯಾತರಿಗೆ ಹಾಗೂ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದಿಂದ ಸಿಗುವ ಮಾಹಿತಿ ನೀಡಿದರೆ ಸಾಕಾಗದು. ನಮ್ಮ ಸಮುದಾಯದಲ್ಲಿ ಕೆಲವು ಜನರು RTC ಹಾಗೂ ಇತರ ಸವಲತ್ತುಗಳನ್ನು ಪಡೆಯಲು ಕಷ್ಟಪಡುತ್ತಿದ್ದಾರೆ. ಅವರಿಗಾಗಿ ಮುಂದಿನ ದಿನಗಳಲ್ಲಿ ಅವರವರ ಕೆಲಸಗಳನ್ನು ಮಾಡಿ ಕೊಡಬೇಕಾಗಿ ಮತ್ತು ಇದರ ಮುಂದಾಳತ್ವವನ್ನು ಕಥೊಲಿಕ್ ಸಭಾ ಸಂಘಟನೆಯು ವಹಿಸಿಕೊಳ್ಳಬೇಕಾಗಿ ವಿನಂತಿಸಿದರು.




ಇನ್ನೋರ್ವ ಅತಿಥಿ ಅರುಣ್ ರೋಶನ್ ಡಿಸೋಜರವರು ಮಾತನಾಡಿ ಮಾಹಿತಿ ಶಿಬಿರವನ್ನು ಆಯೋಜಿಸಿದಕ್ಕಾಗಿ ಕಥೊಲಿಕ್ ಸಭಾ ಬಂಟ್ವಾಳ ವಲಯವನ್ನು ಆಭಿನಂದಿಸಿ ನಮ್ಮ ಸಮುದಾಯವು ಅಲ್ಪಸಂಖ್ಯಾತ ಹಾಗೂ ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯಲು ಮುಂದೆ ಬರುತ್ತಿಲ್ಲ. ಈ ಮಾಹಿತಿ ಶಿಬಿರವು ಅಗತ್ಯವಾಗಿರುತ್ತದೆ ಎಂದು ನುಡಿದರು. ಕಥೊಲಿಕ್ ಸಭಾ ಕೇಂದ್ರೀಯ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ರಾಜಕೀಯ ಸಂಚಾಲಕ ಸ್ಟ್ಯಾನಿ ಲೋಬೊ ಮಾತನಾಡಿ ಅಲ್ಪಸಂಖ್ಯಾತ ಇಲಾಖೆ ಮತ್ತು ನಿಗಮ, ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ ಇದರಿಂದ ಸಿಗುವ ಎಲ್ಲಾ ಸವಲತ್ತುಗಳನ್ನು ಫಲಾನುಭವಿಗಳಿಗೆ ಸಿಗುವ ಹಾಗೆ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ನೇತ್ರತ್ವದಲ್ಲಿ ಇಲ್ಲಿಯವರೆಗೆ ಎರಡು ಸಭೆಗಳನ್ನು ಮಾಡಿ ಕಾರ್ಯಯೋಜನೆಗಳನ್ನು ಸಿದ್ಧಪಡಿಸುತಿದ್ದೇವೆ. ಮುಂದಿನ ದಿನ ದಿನಗಳಲ್ಲಿ ಎಲ್ಲಾ ಘಟಕಗಳು ಹಾಗೂ ಕಥೊಲಿಕ್ ಸಭೆಯ ಸದಸ್ಯರುಗಳು ಮುಂದಾಳತ್ವವನ್ನು ವಹಿಸಿ ನಮ್ಮ ಸಮುದಾಯದ ಜನರಿಗೆ ಸವಲತ್ತುಗಳನ್ನು ಸಿಗುವ ಹಾಗೆ ಹಮ್ಮಿಕೊಳ್ಳಬೇಕಾಗಿ ವಿನಂತಿಸಿದರು.

ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ ಸಿಗುವ ಸವಲತ್ತುಗಳ ಮಾಹಿತಿಯನ್ನು ಜಿಲ್ಲಾ ವ್ಯವಸ್ಥಾಪಕರಾದ ಮಂಜುನಾಥ್ ಆರ್. ರವರು ನೀಡಿದರು. ಅಲ್ಪಸಂಖ್ಯಾತ ನಿಗಮ ಹಾಗೂ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ಜಿಲ್ಲಾ ವ್ಯವಸ್ಥಾಪಕ ಯಶೋಧರ ಜೆ. ಇವರು ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಕಥೊಲಿಕ್ ಸಭಾ ಬಂಟ್ವಾಳ ವಲಯದ ಅಧ್ಯಕ್ಷ ಜೋನ್ ಲಾಸ್ರಾದೊ ಸ್ವಾಗತಿಸಿ, ಕಾರ್ಯದರ್ಶಿ ಆಸ್ಟಿನ್ ಲೋಬೋ ವಂದಿಸಿದರು. ಬಾಂಬಿಲ ಘಟಕದ ಕೆಲ್ವಿನ್ ಫೆರ್ನಾಂಡಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.




