June 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಆಧಾರ ರಹಿತ ಆರೋಪಗಳ ಮೇಲೆ ಬಂಧಿಸಿದ ಇಬ್ಬರು ಭಗಿನಿಯರನ್ನು ನಿಶ್ಚರ್ತ್ಯವಾಗಿ ಬಿಡುಗಡೆಗೊಳಿಸಲು AICU ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ಆಗ್ರಹ

ಜುಲಾಯಿ 26ರಂದು ಶನಿವಾರ ನಾರಾಯಣಪುರ ಜಿಲ್ಲೆಯ 18 ರಿಂದ 19 ವರ್ಷದೊಳಗಿನ ಮೂವರು ಯುವತಿಯರೊಂದಿಗೆ ಇಬ್ಬರು ಸನ್ಯಾಸಿನಿಗಳು ಮತ್ತು ಸುಖ್‌ಮಾನ್ ಮಾಂಡವಿ ಎಂಬ ಯುವಕನನ್ನು ದುರ್ಗ್ ರೈಲ್ವೆ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ರಾಯಪುರ ಧರ್ಮಕ್ಷೇತ್ರದ, ಸನ್ಯಾಸಿನಿಗಳು ಆಗ್ರಾದ ಕಾನ್ವೆಂಟ್‌ಗಳಿಗೆ ಮನೆಕೆಲಸಕ್ಕಾಗಿ ಮಹಿಳೆಯರನ್ನು ಕರೆದೊಯ್ಯುತ್ತಿದ್ದರು. 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ₹8,000 ರಿಂದ ₹10,000 ರವರೆಗಿನ ಮಾಸಿಕ ವೇತನದೊಂದಿಗೆ ಅಡುಗೆ ಸಹಾಯಕರಾಗಿ ಕೆಲಸ ನೀಡಲಾಗುತ್ತಿತ್ತು. ಅವರ ಪೋಷಕರಿಂದ ಲಿಖಿತ ಒಪ್ಪಿಗೆ ಪಡೆಯಲಾಗಿತ್ತು. ಇದರ ಹೊರತಾಗಿಯೂ, ಛತ್ತೀಸ್‌ಗಢದ ಬಿಜೆಪಿ ನೇತೃತ್ವದ ಸರ್ಕಾರವು ಕಳ್ಳಸಾಗಣೆ ಮತ್ತು ಮತಾಂತರ ಕಾನೂನುಗಳ ಅಡಿಯಲ್ಲಿ ಬಂಧನಗಳು ಸಮರ್ಥನೀಯವೆಂದು ಸಮರ್ಥಿಸುತ್ತದೆ – ಇದನ್ನು ನಾನು ಖಂಡಿಸುತ್ತೇನೆ. ಅವರನ್ನು ಕೂಡಲೇ ನಿಶ್ಚರ್ತ್ಯವಾಗಿ ಬಿಡುಗಡೆಗೊಳಿಸಬೇಕೆಂದು AICU ರಾಜಾಧ್ಯಕ್ಷ ಆಲ್ವಿನ್ ಡಿಸೋಜ ಪಾನೀರ್ ರವರು ತಿಳಿಸಿದ್ದಾರೆ.

“ನಾನು ಈ ಸುಳ್ಳು ಆರೋಪಗಳನ್ನು ಖಡಾಖಂಡಿತವಾಗಿ ನಿರಾಕರಿಸುತ್ತೇನೆ ಮತ್ತು ಅವು ಆಧಾರರಹಿತ ಮತ್ತು ಅರ್ಹತೆಯಿಲ್ಲದವು ಎಂದು ಪ್ರತಿಪಾದಿಸುತ್ತೇನೆ.  ಆರೋಪಿಗಳನ್ನು ಬೆಂಬಲಿಸಲು ಯಾವುದೇ ವಿಶ್ವಾಸಾರ್ಹ ಪುರಾವೆಗಳಿಲ್ಲ. ಈ ಆರೋಪಗಳನ್ನು ಸಂಪೂರ್ಣವಾಗಿ ತನಿಖೆ ಮಾಡಬೇಕು ಮತ್ತು ಅವುಗಳ ಸತ್ಯದ ಕೊರತೆ ಮತ್ತು ದುರುದ್ದೇಶಪೂರಿತ ಉದ್ದೇಶದಿಂದ ಕೂಡಿದ್ದು ಅವನ್ನು ಕೂಡಲೇ ವಜಾಗೊಳಿಸಬೇಕೆಂದು ನಾನು ಒತ್ತಾಯಿಸುತ್ತೇನೆ.” ಎಂದವರು ಆಗ್ರಹಪೂರಕವಾಗಿ ವಿನಂತಿಸಿದ್ದಾರೆ.

You may also like

News

ಕೋಳಿ ಅಂಕದ ಜೂಜಾಟದ ಅಡ್ಡೆಗೆ ವಿಟ್ಲ ಪೊಲೀಸರ ದಿಢೀರ್ ದಾಳಿ – ಮೂವರ ಬಂಧನ, ಸೊತ್ತುಗಳ ವಶ

ಸಾಲೆತ್ತೂರು ಗ್ರಾಮದ ಸಾರ್ವಜನಿಕ ಗುಡ್ಡ ಪ್ರದೇಶದಲ್ಲಿ ಅಕ್ರಮವಾಗಿ ಹಣ ಪಣವಾಗಿಟ್ಟು ಕೋಳಿ ಅಂಕ ಜೂಜಾಟ ಆಡುತ್ತಿದ್ದ ಜಾಗಕ್ಕೆ ವಿಟ್ಲ ಪೊಲೀಸರು ದಾಳಿ ನಡೆಸಿ, ಮೂವರು ಆರೋಪಿಗಳನ್ನು ಬಂಧಿಸಿರುವ
News

Thousands Gather in Faith and Devotion as Saint Anthony’s Minor Basilica, Dornahalli Celebrates Grand Annual Feast 2026

Amid an atmosphere of deep faith, prayer, and jubilation, thousands of devotees from across Karnataka and neighbouring states converged at

You cannot copy content of this page