August 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಛತ್ತೀಸಗಢದಲ್ಲಿಇಬ್ಬರು ಕ್ರೈಸ್ತಧರ್ಮ ಭಗನಿಯರ ಬಂಧನ – KSMCA ವತಿಯಿಂದ ಅಧ್ಯಕ್ಷರಾದ ಬಿಟ್ಟಿ ನೆಡುನಿಲಂರವರಿಂದ ಖಂಡನೆ

ಛತ್ತೀಸಗಢದಲ್ಲಿ ಇಬ್ಬರು ಧರ್ಮಭಗನಿಯರು ಸೇರಿ ಮೂವರನ್ನು ಸತ್ಯಕ್ಕೆ ದೂರವಾದ ಕಾರಣಗಳನ್ನು ಮುಂದಿಟ್ಟು ಬಂಧಿಸಿ ಜೈಲಿಗೆ ಹಾಕಲಾಗಿದೆ. ಇದು ಅತ್ಯಂತ ಹೀನಾಯ ಕೃತ್ಯವಾಗಿದ್ದು ಸರಕಾರ ಹಾಗೂ ಕೆಲವು ಸಂಘಟನೆಗಳು ಒಟ್ಟು ಸೇರಿ ಭಾರತದ ಸಂವಿಧಾನದಲ್ಲಿ ಹೇಳಿರುವ ಜಾತ್ಯಾತೀತ ಹಾಗೂ ಸಮಾಜವಾದ ಹಕ್ಕುಗಳ ಉಲ್ಲಂಖನೆ ಕೂಡ ಮಾಡಿರುತ್ತದೆ. ಇದು ಭಾರತದ ಪ್ರಜ್ಞಾವಂತ ಜನರು ಒಪ್ಪುವ ಹಾಗಿಲ್ಲ. ಪ್ರಯಾಣಕ್ಕೆ ಬೇಕಾದ ಎಲ್ಲಾ ದಾಖಲೆಗಳು ಅವರ ಪೋಷಕರ ಅನುಮತಿಯೂ ಜೊತೆಯಲ್ಲಿ ಇದ್ದರೂ ಭಾರತದೊಳಗೆ ಪ್ರಯಾಣ ಮಾಡಲು ವಯಸ್ಸಿಗೆ ಬಂದಂತಹ ಪ್ರಜೆಗಳಿಗೆ ಸಾಧ್ಯ ಇಲ್ಲ ಎಂದರೆ ಇದು ಸಂವಿಧಾನದ ಸ್ಪಷ್ಟವಾದ ಉಲ್ಲಂಘನೆ ಕೂಡ ಆಗಿರುತ್ತದೆ. ಈ ಬಗ್ಗೆ KSMCA ಅತ್ಯಂತ ತೀವ್ರವಾದ ಕಳವಳ ವ್ಯಕ್ತಪಡಿಸಿದ್ದು, ಕೂಡಲೆ ಪ್ರಜಾಪ್ರಭುತ್ವ ನೀಡುವ ಹಕ್ಕಿನ ಆಧಾರದಲ್ಲಿ ಇವರನ್ನು ಜೈಲಿನಿಂದ ಹೊರಕಳುಹಿಸಿ ಕಾನೂನು ಬದ್ಧವಾಗಿ ಬದುಕಲು ಎಲ್ಲರಿಗೂ ಇರುವ ಹಕ್ಕನ್ನು ಎತ್ತಿ ಹಿಡಿಯಬೇಕೆಂದು ಒತ್ತಾಯಿಸಿದರು. ಬಿಟ್ಟಿ ನೆಡುನಿಲಂರವರ ಅಧ್ಯಕ್ಷತೆಯಲ್ಲಿ KSMCA ಕೇಂದ್ರ ಸಮಿತಿ ಸಭೆಸೇರಿ ಖಂಡನಾ ನಿರ್ಣಯವನ್ನು ಮಂಡಿಸಲಾಯಿತು.

ನಿರ್ದೇಶಕರಾದ ವಂದನೀಯ ಫಾದರ್ ಆದರ್ಶ್ ಜೋಸೆಫ್, ಪ್ರಧಾನ  ಕಾರ್ಯದರ್ಶಿ ಸೆಬಾಸ್ಟಿಯನ್ ಎಂ,ಜೆ. ಕ್ಯಾಥೋಲಿಕ್ ಕಾಂಗ್ರೆಸ್ ಜಾಗತಿಕ ಸಮಿತಿ ಕಾರ್ಯದರ್ಶಿ ಜೈಸನ್ ಪಟ್ಟೇರಿ ಹಾಗೂ ಕೇಂದ್ರ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು ಎಂದು KSMCA ಅಧ್ಯಕ್ಷರಾದ ಬಿಟ್ಟಿ ನೆಡುನಿಲಂರವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

You may also like

News

ಧರ್ಮಸ್ಥಳದಲ್ಲಿ ‘ಪುನರ್ವಸು’ ಅಂತಾರಾಷ್ಟ್ರೀಯ ಸಮಾವೇಶಕ್ಕೆ ಚಾಲನೆ

ಆಯುರ್ವೇದದಿಂದ ಪಂಚೇಂದ್ರಿಯಗಳ ಬಲವರ್ಧನೆ, ಆರೋಗ್ಯಭಾಗ್ಯ ಸಾಧ್ಯ – ವೈದ್ಯ ಮನೀಷಾ ಕೋಟೆಕಾರ್ ಉಜಿರೆ: ಸಾವಿರಾರು ವರ್ಷಗಳ ಪಾರಂಪರಿಕ ಪರಂಪರೆಯನ್ನು ಹೊಂದಿರುವ ಆಯುರ್ವೇದ ಪದ್ಧತಿಯ ಮೂಲಕ ದೇಹದ ಪಂಚೇಂದ್ರಿಯಗಳನ್ನು
News

ಸಿಬ್ಬಂದಿ ಕೊರತೆ ನೀಗಿಸಲು ಮೆಸ್ಕಾಂಗೆ 395 ಪವರ್‌ಮ್ಯಾನ್‌ಗಳು – ಅಧ್ಯಕ್ಷ ಕೆ. ಹರೀಶ್ ಕುಮಾರ್

ಮಂಗಳೂರು: ವಿದ್ಯುತ್ ಸರಬರಾಜು ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮೆಸ್ಕಾಂ ವ್ಯಾಪ್ತಿಗೆ 395 ಹೊಸ ಪವರ್‌ಮ್ಯಾನ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಮೆಸ್ಕಾಂ ಅಧ್ಯಕ್ಷ ಕೆ.

You cannot copy content of this page