April 8, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕಲಾಸಾಧನ ಮಂಗಳೂರು ಇದರ ವತಿಯಿಂದ ಆಗಸ್ಟ್ 10ರಂದು ಕಲಾಸಾಧನ ‘ಸ್ವರಧಾರ’ ಸಂಗೀತ ಉತ್ಸವ

ಮಂಗಳೂರು ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿಯವರಿಂದ ಕಾರ್ಯಕ್ರಮದ ಉದ್ಘಾಟನೆ

ಕಲಾಸಾಧನ ಮಂಗಳೂರು ಇದರ ವತಿಯಿಂದ ಸ್ವರಧಾರಾ ಸಂಗೀತ ಉತ್ಸವ ಆಗಸ್ಟ್ 10ರಂದು ಆದಿತ್ಯವಾರ ಸಂಜೆ 5ಗಂಟೆಯಿಂದ ನಗರದ ಓಶಿಯನ್ ಪರ್ಲ್  ಸಭಾಂಗಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿಯವರು ನೆರವೇರಿಸಲಿದ್ದಾರೆ.

ಉತ್ಸವದಲ್ಲಿ ಪ್ರಸಿದ್ಧ ಹಿಂದೂಸ್ತಾನಿ ಗಾಯಕ ಸಂಗೀತ ನಾಟಕ ಅಕಾಡೆಮಿ ನವದೆಹಲಿಯಿಂದ ಭಾರತರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪಂಡಿತ್ ಕುಮಾರ್ ಮರ್ದೂರ್ ಭಾಗವಹಿಸಲಿದ್ದಾರೆ.  ಕುಮಾರ್ ರವರು ಕಿರಾಣಾ, ಗ್ವಾಲಿಯರ್ ಮತ್ತು ಜೈಪುರ ಘರಾಣೆಗಳ ಶೈಲಿಗಳನ್ನು ಬೆರೆಸಿ ತಮ್ಮದೇ ಆದ ಗಾಯನವನ್ನು ರಚಿಸಿ ದೇಶ ವಿದೇಶಗಳಲ್ಲಿ ಖ್ಯಾತಿ ಪಡೆದವರು. ಖ್ಯಾತ ಹಿಂದೂಸ್ತಾನಿ ಗಾಯಕ ಪಂಡಿತ್ ಸೋಮನಾಥ ಮರ್ದೂರರ ಫುತ್ರ.

ಕುಮಾರ್ 2011 ರಿಂದ 2021 ರವರೆಗೆ 10 ವರ್ಷಗಳ ಕಾಲ ಕೋಲ್ಕತ್ತಾದ ಐಟಿಸಿ-ಸಂಗೀತ ಸಂಶೋಧನಾ ಅಕಾಡೆಮಿಯಲ್ಲಿ ಬೋಧನಾ ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು. ಅಮೆರಿಕ ಸಂಯುಕ್ತ ಸಂಸ್ಥಾನ, ಕೆನಡಾ, ಸಿಂಗಾಪುರ, ಬಾಂಗ್ಲಾದೇಶಗಳಲ್ಲಿ  ಕಾರ್ಯಕ್ರಮಗಳನ್ನು ನೀಡಿ ಖ್ಯಾತಿ ಪಡೆದವರು. ಉತ್ಸವದಲ್ಲಿ ಅಕ್ಷಯ ಜೋಶಿ ಧಾರವಾಡ್ ತಬಲಾ ಮತ್ತು ಸತೀಶ್ ಭಟ್ ಹೆಗ್ಗಾರ್ ಹಾರ್ಮೊನಿಯಂ ಸಾಥ್ ನೀಡಲಿದ್ದಾರೆ ಎಂದು ಕಲಾ ಸಾಧನ ಕೇಂದ್ರದ ನಿರ್ದೇಶಕಿ ವಿಭಾ ಶ್ರೀನಿವಾಸ ನಾಯಕ್ ರವರು ಇಂದು ಆಗಸ್ಟ್ 07ರಂದು ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಗೌರವ ಸಲಹೆಗಾರ ಶ್ರೀನಿವಾಸ್ ನಾಯಕ್ ಇಂದಾಜೆ ಉಪಸ್ಥಿತರಿದ್ದರು.

You may also like

News

ಆರಿಫ್ ಹತ್ಯೆ ಪ್ರಕರಣ – ಏಳು ಮಂದಿ ಪ್ರಮುಖ ಆರೋಪಿಗಳ ಬಂಧನ

ಮಂಗಳೂರು ಪೊಲೀಸ್ ಕಮೀಷನರ್ ಅವರಿಂದ ಪತ್ರಿಕಾ ಪ್ರಕಟನೆ ನಗರದ ಆರಿಫ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖಾ ತಂಡವು ಮಹತ್ವದ ಪ್ರಗತಿ ಸಾಧಿಸಿದ್ದು, ಏಳು ಮಂದಿ ಪ್ರಮುಖ ಆರೋಪಿಗಳನ್ನು
News

Mangalore Physiocon 2026 – Pre-Conference Hands-on Workshop at Father Muller College of Physiotherapy

The Pre-conference Hands-on Workshop of Mangalore Physiocon 2026 was successfully conducted by Father Muller College of Physiotherapy in association with

You cannot copy content of this page