July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬೈಂದೂರಿನಲ್ಲಿ ಎಂ.ಸಿ.ಸಿ. ಬ್ಯಾಂಕಿನ 20ನೇ ಶಾಖೆ ಉದ್ಘಾಟನೆ

ತನ್ನ ಬೆಳವಣಿಗೆಯ ಪಯಣದಲ್ಲಿ ಮಹತ್ವದ ಮೈಲಿಗಲ್ಲನ್ನು ಗುರುತಿಸುವ ಮೂಲಕ, ಎಂ.ಸಿ.ಸಿ. ಬ್ಯಾಂಕ್ ತನ್ನ 20ನೇ ಶಾಖೆಯನ್ನು ಬೈಂದೂರಿನ ಪೆಟ್ರೋಲ್ ಬಂಕ್ ಬಳಿಯ ಮುಖ್ಯ ರಸ್ತೆಯ ದೀಪಾ ಕಾಂಪ್ಲೆಕ್ಸ್ ನ ನೆಲ ಮಹಡಿಯಲ್ಲಿ ಆಗಸ್ಟ್ 3ರಂದು ಆದಿತ್ಯವಾರ  ಉದ್ಘಾಟಿಸಿತು. ಈ ಶಾಖೆಯನ್ನು ಎಂ.ಸಿ.ಸಿ. ಬ್ಯಾಂಕಿನ ಅಧ್ಯಕ್ಷ ‘ಸಹಕಾರ ರತ್ನ’  ಅನಿಲ್ ಲೋಬೊರವರು ಗಣ್ಯ ಅತಿಥಿಗಳು, ಸಮುದಾಯದ ಸದಸ್ಯರು ಮತ್ತು ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟಿಸಿದರು. ಬೈಂದೂರಿನ ಹೋಲಿ ಕ್ರಾಸ್ ಚರ್ಚ್’ನ ಧರ್ಮಗುರುಗಳಾದ ವಂದನೀಯ ಫಾದರ್ ವಿನ್ಸೆಂಟ್ ಕುವೆಲ್ಲೊರವರು ಆಶೀರ್ವದಿಸಿ, ಹೊಸ ಶಾಖೆಯ ಯಶಸ್ಸಿಗೆ ಪ್ರಾರ್ಥನೆ ಸಲ್ಲಿಸಿದರು. ಕೊಲ್ಲೂರಿನ ಶ್ರೀ ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ ಸೇಫ್ ಡೆಪಾಸಿಟ್ ಲಾಕರ್ ಉದ್ಘಾಟಿಸಿದರು ಇ-ಸ್ಟ್ಯಾಂಪಿಂಗ್ ಸೌಲಭ್ಯವನ್ನು ಬೈಂದೂರಿನ ಸೈಂಟ್ ಥಾಮಸ್ ವಸತಿ ಶಾಲೆಯ ಪ್ರಾಂಶುಪಾಲ ವಂದನೀಯ ಫಾದರ್ ಫಿಲಿಪ್ ನೆಲಿವಿಲ್ಲಾ ಉದ್ಘಾಟಿಸಿದರು.

ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ರಾಜು ಪೂಜಾರಿ, ಬೈಂದೂರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯರಾದ ಸದಾಶಿವ ಡಿ. ಪಡುವರಿ, ಶಿರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಕಾಪ್ಸಿನೂರ್ ಮೊಹಮ್ಮದ್, ನಾಡದೋಣಿ ರಾಜ್ಯ ಸಂಘದ ಅಧ್ಯಕ್ಷ ನಾಗೇಶ್ ಖಾರ್ವಿ, ಬೈಂದೂರು ವಕೀಲರ ಸಂಘದ ಅಧ್ಯಕ್ಷ ಮೋಬಿ ಪಿ.ಸಿ. ರವರು ಗೌರವಾನ್ವಿತ ಅತಿಥಿಗಳಾಗಿದ್ದರು. ಬ್ಯಾಂಕಿನ ಅಧ್ಯಕ್ಷ ‘ಸಹಕಾರ ರತ್ನ’ಅನಿಲ್ ಲೋಬೊರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬ್ಯಾಂಕಿನ ಸೇವೆ ಮತ್ತು ಸೌಲಭ್ಯಗಳನ್ನು ಉತ್ತೇಜಿಸಲು ಮತ್ತು ಆಮಂತ್ರಣ ಪತ್ರವನ್ನು ನೀಡಲು ಭೇಟಿ ನೀಡಿದ ಸಂದರ್ಭದಲ್ಲಿ ಸಿಬ್ಬಂದಿಗೆ ನೀಡಿದ ಆತ್ಮೀಯ ಸ್ವಾಗತ, ಸಹಾಯ ಮತ್ತು ಸಹಕಾರಕ್ಕಾಗಿ ಸಂಸ್ಥೆಗಳು ಮತ್ತು ಪ್ರದೇಶದ ಸಾರ್ವಜನಿಕರಿಗೆ ಧನ್ಯವಾದಗಳನ್ನು ಅರ್ಪಿಸಿದರು. ಉದ್ಘಾಟನೆಯಾದ ಒಂದು ವರ್ಷದೊಳಗೆ ಶಾಖೆಯು ರೂಪಾಯಿ 10 ಕೋಟಿ ವಹಿವಾಟು ಸಾಧಿಸಲು ಬೆಂಬಲವನ್ನು ಕೋರಿದರು. ಬೈಂದೂರು ಪ್ರದೇಶದಲ್ಲಿ ಬ್ಯಾಂಕಿನ ಬ್ರಾಂಡ್ ರಾಯಭಾರಿಗಳಾಗುವಂತೆ ಅವರು ಪ್ರೇರೆಪಿಸಿದರು.

ಎಂ.ಸಿ.ಸಿ. ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕಿನ (RBI) ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಠೇವಣಿಗಳು DICGC ವಿಮೆಯಿಂದ ಸುರಕ್ಷಿತಗೊಳ್ಳುತ್ತವೆ. ಬ್ಯಾಂಕಿನ ಆಡಳಿತ ಮಂಡಳಿ ಅಧಿಕಾರ ವಹಿಸಿಕೊಂಡ ನಂತರ ಕೇವಲ ಏಳು ವರ್ಷಗಳಲ್ಲಿ ತನ್ನ ವಹಿವಾಟನ್ನು ಯಶಸ್ವಿಯಾಗಿ ದ್ವಿಗುಣಗೊಳಿಸಿದೆ. ಎಂ.ಸಿ.ಸಿ. ಬ್ಯಾಂಕ್ ಇತರ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳು ಒದಗಿಸುವ ಎಲ್ಲಾ ಸೇವೆಗಳನ್ನು ನೀಡುತ್ತದೆ ಎಂದು ತಿಳಿಸಿದರು. ವಿವಿಧ ಅಡೆತಡೆಗಳು, ಕಷ್ಟಗಳು ಮತ್ತು ಸವಾಲುಗಳ ಹೊರತಾಗಿಯೂ, ಬ್ಯಾಂಕ್ ಸ್ಥಿರವಾದ ವೇಗದಲ್ಲಿ ಬೆಳೆಯುತ್ತಿದೆ. ಇದಕ್ಕೆ ಕಾರಣ ಸಮರ್ಥ ಆಡಳಿತ ಮಂಡಳಿ, ಸಿಬ್ಬಂದಿಯ ಸಮರ್ಪಿತ ಪ್ರಯತ್ನ ಮತ್ತು ಗ್ರಾಹಕರ ಬೆಂಬಲ ಎಂದು ಹೇಳಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಬೈಂದೂರು ಹೋಲಿ ಕ್ರಾಸ್ ಚರ್ಚ್ ಇದರ ಪ್ರಧಾನ ಧರ್ಮಗುರು ವಂದನೀಯ ಫಾದರ್ ವಿನ್ಸೆಂಟ್ ಕುವೆಲ್ಲೊರವರು ಮಾತನಾಡಿ, ಬೈಂದೂರಿನಲ್ಲಿ ಗ್ರಾಹಕ ಸ್ನೇಹಿ ವಾತಾವರಣವನ್ನು ಒದಗಿಸಿದ್ದಕ್ಕಾಗಿ ಆಡಳಿತ ಮಂಡಳಿ ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದರು ಮತ್ತು ಬ್ಯಾಂಕಿನ ಭವಿಷ್ಯದ ಪ್ರಯತ್ನಗಳಿಗೆ ದೇವರ ಆಶೀರ್ವಾದವನ್ನು ಕೋರಿದರು. ಪ್ರಗತಿಪರ ದೃಷ್ಟಿಕೋನ ಹೊಂದಿರುವ ಯುವ ಮತ್ತು ಕ್ರಿಯಾಶೀಲ ಅಧ್ಯಕ್ಷರನ್ನು ಹೊಂದಿರುವ ಎಂ.ಸಿ.ಸಿ. ಬ್ಯಾಂಕನ್ನು “ಸಮಾಜದ ಬ್ಯಾಂಕ್” ಎಂದು ಉಲ್ಲೇಖಿಸಿದರು. ಅತ್ಯುತ್ತಮ ಗ್ರಾಹಕ ಸೇವೆಯನ್ನು ನೀಡುವ ಮೂಲಕ ಎಂ.ಸಿ.ಸಿ. ಬ್ಯಾಂಕನ್ನು ಅತ್ಯುತ್ತಮ ಸಹಕಾರಿ ಬ್ಯಾಂಕ್ ಎಂದೂ ಅವರು ಬಣ್ಣಿಸಿದರು. ಹೆಚ್ಚುವರಿಯಾಗಿ, ಬ್ಯಾಂಕ್ ಸಮಾಜದ ಎಲ್ಲಾ ವರ್ಗಗಳಿಗೆ, ವಿಶೇಷವಾಗಿ ಬಡವರು ಮತ್ತು ದೀನದಲಿತರಿಗೆ ವರದಾನವಾಗಲಿದೆ ಎಂದು ಅವರು ಆಶಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ವಂದನೀಯ ಫಾದರ್ ಫಿಲಿಪ್ ನೆಲಿವಿಲ್ಲಾರವರು ಎಂಸಿಸಿ ಬ್ಯಾಂಕಿನ ಅಸಾಧಾರಣ ಗ್ರಾಹಕ ಸೇವೆಯನ್ನು ಶ್ಲಾಘಿಸಿದರು ಮತ್ತು ಬ್ಯಾಂಕ್ ಕರ್ನಾಟಕದಾದ್ಯಂತ ವಿಸ್ತರಣೆಯಾಗುವುದನ್ನು ಹಾರೈಸಿದರು. ಬ್ಯಾಂಕಿನೊಂದಿಗಿನ ತಮ್ಮ ವೈಯಕ್ತಿಕ ಅನುಭವಗಳನ್ನು ಹಂಚಿಕೊಂಡು ಗ್ರಾಹಕರ ತೃಪ್ತಿಗೆ ಅದರ ಬದ್ಧತೆಯನ್ನು ಶ್ಲಾಘಿಸಿದರು. ಬೈಂದೂರಿನಲ್ಲಿ ಶಾಖೆಯನ್ನು ಸ್ಥಾಪಿಸಿದ್ದಕ್ಕಾಗಿ ಬಾಬು ಶೆಟ್ಟಿ ಎಂಸಿಸಿ ಬ್ಯಾಂಕ್‌ಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಸ್ಥಳೀಯ ನಿವಾಸಿಗಳು ಅದರ ಬೆಳವಣಿಗೆಗೆ ಬೆಂಬಲ ನೀಡುವಂತೆ ಪ್ರೋತ್ಸಾಹಿಸಿದರು. ರಾಜು ಪೂಜಾರಿಯವರು ತಮ್ಮ ಭಾಷಣದಲ್ಲಿ ಬ್ಯಾಂಕನ್ನು ಅಭಿನಂದಿಸಿ ಇನ್ನೂ ಹೆಚ್ಚಿನ ಸಾಧನೆಗಳತ್ತ ಸಿಬ್ಬಂದಿ ಶ್ರದ್ಧೆಯಿಂದ ಕೆಲಸ ಮಾಡುವಂತೆ ಒತ್ತಾಯಿಸಿ ನಿರಂತರ ಬೆಂಬಲದ ಭರವಸೆ ನೀಡಿದರು.

ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಗಳಿಸಿದ ಬೈಂದೂರು ಪ್ರದೇಶದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಬೈಂದೂರು ಶಾಖೆಯಲ್ಲಿ ಖಾತೆಗಳನ್ನು ತೆರೆದ ಗ್ರಾಹಕರನ್ನು ಸನ್ಮಾನಿಸಲಾಯಿತು. ವಿವಿಧ ಸ್ಥಳೀಯ ಸಂಘಗಳ ಪದಾಧಿಕಾರಿಗಳ ಕೊಡುಗೆಯನ್ನು ಗುರುತಿಸಿ, ಅವರನ್ನು ಸನ್ಮಾನಿಸಲಾಯಿತು. ಸಿಎ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ತೇರ್ಗಡೆಯಾದ ಕು. ನಿಕೋಲ ರೋಶನಿ ಡಾಯಸ್ ಇವರನ್ನು ಸನ್ಮಾನಿಸಲಾಯಿತು. ಕಟ್ಟಡದ ಮ್ಹಾಲಿಕರಾದ ಜಗನ್ನಾಥ ಶೆಟ್ಟಿ ಮತ್ತು ಸಿವಿಲ್ ಎಂಜಿನಿಯರ್ ಕಾರ್ತಿಕ್ ಕಿರಣ್ ರವರನ್ನು ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸಲಾಯಿತು. ಬೈಂದೂರು ಶಾಖೆಗೆ ನೇಮಕಗೊಂಡ ಸಿಬ್ಬಂದಿಯನ್ನು ಜನರಲ್ ಮ್ಯಾನೇಜರ್ ಸುನಿಲ್ ಮಿನೆಜಸ್ ಪರಿಚಯಿಸಿದ್ದು ಅಧ್ಯಕ್ಷರು ಕೃತಜ್ಞತೆಯ ಸಂಕೇತವಾಗಿ ಅವರಿಗೆ ಹೂ ಗುಚ್ಛ ನೀಡಿದರು.

ಈ ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಜೆರಾಲ್ಡ್ ಜೂಡ್ ಡಿಸಿಲ್ವಾ ಮತ್ತು ನಿರ್ದೇಶಕರಾದ ಆಂಡ್ರ‍್ಯೂ ಡಿಸೋಜಾ, ಡೇವಿಡ್ ಡಿಸೋಜಾ, ಹೆರಾಲ್ಡ್ ಮೊಂತೇರೊ, ಮೆಲ್ವಿನ್ ವಾಸ್, ಜೆ.ಪಿ. ರೊಡ್ರಿಗಸ್, ರೋಶನ್ ಡಿಸೋಜಾ, ಡಾ| ಜೆರಾಲ್ಡ್ ಪಿಂಟೊ, ವಿನ್ಸೆಂಟ್ ಲಸ್ರಾದೊ, ಸಿ.ಜಿ. ಪಿಂಟೊ, ಸುಶಾಂತ್ ಸಲ್ಡಾನ್ಹಾ, ಅಲ್ವಿನ್ ಪಿ. ಮೊಂತೇರೊ, ಫೆಲಿಕ್ಸ್ ಡಿಕ್ರೂಜ್ ಮತ್ತು ಜನರಲ್ ಮ್ಯಾನೇಜರ್ ಸುನಿಲ್ ಮೆನೆಜಸ್ ಉಪಸ್ಥಿತರಿದ್ದರು. ನಿರ್ದೇಶಕ ಎಲ್ರಾಯ್ ಕಿರಣ್ ಕ್ರಾಸ್ಟೊ ಸ್ವಾಗತಿಸಿದರು. ಬೈಂದೂರು ಶಾಖೆಯ ಹಿರಿಯ ವ್ಯವಸ್ಥಾಪಕ ಸಂದೀಪ್ ಕ್ವಾಡ್ರಸ್ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮವನ್ನು ಸ್ಟೀವನ್ ಕುಲಾಸೊ ಉದ್ಯಾವರ ನಿರೂಪಿಸಿದರು.

You may also like

News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು
News

ದಾರುಸ್ಸಲಾಂ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಮಹಾಸಭೆ – ಭವ್ಯ ಸ್ವಾಗತ ಸಮಿತಿ ರಚನೆ

ಸ್ಥಳೀಯ ಸಂಸ್ಥೆಯಾದ ದಾರುಸ್ಸಲಾಂ ಸೆಂಟರ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಹಾಗೂ ಪ್ರಥಮ ಸನದುದಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೃಹತ್ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವು

You cannot copy content of this page