ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯ ಬಂಧನ
ನ್ಯಾಯಾಲಯದ ವಾರಂಟ್ ಇದ್ದರೂ ಕೂಡ ಎಲ್ಲರ ಕಣ್ಣು ತಪ್ಪಿಸಿ ಓಡಾಡುತ್ತಿರುವ ರಾಯಚೂರು ಮೂಲದ ಆರೋಪಿಯೊಬ್ಬನನ್ನು 4 ವರ್ಷಗಳ ಬಳಿಕ ಕೊಪ್ಪಳ ಜಿಲ್ಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿದ್ದ ಆರೋಪಿ 35 ವರ್ಷ ಪ್ರಾಯದ ನಾಗರಾಜ್ ನಾರಾಯಣ ನಾಯ್ಕ ನ್ಯಾಯಾಲಯಕ್ಕೆ ಹಾಜರಗಿರಲಿಲ್ಲ, ಈಗ ಕೊನೆಗೆ ಕೊಪ್ಪಳ ಜಿಲ್ಲೆ ಕಾರಟಗಿಯಲ್ಲಿ ಪೊಲೀಸರು ದಸ್ತಗಿರಿ ಮಾಡಿದ್ದಾರೆ.

ಈತನ ವಿರುದ್ಧ ಭಟ್ಕಳ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ 2016ರ ಪ್ರಕರಣ ಸಂಖ್ಯೆ 157/2016 ಅಡಿಯಲ್ಲಿ IPC ಸೆಕ್ಷನ್ 457 ಮತ್ತು 380 ಅನ್ವಯ ಆರೋಪ ದಾಖಲಾಗಿತ್ತು. ಈ ಸಂಬಂಧ ಭಟ್ಕಳ ಜಿ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ CC ನಂ. 237/2019 ಕೇಸ್ ನಡೆಯುತ್ತಿದೆ.
ನಾಗರಾಜ್, ತಂದೆ ನಾರಾಯಣ ನಾಯ್ಕ, ಹಳೆಯ ವಿಳಾಸ: ಬೈಂದೂರು, ಉಡುಪಿ ಜಿಲ್ಲೆ – ಇವನು ಕಳೆದ ನಾಲ್ಕು ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದನು.

Dysp ಮಹೇಶ ಕೆ.ಎಂ. ಮತ್ತು ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ ಅರ್ಜುನ ಲಿಂಗಾರೆಡ್ಡಿ ಇವರ ಮಾರ್ಗದರ್ಶನದಲ್ಲಿ CHC 292 ಲೋಕೇಶ್ ನಾಯ್ಕ ಹಾಗೂ CHC 646 ಅರುಣ್ ನಾಯ್ಕ ಎಂಬವರು ಪರಿಶ್ರಮಪೂರ್ವಕ ತನಿಖೆಯ ಮೂಲಕ ಆಗಸ್ಟ್ 09ರಂದು ಶನಿವಾರ ಕಾರಟಗಿಯಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.




