ನೀರ್ಮಾರ್ಗ ಚರ್ಚ್ ನಲ್ಲಿ ಸಾಂಪ್ರಾದಾಯಿಕ ಆಹಾರ ಉತ್ಸವ
ಮಹಿಳಾ ಆಯೋಗ ಮತ್ತು ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯ




ಸೈಂಟ್ ಜೋಸೆಫ್ ದಿ ವರ್ಕರ್ ಚರ್ಚ್ ನೀರ್ಮಾರ್ಗದ ಮಹಿಳಾ ಆಯೋಗ ಮತ್ತು ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಡಿ ಆಗಸ್ಟ್ 3ರಂದು ಸಂಜೆ 5:00 ಗಂಟೆಗೆ ಸಾಂಪ್ರಾದಾಯಿಕ ಆಹಾರ ಉತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು.
ಫಿಲೋಮಿನಾ ಸಾಜಿ ಅವರು ಗೌರವಾನ್ವಿತ ಅತಿಥಿಗಳನ್ನು ವೀಳ್ಯದೆಲೆ, ಅಡಿಕೆ ಮತ್ತು ಜಲದೊಂದಿಗೆ ಸ್ವಾಗತಿಸಿದರು. ಚರ್ಚ್ ಧರ್ಮಗುರು ವಂದನೀಯ ಫಾದರ್ ಪಾವ್ಲ್ ಪಿಂಟೊರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಲ್ಲಿ ಮಂಗಳೂರು ಧರ್ಮಕ್ಷೇತ್ರದ ಮಹಿಳಾ ಆಯೋಗದ ಕಾರ್ಯದರ್ಶಿ ಅನಿತಾ ಫ್ರಾಂಕ್, ಸಿಟಿ ವರಾಡೊ ಮಹಿಳಾ ಸಂಘಟನೆಯ ಅಧ್ಯಕ್ಷೆ ಐಡಾ ಸಿಕ್ವೇರಾ, ಸಿಟಿ ವರಾಡೊ ಕಾರ್ಯದರ್ಶಿ ಕ್ಲಾರಾ ಪಿಂಟೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂದೀಪ್ ಮಿಸ್ಕಿತ್, ಕಾರ್ಯದರ್ಶಿ ಹಾಗೂ ಮಹಿಳಾ ಆಯೋಗದ ಮತ್ತು ಮಹಿಳಾ ಸಂಘಟನೆಯ ಅಧ್ಯಕ್ಷೆ ಉಷಾ ಫೆರ್ನಾಂಡಿಸ್, ಆಯೋಗಗಳ ಸಂಯೋಜಕ ಮೌರಿಸ್ ರೇಂಜಲ್, ಹೋಲಿ ಕ್ರಾಸ್ ಕಾನ್ವೆಂಟ್ ಇದರ ಸುಪೀರಿಯರ್ ಸಿಸ್ಟರ್ ಸುಜಾತಾ ಡೆಸಾ, ಕಾರ್ಮೆಲ್ ಆಶ್ರಮದ ಸಿಸ್ಟರ್ ಡೋರಿಸ್ ಎಸಿ ಮತ್ತು ಮಹಿಳಾ ಸಂಘಟನೆಯ ಕಾರ್ಯದರ್ಶಿ ರೇಶ್ಮಾ ಪಿರೇರಾ ಉಪಸ್ಥಿತರಿದ್ದರು. ಅವರೊಂದಿಗೆ ಎರಡೂ ಕಾನ್ವೆಂಟ್‌ಗಳ ಧರ್ಮಭಗಿನಿಯರು, ಮಹಿಳಾ ಆಯೋಗ ಮತ್ತು ಸಂಘಟನೆಯ ಸದಸ್ಯರು ಮತ್ತು ಅವರ ಕುಟುಂಬದ ಸದಸ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದರು.










ಕಾರ್ಯಕ್ರಮವು ಲವೀನಾ ಪೆರಿಸ್ ಮತ್ತು ಅವರ ತಂಡದಿಂದ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು. ಸಿಲ್ವಿಯಾ ಪಿರೇರಾರವರು ನೆರೆದ ಎಲ್ಲಾ ಗಣ್ಯರನ್ನು ಸ್ವಾಗತಿಸಿದರು ಮತ್ತು ಸಂಘಟನೆಯ ಸದಸ್ಯರು ಅವರಿಗೆ ಹೂಗುಚ್ಚಗಳನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮವನ್ನು ಗಣ್ಯರು ಪಿಂಗಾರ ಬಿಡಿಸುವ ಮೂಲಕ ಸಾಂಪ್ರಾದಾಯಿಕ ಮತ್ತು ಸಾಂಕೇತಿಕ ರೀತಿಯಲ್ಲಿ ಉದ್ಘಾಟಿಸಿದರು. ಮುಖ್ಯ ಅತಿಥಿ ಅನಿತಾ ಫ್ರಾಂಕ್ ರವರು ಮಹಿಳೆಯರನ್ನು ಉದ್ದೇಶಿಸಿ, ಬಲಿಷ್ಠರಾಗಿರಿ ಮತ್ತು ಸಮಾಜದಲ್ಲಿ ಅರ್ಥಪೂರ್ಣವಾಗಿ ಜೀವನ ನಡೆಸಿ ಎಂದು ಕರೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷ ವಂದನೀಯ ಫಾದರ್ ಪಾವ್ಲ್ ಪಿಂಟೊರವರು ಈ ಆಚರಣೆ ಕೇವಲ ಒಂದು ಕಾರ್ಯಕ್ರಮವಲ್ಲ, ಮಹಿಳೆಯರನ್ನು ಮತ್ತು ಅವರ ಕುಟುಂಬಗಳನ್ನು ಒಗ್ಗೂಡಿಸುವ ಪ್ರಯತ್ನವಾಗಿದೆ ಎಂದು ಹೇಳಿದರು. ಅವರು ಮಹಿಳೆಯರನ್ನು ತಮ್ಮ ಕುಟುಂಬಗಳಲ್ಲಿ, ಸಮುದಾಯಗಳಲ್ಲಿ ಮತ್ತು ಚರ್ಚ್ ನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಲು ಪ್ರೋತ್ಸಾಹಿಸಿದರು.






ಪ್ರೆಸಿಲ್ಲಾ ಡಿಸೋಜರವರು ನೆರೆದ ಎಲ್ಲರಿಗೂ “ಹೌಸಿ ಹೌಸಿ” ಆಟವನ್ನು ಆಯೋಜಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
















ಜೋಸೆಫಿನ್ ಡಿಸೋಜ ಮತ್ತು ಅವರ ತಂಡವು ಸಾಂಪ್ರಾದಾಯಿಕ ಸುಗ್ಗಿ ಕೊಯ್ಲು ನೃತ್ಯವನ್ನು ಪ್ರದರ್ಶಿಸಿತು. ರೇಶ್ಮಾ ಪಿರೇರಾ ಮತ್ತು ಲವೀನಾ ತಾವ್ರೊ ಇವರು ‘ಇನ್ಶೂರೆನ್ಸ್ ಜೆರಿ’ ಎಂಬ ಹಾಸ್ಯ ನಾಟಕವನ್ನು ಪ್ರದರ್ಶಿಸಿದರು. ಮಹಿಳಾ ಸಂಘಟನೆಯ ಪರವಾಗಿ ಉಷಾ ಫೆರ್ನಾಂಡಿಸ್ ರವರ ನಾಯಕತ್ವದಲ್ಲಿ ಆರ್ಥಿಕ ಸಹಾಯವನ್ನು ಸಂಗ್ರಹಿಸಿ ಲೂರ್ಡ್ಸ್ ವಾಳೆಯ ಅಪಘಾತದಲ್ಲಿ ಎರಡೂ ಕಾಲುಗಳ ಶಸ್ತ್ರ ಚಿಕಿತ್ಸೆಗೆ ಒಳಗೊಂಡ ಆಲೆನ್ ಡಿಸೋಜರವರ ಕುಟುಂಬಕ್ಕೆ ಬೆಂಬಲವಾಗಿ ಚೆಕ್‌ನ್ನು ಹಸ್ತಾಂತರಿಸಲಾಯಿತು. ಇದೇ ಸಂದರ್ಭದಲ್ಲಿ ಮಹಿಳಾ ಸಂಘಟನೆಯ ಧ್ಯೇಯ ಗೀತೆಯನ್ನು ಹಾಡಲಾಯಿತು. ಮೊಲಿ ಸಲ್ಡಾನ್ಹಾರವರು ಧನ್ಯವಾದ ಸಮರ್ಪಿಸಿದರು. ನಮಿತಾ ರೆಬೆಲ್ಲೊರವರು ಕಾರ್ಯಕ್ರಮವನ್ನು ನಿರೂಪಿಸಿದರು. ಮರಿಯಾ ಡೆಕೊರೇಟರ್ಸ್‌ನ ಮಾಲಾಕ ಸುನಿಲ್ ಪಿರೇರಾರವರು ವೇದಿಕೆಯನ್ನು ಅತ್ಯಂತ ಸುಂದರವಾಗಿ ಅಲಂಕರಿಸಿದರು. ಧರ್ಮಗುರುಗಳು ಸಾಂಪ್ರಾದಾಯಿಕ ಮಳೆಗಾಲದ ವಿಶೇಷ ಆಹಾರವನ್ನು ಆಶೀರ್ವದಿಸಿದರು. ಕಾರ್ಯಕ್ರಮವು ಸಂತೋಷದಾಯಕ ಔತಣಕೂಟದೊಂದಿಗೆ ಸಂಪನ್ನಗೊಂಡಿತು.






