November 9, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಧರ್ಮಗುರು ಅತೀ ವಂದನೀಯ ಫಾದರ್ ಎಲೋಶಿಯಸ್ ಡಿಸೋಜ ಇನ್ನಿಲ್ಲ

ಮಂಗಳೂರು ಧರ್ಮಕ್ಷೇತ್ರದಲ್ಲಿ ನೂರು ವರ್ಷ ಜೀವಿಸಿದ ಮೊದಲ ಧರ್ಮಗುರು

ಮಂಗಳೂರು ಧರ್ಮಕ್ಷೇತ್ರದ ಅತ್ಯಂತ ಗೌರವಾನ್ವಿತ ಮತ್ತು ಹಿರಿಯ ಧರ್ಮಗುರುಗಳಲ್ಲಿ ಒಬ್ಬರಾದ ಅತೀ ವಂದನೀಯ ಫಾದರ್ ಎಲೋಶಿಯಸ್ ಡಿಸೋಜರವರು ವಿಧಿವಶರಾಗಿದ್ದಾರೆ. ಅವರು ಇಂದು ಆಗಸ್ಟ್ 7ರಂದು ಗುರುವಾರ ಬೆಳಿಗ್ಗೆ ಜೆಪ್ಪುಸಂತ ಜುಜೆ ವಾಸ್ ಹೋಂನಲ್ಲಿ ತಮ್ಮ 100 ವರ್ಷ 7 ತಿಂಗಳ ಜೀವನವನ್ನು ಕೊನೆಗೊಳಿಸಿದರು. ಅವರ ಅಂತ್ಯಕ್ರಿಯಾ ಪೂಜೆ ಹಾಗೂ ಇತರ ವಿಧಿವಿಧಾನಗಳು ಆಗಸ್ಟ್ 8ರಂದು ಶುಕ್ರವಾರ ಸಂಜೆ 4:00 ಗಂಟೆಗೆ ಮಂಗಳೂರಿನ ವೆಲೆನ್ಸಿಯಾ ಚರ್ಚ್‌ನಲ್ಲಿ ನಡೆಯಲಿದೆ.

ಧರ್ಮಪಥದ 72 ವರ್ಷಗಳ ಸೇವೆ :- ಫಾದರ್ ಅಲೋಶಿಯಸ್ ರವರು 1953ರ ಆಗಸ್ಟ್ 24ರಂದು ಗುರು ದೀಕ್ಷೆ ಸ್ವೀಕರಿಸಿ 72 ವರ್ಷಗಳ ಕಾಲ ಮಂಗಳೂರು ಧರ್ಮಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದರು. 2025ರ ಜನವರಿ 29ರಂದು ಅವರು ತಮ್ಮ ಜೀವನದ ಶತಮಾನೋತ್ಸವವನ್ನು ಉಜ್ವಲವಾಗಿ ಆಚರಿಸಿದರು. ಮಂಗಳೂರು ಧರ್ಮಕ್ಷೇತ್ರದಲ್ಲಿ 100 ವರ್ಷ ಜೀವಿಸಿದ ಮೊದಲ ಧರ್ಮಗುರು ಎಂಬ ಗೌರವವನ್ನು ಅವರು ಪಡೆದರು. ಜೆಪ್ಪುವಿನ ಸೈಂಟ್ ಜೋಸೆಫ್ ಸೆಮಿನೆರಿಯಲ್ಲಿ ವಿಜೃಂಭಣೆಯ ಧನ್ಯವಾದ ಬಲಿಪೂಜೆಯೊಂದಿಗೆ ಈ ವಿಶೇಷ ದಿನವನ್ನು ಆಚರಿಸಲಾಗಿತ್ತು. ನಿವೃತ್ತಿಯ ನಂತರವೂ ಅವರು ಎರಡು ದಶಕಗಳ ಕಾಲ ಇದೇ ಸೆಮಿನರಿಯಲ್ಲಿ ಸೇವೆ ಸಲ್ಲಿಸಿದ್ದರು.

ದರ್ಮನಿಷ್ಠೆ, ಸರಳತೆ ಮತ್ತು ಪ್ರಾರ್ಥನೆಯ ಜೀವನ :- 1925ರ ಜನವರಿ 29ರಂದು ಪುತ್ತೂರಿನಲ್ಲಿ ಮಾರ್ಟಿನ್ ಮತ್ತು ಪಿಯಾದಾದೆ ಡಿಸೋಜ ದಂಪತಿಯ ಮಗನಾಗಿ ಜನಿಸಿದ ಫಾದರ್ ಎಲೋಶಿಯಸ್ ಇವರು ಸರಳ ಜೀವನ, ಶಿಸ್ತಿನ ನಡೆ, ಪ್ರಾರ್ಥನೆ ಮತ್ತು ಧರ್ಮಗುರುತ್ವದ ಕರೆಯ ಪ್ರತಿಗೆ ನಿಷ್ಠೆ ಎಂಬ ಮಾದರಿಯೆಂದೇ ಬಾಳಿದವರು. ಬುದ್ಧಿವಂತಿಕೆ, ಪಾಸ್ಟೊರಲ್ ಉತ್ಸಾಹ ಮತ್ತು ನಾಯಕತ್ವದಲ್ಲಿ ಉತ್ಕೃಷ್ಟ ವ್ಯಕ್ತಿತ್ವ ಹೊಂದಿದ್ದ ಅವರು ಮಂಗಳೂರು ಧರ್ಮಕ್ಷೇತ್ರದಲ್ಲಿ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದರು. ಫಾದರ್ ಅಲೋಶಿಯಸ್ ಡಿಸೋಜರವರ ಜೀವನವು ಇಂದು ಮಂಗಳೂರು ಧರ್ಮಕ್ಷೇತ್ರದ ಎಲ್ಲಾ ಧರ್ಮಗುರುಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಭಕ್ತಾಧಿಗಳಿಗೆ ಪ್ರೇರಣೆಯ ಮೂಲವಾಗಿದೆ.

ಅಂತಿಮ ನಮನ

ಮಂಗಳೂರು ಧರ್ಮಕ್ಷೇತ್ರದ ಹಿರಿಯ ಧರ್ಮಗುರುಗಳಾದ ಅತೀ ವಂದನೀಯ ಫಾದರ್ ಎಲೋಶಿಯಸ್ ಡಿಸೋಜರವರು ಶತಮಾನ ಕಾಲದ ಜೀವನವನ್ನು ಹಿಂದಿಕ್ಕಿ ದೇವರ ಪ್ರೀತಿ ಮತ್ತು ನಿಷ್ಠೆಯ ಸಾಕ್ಷಿಯಾಗಿದ್ದ ಜೀವನವನ್ನು ಅಗಲಿದ್ದಾರೆ. ಧರ್ಮಕ್ಷೇತ್ರವು ಅವರು ಸಲ್ಲಿಸಿದ ಅಮೂಲ್ಯ ಸೇವೆಗೆ ಗೌರವ ನೀಡುತ್ತಾ ಅವರ ಆತ್ಮಕ್ಕೆ ಶಾಂತಿಯನ್ನು ಪ್ರಾರ್ಥಿಸುತ್ತದೆ.

ಧರ್ಮಗುರುಗಳಾಗಿ ಅವರು ತೋರಿದ ಕಾಳಜಿ, ಧರ್ಮನಿಷ್ಠೆ ಮತ್ತು ಮಾನವೀಯ ಮೌಲ್ಯಗಳು ಅನೇಕ ತಲೆಮಾರುಗಳಿಗೆ ಪ್ರೇರಣೆಯಾಗಿವೆ. ಅವರ ದೈವಿಕ ಸೇವೆಯ ಮೂಲಕ ದೇವರು ನಮನೀಯವಾದ ಆಶೀರ್ವಾದಗಳನ್ನು ನಮ್ಮ ಮೇಲೆ ಸುರಿಸಿದ್ದಾರೆ.

“ಓ ಪ್ರಭು, ಅವರಿಗೆ ಶಾಶ್ವತ ವಿಶ್ರಾಂತಿ ದಯಪಾಲಿಸು ಮತ್ತು ನಿತ್ಯಜ್ಯೋತಿ ಅವರು ಮೇಲೆ ಪ್ರಕಾಶಿಸಲಿ.”

ಅವರ ಸ್ಮೃತಿ ಮತ್ತು ಮಾರ್ಗದರ್ಶನ ಎಂದೆಂದಿಗೂ ಜೀವಂತವಾಗಿರಲಿ. ಶತಮಾನ ಜೀವನವನ್ನು ಪೂರೈಸಿದ ಫಾದರ್ ಎಲೋಶಿಯಸ್ ಡಿಸೋಜ ಧರ್ಮಕ್ಷೇತ್ರದ ಆರು ಧರ್ಮಾಧ್ಯಕ್ಷರ ಆಳ್ವಿಕೆಯಲ್ಲಿ ಸೇವೆ ಸಲ್ಲಿಸಿ, ತಾವು ಕೈಗೊಂಡ ಪ್ರತಿಯೊಂದು ಪಾತ್ರದಲ್ಲಿ ಅಳಿಸಲಾಗದ ಗುರುತು ಬರೆದಿದ್ದಾರೆ. ಅವರ ಶಿಷ್ಯರು, ಸಹಯಾಜಕರುಗಳು ಹಾಗೂ ಸರ್ವಸಾಮಾನ್ಯ ಜನತೆ ಅವರನ್ನು ಜ್ಞಾನ, ವಿನಯ ಮತ್ತು ಸಂತೋಷಭರಿತ ವ್ಯಕ್ತಿತ್ವದ ಮಾದರಿಯಾಗಿ ನೆನಪಿಸುತ್ತಿದ್ದಾರೆ.

ಅವರು ಹಲವಾರು ಭಾಷೆಗಳ ಪಂಡಿತರಾಗಿದ್ದು, ಲ್ಯಾಟಿನ್ ಮತ್ತು ಇಂಗ್ಲಿಷ್ ಭಾಷೆಗಳ ಶಿಕ್ಷಕರಾಗಿದ್ದರು. ಪವಿತ್ರ ಕಥೊಲಿಕ್ ಚರ್ಚ್‌ಗೆ ಅಪಾರ ಪ್ರೀತಿಯನ್ನು ಹೊಂದಿದ್ದ ಅವರು ಯುಗಪುರುಷರಂತೆ ಜನರ ಮನಸ್ಸಿನಲ್ಲಿ ಆಳವಾಗಿ ನೆಲೆಸಿದವರಾಗಿದ್ದರು. ಈ ವರ್ಷದ ಆರಂಭದಲ್ಲಿ ಅವರ 100ನೇ ಜನ್ಮದಿನದ ಸಂದರ್ಭದಲ್ಲಿ, ಪೋಪ್ ಫ್ರಾನ್ಸಿಸ್ ರವರು ವಿಶೇಷ ಪಾಪಲ್ ಆಶೀರ್ವಾದವನ್ನು ನೀಡಿ ಗೌರವಿಸಿದರು. ಈ ಆಚರಣೆಯ ಸಂದರ್ಭದಲ್ಲಿ ಮಾತನಾಡಿದ ಅವರು, “ಯಾಜಕನಾಗುವದು ಸ್ವಂತ ಸೇವೆಗೆ ಅಲ್ಲ, ಇತರರ ಸೇವೆಗೆ. ಪ್ರಾರ್ಥನೆ, ಕೆಲಸ ಮತ್ತು ಶಿಸ್ತಿಗೆ ಬದ್ಧತೆ – ಇದು ನನ್ನ ಮಂತ್ರ” ಎಂದರು. ಅವರ ಆದರ್ಶಮಯ ಜೀವನ ಮತ್ತು ಸೇವಾ ಪ್ರೇರಣೆಯು ಇನ್ನೂ ಅನೇಕರನ್ನು ದಿವ್ಯ ಮಾರ್ಗದೀಪವಾಗಿಯೇ ಮುನ್ನಡೆಸಲಿದೆ.

ಫಾದರ್ ಎಲೋಶಿಯಸ್ ಡಿಸೋಜರವರು ಮಂಗಳೂರು ಧರ್ಮಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಳ ವಿವರ:-

  • Assistant Parish Priest at Bejai (1954–1963)
  • Missionary Parish Priest in Arva (1963–1964)
  • Secretary to the Bishop and Curia (1964–1965)
  • Director & Manager of Codialbail Press (1965–1973)
  • Parish Priest & Vicar Forane at Pezar and Kinnigoli (1973–1987)
  • Vicar General of the Diocese (1987–1995)
  • Director of St Antony’s Charitable Institutions, Jeppu (1995–2000)
  • Spiritual Director at St Joseph Seminary, Jeppu (2000–2022)

You may also like

News

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ದಕ್ಷಿಣ ಕನ್ನಡ ಜಿಲ್ಲಾ ಘಟಕದ ಆಡಳಿತ ಮಂಡಳಿ ಚುನಾವಣೆ 2025-28

ನವಂಬರ್ 9ರಂದು ನಾಳೆ ಜಿದ್ದಾಜಿದ್ದಿನ ಹೋರಾಟಕ್ಕೆ ಅಖಾಡ ಸಿದ್ಧ ಘಟಾನುಘಟಿಗಳ ನಡುವೆ ನಡೆಯಲಿದೆ ಫೈಟ್ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.) ದಕ್ಷಿಣ ಕನ್ನಡ ಜಿಲ್ಲಾ ಘಟಕದ
News

ಸೈಂಟ್ ತೆರೆಸಾ ಆಫ್ ಲಿಶುಕ್ಸ್ ರವರ ಸಂತ ಪದವಿಯ ಶತಮಾನೋತ್ಸವ

ನಾಳೆ ನವೆಂಬರ್ 9ರಂದು ಬೆಂದೂರ್ ಚರ್ಚ್ ಇಲ್ಲಿ ದಿವ್ಯ ಬಲಿಪೂಜೆ   ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾರವರ ನೇತೃತ್ವ ಸೈಂಟ್ ತೆರೆಸಾ ಆಫ್

You cannot copy content of this page