November 8, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬೆಳ್ತಂಗಡಿಯಲ್ಲಿ “ಧರ್ಮ ವಿಜಯ ಸಮಾವೇಶ”ದ ಸಿದ್ಧತೆ ಬಗ್ಗೆ ಗಣ್ಯರ ಸಮಾಲೋಚನಾ ಸಭೆ

ಸೆಪ್ಟೆಂಬರ್ 5 ಕ್ಕೆ ಧರ್ಮಸ್ಥಳದಲ್ಲಿ ಉಭಯ ಜಿಲ್ಲಾ ಧರ್ಮಕ್ಷೇತ್ರಗಳ ಮುಖ್ಯಸ್ಥರ ಸಮಾವೇಶ

ಧರ್ಮ ನಿಂದನೆ, ಕೋಟ್ಯಾಂತರ ಭಕ್ತರನ್ನು ಹೊಂದಿರುವ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅಪಚಾರ ಹಾಗೂ ಕ್ಷೇತ್ರದ ಧರ್ಮಾಧಿಕಾರಿ ಮತ್ತು ಅವರ ಕುಟುಂಬವರ್ಗದವರ ಮೇಲೆ ವಿನಾಕಾರಣ ಆರೋಪ ಎಸಗುತ್ತಿರುವ ಶಕ್ತಿಗಳ ಷಡ್ಯಂತ್ರವನ್ನು ಮಟ್ಟ ಹಾಕಿ ಅದಕ್ಕೆ ಕಾರಣಕರ್ತರಾಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸೆಪ್ಟೆಂಬರ್ ಮೊದಲ ವಾರದಲ್ಲಿ ತಾಲೂಕಿನಲ್ಲಿ ಬೃಹತ್ “ಧರ್ಮ ವಿಜಯ ಸಮಾವೇಶ” ಹಮ್ಮಿಕೊಳ್ಳುವುದೆಂದು ತೀರ್ಮಾನಿಸಲಾಯಿತು. ಆಗಸ್ಟ್ 25ರಂದು ಬೆಳ್ತಂಗಡಿ ಪಿನಾಕಿ ಸಭಾಂಗಣದಲ್ಲಿ ಸೇರಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಭಕ್ತರು ಹಾಗೂ ಹೆಗ್ಗಡೆಯವರ ಅಭಿಮಾನಿಗಳ ಸಮಾಲೋಚನಾ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಯಿತು.

ಹೋರಾಟ ಸಮಿತಿ ಪ್ರಧಾನ ಸಂಚಾಲಕ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಪೂರನ್ ಯಶೋವರ್ಮ, ಉಜಿರೆಯ ಉದ್ಯಮಿ ರಾಜೇಶ ಪೈ, ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಇವರು ಮಾಹಿತಿ ನೀಡಿ ಅತೀ ಹೆಚ್ಚು ಸಂಖ್ಯೆಯಲ್ಲಿ ಜನ ತೊಡಗಿಸಿಕೊಳ್ಳುವಂತೆ ವಿನಂತಿಸಿದರು. ಸಮಾವೇಶ ಸ್ಥಳ, ದಿನಾಂಕ ಹಾಗೂ ರೂಪುರೇಷೆಗಳ‌ ಬಗ್ಗೆ ಮುಂದಿನ‌ದಿನಗಳಲ್ಲಿ ಅದಕ್ಕಾಗಿ ರಚಿಸಿದ ಸಂಚಾಲನಾ ಸಮಿತಿ ಅಂತಿಮ ಮಾಹಿತಿ ನೀಡಲಿದೆ. ಅದಕ್ಕಾಗಿ ಗ್ರಾಮಾಭಿವೃದ್ದಿ ಯೋಜನೆಯ ತಾಲೂಕಿನ 19 ವಲಯಗಳಿಂದ ಓರ್ವೊರ್ವ ಸಹ ಸಂಚಾಲಕರುಗಳಾನ್ನು ಆರಿಸಿ ಸಮಿತಿ ಅಂತಿಮ ಗೊಳಿಸಲಾಯಿತು. ಅತೀ ಗಣ್ಯರನ್ನು ಒಳಗೊಂಡ ಕೋರ್ ಕಮಿಟಿಯನ್ನೂ ರಚಿಸಲಾಯಿತು. ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ವಸಂತ ಸಾಲಿಯಾನ್ ಕಾಪಿನಡ್ಕ ಸೇರಿದಂತೆ ಹತ್ತು ಹಲವು ಕ್ಷೇತ್ರದ ಗಣ್ಯರುಗಳು ಉಪಸ್ಥಿತರಿದ್ದರು. ಡಾ. ಎಂ.ಪಿ ಶ್ರೀನಾಥ್ ಸ್ವಾಗತಿಸಿದರು.ಕೃಷಿ ಅಧಿಕಾರಿ ರಾಮ್ ಕುಮಾರ್‌ ವಂದಿಸಿದರು.

ಸೆಪ್ಟೆಂಬರ್ 5 ಕ್ಕೆ ಧರ್ಮಸ್ಥಳದಲ್ಲಿ ಉಡುಪಿ -ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಧಾರ್ಮಿಕ ಸಂಸ್ಥೆಗಳ ಮುಕ್ತೇಸರರ ಬೃಹತ್ ಸಮಾವೇಶ

ಸೆಪ್ಟೆಂಬರ್ 5ರಂದು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ಎಲ್ಲಾ ಧರ್ಮ ಕ್ಷೇತ್ರಗಳ ಮುಖ್ಯಸ್ಥರ ಸಮಾವೇಶ ಧರ್ಮಸ್ಥಳದಲ್ಲಿ ನಡೆಸಲಾಗುವುದು ಎಂದು ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ ಕುಮಾರ್ ನಡಕರ ಮತ್ತು ಪೂರನ್ ಯಶೋವರ್ಮ ಪ್ರಕಟಿಸಿದರು. ಡಾ. ಮೋಹನ ಆಳ್ವರವರ ಮುಂದಾಳತ್ವದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸರಕಾರಿ ನೊಂದಾಯಿತ 1300 ರಷ್ಟು ದೇವಸ್ಥಾನ, ಸ್ವತಂತ್ರ ಆಡಳಿತ ದಲ್ಲಿರುವ ದೇವಸ್ಥಾನಗಳು ಹಾಗೂ ದೈವಸ್ಥಾನ, ಬಸದಿ ಇತ್ಯಾಧಿ ಸೇರಿ ಒಟ್ಟು 3 ಸಾವಿರ ದಷ್ಟು ಶ್ರದ್ಧಾ ಕೇಂದ್ರಗಳ ಮುಕ್ತೇಸರರು ಹಾಗೂ ಆಡಳಿತ ಮಂಡಳಿ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಧರ್ಮಸ್ಥಳದ‌ ಅಮೃತವರ್ಷಿಣಿ ಸಭಾಂಗಣದಲ್ಲಿ ಸುಮಾರ್ 5 ಸಾವಿರ ಮಂದಿ ಸೇರುವ ಬಗ್ಗೆ ಸಿದ್ಧತೆ ನಡೆಸಲಾಗಿದೆ. ಧರ್ಮಕ್ಷೇತ್ರಗಳ‌ ಮೇಲಿನ ಅಪಪ್ರಚಾರದ ಬಗ್ಗೆ ಈ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ. ‌ಇದು ಧಾರ್ಮಿಕ ಕ್ಷೇತ್ರಗಳ ಮುಖ್ಯಸ್ಥರೇ ಇಷ್ಟೊಂದು ಪ್ರಮಾಣದಲ್ಲಿ ಜಮಾಯಿಸುವ ಮೊದಲ ಸಭೆಯೂ ಆಗಿದೆ ಎಂದರು. ಆರಂಭದಲ್ಲಿ ಸೇರುವ ಮುಖ್ಯಸ್ಥರುಗಳು ಧರ್ಮಸ್ಥಳ ದೇವರ ಮುಂದೆ ಪ್ರಾರ್ಥನೆ ಸಲ್ಲಿಸಿ, ಅಲ್ಲಿಂದ ಮೆರವಣಿಗೆ ಮೂಲಕ ಸಭಾಂಗಣಕ್ಕೆ ಆಗಮಿಸಲಿದ್ದಾರೆ. ಅಲ್ಲಿ ಆಯ್ದ 100 ಮಂದಿ ಗಣ್ಯರು ವೇದಿಕೆಯಲ್ಲಿರುತ್ತಾರೆ. ಧರ್ಮಾಧಿಕಾರಿ ಡಾ. ಹೆಗ್ಗಡೆಯವರು ಈ ಸಭೆಯಲ್ಲಿ ಸಂದೇಶ ನೀಡಲಿದ್ದಾರೆ ಎಂದರು.

You may also like

News

ಮಾಣಿ ಗ್ರಾಮದಲ್ಲಿ ಹಳೆ ಮನೆ ದುರಸ್ತಿ ಪರವಾನಗಿ ಪಡೆದು ಸರಕಾರಿ ಜಮೀನಿನ ಮೇಲೆ ಅಕ್ರಮವಾಗಿ ನಿರ್ಮಿಸಿದ ಐಶಾರಾಮಿ ಬಂಗ್ಲೆ

ಯಾವುದೇ ದಾಖಲೆಗಳಿಲ್ಲದೆ ಸರಕಾರಕ್ಕೆ ವಂಚನೆ ಮಾಡಿದ್ದನ್ನು ಬಯಲಿಗೆಳೆದ ಸಾಮಾಜಿಕ ಕಾರ್ಯಕರ್ತ ಅತಿಕ್ರಮಿತ ಕಟ್ಟಡ ಕೂಡಲೇ ತೆರವುಗೊಳಿಸಲು ಲೂಸಿಯಾ ಮೆಟಿಲ್ಡಾ ಪಿಂಟೊರವರಿಗೆ ಬಂಟ್ವಾಳ ತಹಶೀಲ್ದಾರ್ ನೋಟಿಸ್ ಜಾರಿ ಮಾಣಿ
News

ನಕಲಿ ದಾಖಲೆ ಪ್ರಕರಣದಲ್ಲಿ ಆರೋಪಿ ಅಬ್ದುಲ್ ಹಾಶೀಮ್ ಬಂಧನ

ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯವನ್ನು ವಂಚಿಸಿದ ಭೂಪ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ 34 ವರ್ಷ ಪ್ರಾಯದ ಅಬ್ದುಲ್ ಹಾಶೀಮ್  ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ನವೆಂಬರ್ 6ರಂದು

You cannot copy content of this page