November 5, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಾಸ್ಕ್ ಸೆಂಟಿನರಿ ಟ್ರಸ್ಟ್ (CCT) ಸ್ಕಾಲರ್ ಶಿಪ್ ಪ್ರಶಸ್ತಿಗಳು – 2025

ಸೈಂಟ್ ಆಗ್ನೆಸ್ ಕಾಲೇಜಿನ ಸೆಂಟಿನರಿ ಬ್ಲಾಕ್ ನಲ್ಲಿ, CASK ಸೆಂಟಿನರಿ ಟ್ರಸ್ಟ್ 307 ಯೋಗ್ಯ ವಿದ್ಯಾರ್ಥಿಗಳಿಗೆ 30 ಲಕ್ಷ ರೂಪಾಯಿಗಳಿಗೂ ಹೆಚ್ಚು ಮೊತ್ತದ ಸ್ಕಾಲರ್ ಶಿಪ್ ನೀಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ವಹಿಸಿದ್ದರು. ದಾನಿಯಾದ NRI ಮೈಕಲ್ ಡಿಸೋಜ ಮತ್ತು ಸೈಂಟ್ ಆಗ್ನೆಸ್ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಭಗಿನಿ ವೆನಿಸ್ಸಾ ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು. ಸ್ಕಾಲರ್ ಶಿಪ್ ಪಡೆದ ವಿದ್ಯಾರ್ಥಿಗಳು, ಅವರ ಪೋಷಕರು ಮತ್ತು CASK ಸೆಂಟಿನರಿ ಟ್ರಸ್ಟಿನ ದಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

2014ರಿಂದಲೂ, ಕಾಸ್ಕ್ ಸೆಂಟಿನರಿ ಟ್ರಸ್ಟ್ ಸಹಾನುಭೂತಿಯೊಂದಿಗೆ ಎಲ್ಲರಿಗೂ ಸಹಾಯ ಮಾಡುತ್ತಿದೆ. ವಿಶೇಷವಾಗಿ ಶಿಕ್ಷಣ, ಆರೋಗ್ಯ, ನೆಲೆ, ಸಲಹೆ ಮತ್ತು ಪರಿಸರ ಸಂರಕ್ಷಣೆಯ ಮೂಲಕ ಸಂಕಷ್ಟದಲ್ಲಿರುವ ಮತ್ತು ಸಮಾಜದ ಅಂಚಿನಲ್ಲಿರುವವರಿಗೆ, ಈ ಟ್ರಸ್ಟ್ ಭರವಸೆಯ ದೀಪ ಮತ್ತು ಸಕಾರಾತ್ಮಕ ಬದಲಾವಣೆಯ ಪ್ರೇರಕವಾಗಿ, ಸಮುದಾಯಗಳನ್ನು ಬಲಪಡಿಸಲು ಮತ್ತು ಜನರ ಜೀವನವನ್ನು ಉನ್ನತಗೊಳಿಸಲು ಬಯಸುತ್ತದೆ. CASK ಸೆಂಟಿನರಿ ಟ್ರಸ್ಟ್ ಅದರ ಸಂಸ್ಕೃತ ಧ್ಯೇಯವಾಕ್ಯ “ಜೀವಿತಂ ಪ್ರೇಮಯ” (LIFE FOR LOVE) ಅನ್ನು ಅನುಸರಿಸುತ್ತದೆ. CCT ಸ್ಕಾಲರ್’ಶಿಪ್ ಕಾರ್ಯಕ್ರಮವು ಬಡ ವಿದ್ಯಾರ್ಥಿಗಳಿಗೆ ಪ್ರೀತಿಯ ಕಾರ್ಯವಾಗಿದೆ. ಇದು ಧರ್ಮ, ಭಾಷೆ, ಅಂಕಗಳು ಅಥವಾ ಯೋಗ್ಯತೆಯನ್ನು ಪರಿಗಣಿಸದೆ, ಅರ್ಜಿದಾರರ ಆರ್ಥಿಕ ಸ್ಥಿತಿಯನ್ನು ಮಾತ್ರ ಗಮನದಲ್ಲಿಡುತ್ತದೆ. ಪ್ರಯೋಜನವನ್ನು ಪಡೆದವರಲ್ಲಿ ದಿನಗೂಲಿಗಳು, ರಿಕ್ಷಾ ಚಾಲಕರು ಮತ್ತು ಬೀದಿ ಅಂಗಡಿಗಾರರ ಮಕ್ಕಳು ಸೇರಿದ್ದಾರೆ. ಇದರಲ್ಲಿ ಅನೇಕ ಮಕ್ಕಳು, ತಂದೆ ಅಥವಾ ತಾಯಿಯನ್ನು ಕಳೆದುಕೊಂಡಿದ್ದರೆ, ಅನೇಕ ಪೋಷಕರು ನಿರುದ್ಯೋಗಿಗಳೂ ಆಗಿದ್ದಾರೆ.

CCT ಸ್ಕಾಲರ್’ಶಿಪ್ ಕಾರ್ಯಕ್ರಮವು ಪ್ರಯೋಜನ ಪಡೆದವರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದೆ. ಅವರು ಶ್ರಮಿಸಿ ಉತ್ತಮ ಶಿಕ್ಷಣವನ್ನು ಪಡೆದು, ಒಂದು ದಿನ ತಮ್ಮ ಕುಟುಂಬ, ಸಮುದಾಯ ಮತ್ತು ರಾಷ್ಟ್ರದ ಸೇವೆಯನ್ನು ಹೆಮ್ಮೆಯಿಂದ ನೀಡುವಂತೆ ಮಾಡುತ್ತದೆ. 307 ಪ್ರಯೋಜನಾರ್ಥಿಗಳಲ್ಲಿ 162 ಹುಡುಗಿಯರು ಹಾಗೂ ಸುಮಾರು 40% ವಿದ್ಯಾರ್ಥಿಗಳು ಗ್ರಾಮೀಣ ಪ್ರದೇಶದವರಾಗಿದ್ದಾರೆ. ಈ ವಿದ್ಯಾರ್ಥಿಗಳು 70ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿಗೆ ಸೇರಿದವರಾಗಿದ್ದು, ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳ ಜೊತೆಗೆ ನರ್ಸಿಂಗ್, ಇಂಜಿನಿಯರಿಂಗ್ ಮತ್ತು ಪ್ಯಾರಾ-ಮೆಡಿಕಲ್ ಕೋರ್ಸ್ ಗಳ ವಿದ್ಯಾರ್ಥಿಗಳೂ ಸೇರಿದ್ದಾರೆ.

You may also like

News

ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾ ಕೂಟದಲ್ಲಿ ಎತ್ತರ ಜಿಗಿತದಲ್ಲಿ ಅಶ್ಮಿತಾ ಸುವಾರಿಸ್ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಕಥೊಲಿಕ್ ಸಭಾ ಸೂರಿಕುಮೇರು ಘಟಕದಿಂದ ಅಭಿನಂದನೆ ಸೂರಿಕುಮೇರು ಚರ್ಚ್ ವ್ಯಾಪ್ತಿಯ ಅರುಣ್ ಮತ್ತು ಪ್ರೀತಿ ಸುವಾರಿಸ್ ದಂಪತಿ ಪುತ್ರಿ ಅಶ್ಮಿತಾ ಸುವಾರಿಸ್ ಬಂಟ್ವಾಳ ತಾಲೂಕು ಮಟ್ಟದಲ್ಲಿ ನಡೆದ
News

Bethany Champion Program 2025 – A Celebration of Leadership and Holistic Growth

The Bethany Champion Program was successfully hosted at Saint Raymond’s English Medium School Vamanjoor, on November 4. The event brought

You cannot copy content of this page