ಕುಳೂರು ಅಪಘಾತ – ಮೃತ್ಯುಕೂಪವಾದ ಹೆದ್ದಾರಿ, ಮೃತಪಟ್ಟ ಸ್ಕೂಟರ್ ಚಾಲಕಿ
ಗುಂಡಿ ಮುಚ್ಚದ ಹೆದ್ದಾರಿ ಅಧಿಕಾರಿಗಳ ವಿರುದ್ದ ಎಫ್ಐಆರ್

ಕುಳೂರಿನಲ್ಲಿ ನಡೆದ ಭೀಕರ ಅಪಘಾತದಲ್ಲಿ ಸ್ಕೂಟರ್ ಚಾಲಕಿ 44 ವರ್ಷ ಪ್ರಾಯದ ಮಾಧವಿ ಎನ್ನುವರು ಮೃತಪಟ್ಟಿದ್ದಾರೆ. ಇಂದು ಸೆಪ್ಟೆಂಬರ್ 9ರಂದು ಮಂಗಳವಾರ ಬೆಳಿಗ್ಗೆ ಸುಮಾರು 8:30ರ ಹೊತ್ತಿಗೆ ಕುಂಟಿಕಾನ ಕಡೆಗೆ ಸಾಗುತ್ತಿದ್ದ ಮಾಧವಿಯವರು ಕೂಳೂರಿನ ರಾಯಲ್ ಓಕ್ ಮುಂಭಾಗ ಹೆದ್ದಾರಿಯಲ್ಲಿದ್ದ ದೊಡ್ಡ ಗುಂಡಿಯಿಂದಾಗಿ ಬಿದ್ದಿದ್ದಾರೆ. ಈ ವೇಳೆ ಹಿಂಬದಿಯಿಂದ ಬಂದ ಲಾರಿಯು ಅವರ ಮೇಲೆ ಹರಿದ ಪರಿಣಾಮ ಗಂಭೀರ ಗಾಯಗೊಂಡು ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಅಪಘಾತಕ್ಕೆ ಕಾರಣವಾಗಿರುವುದಾಗಿ ಲಾರಿ ಚಾಲಕ ಮೊಹಮ್ಮದ್ ಫಾರೂಕ್ ರವರ ನಿರ್ಲಕ್ಷ್ಯ ಚಾಲನೆ ಮತ್ತು ಗುಂಡಿಗಳನ್ನು ಮುಚ್ಚದೇ ನಿರ್ವಹಣಾ ನಿರ್ಲಕ್ಷ್ಯ ತೋರಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ವಿರುದ್ಧ ಮಂಗಳೂರು ಸಂಚಾರ ಉತ್ತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.224/2025ರಡಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು 281, 106(1) ಬಿ.ಎನ್.ಎಸ್. ಹಾಗೂ 198(ಎ) ಐಎಂವಿ ಕಾಯ್ದೆಯಡಿ ದಾಖಲಿಸಲಾಗಿದೆ.


ಮೃತ್ಯುಕೂಪವಾದ ಹೆದ್ದಾರಿ. ಅಮಾಯಕ ಜೀವವನ್ನು ಬಲಿ ಪಡೆದ, ರಾಷ್ಟ್ರೀಯ ಹೆದ್ದಾರಿ ಗುಂಡಿ. ಅಪಘಾತ ನಡೆದ ಕೆಲವೇ ಘಂಟೆಗಳ ಬಳಿಕ ರಸ್ತೆಗೆ ತೇಪೆ ಕಾಮಗಾರಿ
ರಸ್ತೆಹೊಂಡಗಳಿಂದ ಅಪಘಾತಕ್ಕೆ ಕೊನೆಯೇ ಇಲ್ಲ. ಸಾರ್ವಜನಿಕರಿಂದ ಹಿಡಿಶಾಪ. ಹೆದ್ದಾರಿಯಲ್ಲಿರುವ ಅಪಾಯಕಾರಿ ಗುಂಡಿಗಳನ್ನು ಕಾಲಕಾಲಕ್ಕೆ ರಿಪೇರಿ ಮಾಡುವಲ್ಲಿ ಏಕೆ ನಿರ್ಲಕ್ಷ್ಯ ತೋರಲಾಗಿದೆ? ಅಪಘಾತಗಳಿಗೆ ಕಾರಣವಾಗುತ್ತಿರುವ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳುವುದನ್ನು ಏಕೆ ವಿಳಂಬ ಮಾಡಲಾಗುತ್ತಿದೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಇಂತಹ ನಿರ್ಲಕ್ಷ್ಯವು ಮತ್ತೆ ಮತ್ತೆ ಜನರ ಜೀವ ಕಸಿದುಕೊಳ್ಳುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.




