November 8, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ರೋಹನ್ ಕಾರ್ಪೊರೇಷನ್ ವತಿಯಿಂದ ಮಂಗಳೂರಿನಲ್ಲಿ ಅನಾವರಣಗೊಳ್ಳಲಿದೆ ಭಾರತದ ಮೊಟ್ಟ ಮೊದಲ ಸಂಪೂರ್ಣ ಬೀಚ್‌ ಫೇಸಿಂಗ್ ಐಷಾರಾಮಿ ಮನೆಗಳ ಯೋಜನೆ – “ರೋಹನ್ ಮರೀನಾ ಒನ್”  

ಮೂರು ದಶಕಗಳ ಅನುಭವ ಹೊಂದಿರುವ ಭಾರತದ ಅತ್ಯಂತ ವಿಶ್ವಾಸಾರ್ಹ ರಿಯಲ್ ಎಸ್ಟೇಟ್ ಡೆವಲಪರ್‌ಗಳಲ್ಲಿ ಒಂದಾದ ಮಂಗಳೂರಿನ ರೋಹನ್ ಕಾರ್ಪೊರೇಷನ್, ತನ್ನ ಮಹತ್ವಾಕಾಂಕ್ಷಿ ಯೋಜನೆ – ‘ರೋಹನ್ ಮರೀನಾ ಒನ್’ ಅನ್ನು ಹೆಮ್ಮೆಯಿಂದ ಪರಿಚಯಿಸುತ್ತಿದೆ. ಭಾರತದ ರಿಯಲ್‌ ಎಸ್ಟೇಟ್‌ ಇತಿಹಾಸದಲ್ಲೇ ಒಂದು ವಿನೂತನ ಪ್ರಯೋಗವಾಗಿರುವ ರೋಹನ್ ಮರೀನಾ ಒನ್, ಅರಬ್ಬಿ ಸಮುದ್ರದ ಸುಂದರ ಕಡಲತೀರದ ದೃಶ್ಯವು ಪ್ರತಿಯೊಂದು ಅಪಾರ್ಟ್‌ಮೆಂಟ್ಗೂ ಕಾಣಿಸುವಂತೆ ಇರುವ ಉತ್ಕೃಷ್ಟ ವಸತಿ ಯೋಜನೆಯಾಗಿದೆ.

ಮಂಗಳೂರಿನ ಸುರತ್ಕಲ್‌ NITK ಬೀಚ್ ರಸ್ತೆಯಲ್ಲಿರುವ ರೋಹನ್ ಮರೀನಾ ಒನ್, ಒಟ್ಟು 8.2 ಎಕರೆ ವಿಸ್ತರಿಸಿದ್ದು ಮತ್ತು ಕಡಲ ತೀರದಲ್ಲಿ ಐಷಾರಾಮಿ ಜೀವನಶೈಲಿಯನ್ನು ನೀಡಬಲ್ಲ 433 ಅಲ್ಟ್ರಾ-ಲಕ್ಷುರಿ ಅಪಾರ್ಟ್ಮೆಂಟ್‌ ಗಳನ್ನು ಹೊಂದಿದೆ. ಈ ಯೋಜನೆಯಲ್ಲಿ, 39 ಮಹಡಿಗಳಿರುವ ದಿ ರಿಟ್ರೀಟ್ ಮತ್ತು 47 ಮಹಡಿಗಳಿರುವ ದಿ ರಿಸಾರ್ಟ್ ಎಂಬ ಎರಡು ಟವರ್ ಗಳಿದ್ದು, ರೋಹನ್ ಮರೀನಾ ಒನ್ ಅನ್ನು ಭಾರತದ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೇ ಹೊಸ ಮೈಲಿಗಲ್ಲಾಗಿ ನಿಲ್ಲುವಂತೆ ಮಾಡಿದೆ.

ಕರಾವಳಿ ಜೀವನಶೈಲಿಯಲ್ಲೇ ಹೊಸ ಅಧ್ಯಾಯ:

ರೋಹನ್ ಮರೀನಾ ಒನ್ ನಲ್ಲಿ ಭಾರತದಲ್ಲೇ ಮೊದಲ ಬಾರಿಗೆ, ಮನೆಮಾಲೀಕರೆಲ್ಲರೂ ಪ್ರತಿ ಮನೆಯಿಂದಲೂ ಸಾಗರದ ದೃಶ್ಯಗಳನ್ನು ಆಸ್ವಾದಿಸುವಂಥ ಐಷಾರಾಮಿ ಜೀವನವನ್ನು ಪಡೆಯಬಹುದಾಗಿದೆ. ಮನೆಗಳ ಒಳಭಾಗದ ವಿನ್ಯಾಸವೂ ಸಮುದ್ರದ ಸೌಂದರ್ಯಕ್ಕೆ ಕನ್ನಡಿ ಹಿಡಿದಂತೆ ರಚಿಸಲಾಗಿದೆ.

ರೋಹನ್ ಮರೀನಾ ಒನ್ ಎರಡು ಎತ್ತರದ ಟವರ್ಗಳನ್ನು ಹೊಂದಿದೆ:

  • ದಿ ರಿಟ್ರೀಟ್: 39 ಮಹಡಿಗಳ ಈ ಟವರ್‌ ನಲ್ಲಿ 2, 3 ಮತ್ತು 4 BHK ಅಪಾರ್ಟ್ಮೆಂಟ್ ಗಳಿವೆ. ಪ್ರತಿಯೊಂದು ಮನೆಯನ್ನು ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ ರೂಪಿಸಿದ್ದು, ಇಲ್ಲಿನ ನಿವಾಸಿಗಳಿಗೆ ಐಷಾರಾಮಿ ಮತ್ತು ಆರೋಗ್ಯಕರ ಜೀವನಶೈಲಿಯನ್ನು ನೀಡುತ್ತದೆ. ವಿಶಾಲ ಕಿಟಕಿಗಳು ಮತ್ತು ಬಾಲ್ಕನಿಗಳಿಂದ ಸಮುದ್ರದ ಪ್ರಶಾಂತ ಅಲೆಗಳ ದೃಶ್ಯವನ್ನು ದಿನವಿಡೀ ಆನಂದಿಸುವ ಅವಕಾಶ ದೊರೆಯುತ್ತದೆ. ಮೇಲ್ಮಹಡಿಯಲ್ಲಿರುವ ವಿಶಿಷ್ಟ ಇನ್ಫಿನಿಟಿ-ಎಡ್ಜ್ ಸ್ವಿಮ್ಮಿಂಗ್‌ ಪೂಲ್ ವಿಶ್ರಾಂತಿಯ ಅನುಭವವನ್ನು ಇಮ್ಮಡಿಗೊಳಿಸುತ್ತದೆ.
  • ದಿ ರಿಸಾರ್ಟ್: 47 ಮಹಡಿಗಳ ಈ ಗೋಪುರ, ಭಾರತದ ಅತ್ಯಂತ ಐಷಾರಾಮಿ ಟವರ್‌ಗಳಲ್ಲಿ ಒಂದಾಗಿದೆ. ಇಲ್ಲಿ 2 ಮತ್ತು 3 BHKಯ ವಿಶಾಲವಾದ ನಿವಾಸಗಳ ಜೊತೆಗೆ, ಆಕರ್ಷಕ ವಾಣಿಜ್ಯ ಅವಕಾಶಗಳೂ ಲಭ್ಯವಿದೆ. ದಿ ರಿಸಾರ್ಟ್, ಉತ್ತಮ ಜೀವನಶೈಲಿಯೊಂದಿಗೆ ಸುರಕ್ಷಿತ ಹೂಡಿಕೆ ಅವಕಾಶವನ್ನೂ ಒದಗಿಸುತ್ತದೆ. ಅತ್ಯುತ್ತಮ ಸೌಲಭ್ಯಗಳು, ಪ್ರೀಮಿಯಂ ಅನುಭವ ಮತ್ತು ಲಾಭದಾಯಕ ಪ್ರಯೋಜನಗಳೊಂದಿಗೆ ಇದು ಅತ್ಯುನ್ನತ ಐಷಾರಾಮಿ ಜೀವನವನ್ನು ಖಚಿತಪಡಿಸುತ್ತದೆ.

ವಿಶ್ವ ದರ್ಜೆಯ ಸೌಲಭ್ಯಗಳೊಂದಿಗೆ ಅಲ್ಟ್ರಾ ಲಕ್ಷುರಿ ಜೀವನ

ರೋಹನ್ ಮರೀನಾ ಒನ್ ಕೇವಲ ಸಮುದ್ರದ ನೋಟ ಮತ್ತು ಐಷಾರಾಮಿ ಬದುಕನ್ನಷ್ಟೇ ಖಾತರಿಪಡಿಸುವುದಲ್ಲದೆ, ದಿನನಿತ್ಯದ ಜೀವನವನ್ನು ಒಂದು ಸುಂದರ ಅನುಭವವಾಗಿಸುವುದಕ್ಕಾಗಿ 83 ಉತ್ಕೃಷ್ಟ ಗುಣಮಟ್ಟದ ಸೌಲಭ್ಯಗಳನ್ನು ನೀಡುತ್ತದೆ.

ಮನರಂಜನೆ: ಆಕಾಶದೆತ್ತರದ ಬ್ಯಾಂಕ್ವೆಟ್ ಹಾಲ್‌ಗಳು, ಪಾರ್ಟಿ ಲೌಂಜ್‌ಗಳು, ಡಿಸ್ಕೊಥೆಕ್, ಫೈನ್-ಡೈನಿಂಗ್ ರೆಸ್ಟೋರೆಂಟ್‌ಗಳು, ಕಾಫೆ ಹಾಗೂ ಬಿಬಿಕ್ಯೂ ಡೆಕ್ ಹಾಗೂ ಇನ್ನೂ ಹೆಚ್ಚಿನದು. ಇನ್ಫಿನಿಟಿ ಎಡ್ಜ್ ಸ್ವಿಮ್ಮಿಂಗ್ ಪೂಲ್, ಜೊತೆಗೆ ಒಲಿಂಪಿಕ್ ಗಾತ್ರದ ಈಜುಕೊಳ, ವಾಟರ್ ಜೆಟ್, ಬಬಲ್ ಜೆಟ್‌ಗಳು ಮತ್ತು ವಿಶಿಷ್ಟವಾದ ತೇಲುವ ಪೆವಿಲಿಯನ್ ನಿಮ್ಮ ಅನುಭವವನ್ನು ರಿಸಾರ್ಟ್‌ನಂತೆ ಮಾಡುತ್ತದೆ.

ಕ್ರೀಡೆ ಮತ್ತು ಫಿಟ್ನೆಸ್: ಬ್ಯಾಡ್ಮಿಂಟನ್, ಸ್ಕ್ವಾಶ್ ಮತ್ತು ಟೆನಿಸ್ ಕೋರ್ಟ್‌ಗಳು, ವಿಶ್ವದರ್ಜೆಯ ಫಿಟ್ನೆಸ್ ಸೆಂಟರ್, ಮಿನಿ ಸಾಕರ್ ಮೈದಾನ ಮತ್ತು ಜಾಗಿಂಗ್ ಟ್ರ್ಯಾಕ್‌ಗಳು ಪ್ರತಿಯೊಬ್ಬ ಫಿಟ್ನೆಸ್ ಪ್ರಿಯರ ಅಗತ್ಯವನ್ನು ಪೂರೈಸುತ್ತದೆ. ಮಾತ್ರವಲ್ಲದೆ ಯೋಗ ಡೆಕ್‌ಗಳು, ಧ್ಯಾನ ಕೊಠಡಿಗಳು, ಪ್ರತ್ಯೇಕ ಪುರುಷ ಮತ್ತು ಮಹಿಳಾ ಸ್ಪಾಗಳು ಇಲ್ಲಿವೆ.

ಕುಟುಂಬಗಳಿಗಾಗಿ: ಮಕ್ಕಳ ಆಟದ ವಲಯಗಳು, ಪೆಟ್ಸ್ ಪಾರ್ಕ್, ವಿಡಿಯೋ ಗೇಮ್ ರೂಂ, ಪಿಕ್ನಿಕ್ ಲಾನ್ಸ್, ವೀಕ್ಷಣಾ ಡೆಕ್‌ಗಳು, ಎಂಟರ್‌ಟೈನ್‌ಮೆಂಟ್ ಡೆಕ್‌ಗಳು, ಡೋಮ್ ಪೆವಿಲಿಯನ್‌ಗಳು, ಪಾರ್ಟಿ ಲಾನ್ಸ್, ಗ್ಲಾಸ್‌ಹೌಸ್ ಇತ್ಯಾದಿಗಳು ಅವಿಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಲು ಪರಿಪೂರ್ಣ ವಾತಾವರಣವನ್ನು ಒದಗಿಸುತ್ತವೆ.

“ಐಷಾರಾಮಿ ಜೀವನಶೈಲಿಯೊಂದಿಗೆ, ಕಡಲತೀರದ ಪ್ರಶಾಂತತೆ ಮತ್ತು ವಿಶ್ವದರ್ಜೆಯ ಸವಲತ್ತುಗಳ ಸಮ್ಮಿಲನವಾಗಿ “ರೋಹನ್ ಮರೀನಾ ಒನ್ ಅನ್ನು ನಾವು ಪರಿಚಯಿಸುತ್ತಿದ್ದು, ರಿಯಲ್‌ ಎಸ್ಟೇಟ್‌ ಕ್ಷೇತ್ರದಲ್ಲಿ ಇದೊಂದು ವಿನೂತನ ಪ್ರಯೋಗವಾಗಿದೆ. ರೋಹನ್ ಮರಿನಾ ಒನ್ ನಮ್ಮ ಕನಸಿನ ಯೋಜನೆ, ಮತ್ತು ಈ ಯೋಜನೆ ಕರಾವಳಿಯ ಜೀವನಕ್ಕೆ ಹೊಸ ಅರ್ಥವನ್ನು ನೀಡುಲು ನಮ್ಮ ಪ್ರಯತ್ನವಾಗಿದೆ. ಪ್ರತಿಯೊಂದು ಅಪಾರ್ಟ್‌ಮೆಂಟ್‌ನಿಂದಲೂ ಅರಬ್ಬಿ ಸಮುದ್ರದ ಆಹ್ಲಾದಕರ ನೋಟ ದೊರಕುವುದು ದೇಶದಲ್ಲಿ ಇದೇ ಮೊದಲು. ಪ್ರತಿದಿನ ಪ್ರಕೃತಿಯ ಅದ್ಭುತ ನೋಟದೊಂದಿಗೆ ದಿನವನ್ನು ಆರಂಭಿಸುವ ಅವಕಾಶವನ್ನು ನೀಡುತ್ತಿರುವುದು ಮಂಗಳೂರು ನಗರಕ್ಕೆ ನಾವು ನೀಡುವ ಗೌರವ ಮತ್ತು ನಮ್ಮ ಕರಾವಳಿಯನ್ನು ವಿಶ್ವಕ್ಕೆ ಪರಿಚಯಿಸುವ ಪ್ರಯತ್ನ” ಎಂದು ರೋಹನ್ ಕಾರ್ಪೊರೇಷನ್ ಇದರ ಎಂ.ಡಿ. ರೋಹನ್ ಮೊಂತೇರೊರವರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದರು.

ಪ್ರಮುಖ ಸ್ಥಳ, ಸುಲಭ ಸಂಪರ್ಕ:

ರೋಹನ್ ಮರೀನಾ ಒನ್ ಎನ್‌ಐಟಿಕೆ ಸುರತ್ಕಲ್ ಸಮೀಪದಲ್ಲಿದ್ದು, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕೇವಲ 32 ನಿಮಿಷಗಳ ದೂರದಲ್ಲಿದ್ದು, ದುಬೈ, ದಮ್ಮಮ್‌, ಅಬುದಾಬಿ ಇತ್ಯಾದಿ ಸ್ಥಳಗಳಿಗೆ ಜಾಗತಿಕ ಸಂಪರ್ಕವನ್ನು ಸುಲಭಗೊಳಿಸುತ್ತದೆ. ರೈಲು ನಿಲ್ದಾಣ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಬೈಕಂಪಾಡಿ ಮತ್ತು ಎಂಆರ್‌ಪಿಎಲ್ ಸೇರಿದಂತೆ ಕೈಗಾರಿಕಾ ಮತ್ತು ಐಟಿ ಕೇಂದ್ರಗಳಿಗೆ ಸುಲಭ ಸಂಪರ್ಕ ಒದಗಿಸುತ್ತದೆ. ಮಣಿಪಾಲ (54 ನಿಮಿ), ಉಡುಪಿ (47 ನಿಮಿ) ಮತ್ತು ಕೇರಳದಲ್ಲಿನ ಪ್ರಮುಖ ತಾಣಗಳು ಅಲ್ಪ ಹೊತ್ತಿನ ಪ್ರಯಾಣದಲ್ಲೇ ತಲುಪಬಹುದಾಗಿದೆ. ಕುದುರೆಮುಖ, ಶೃಂಗೇರಿ ಮತ್ತು ಮುರುಡೇಶ್ವರ ಮುಂತಾದ ಸೊಬಗಿನ ತಾಣಗಳು ವೀಕೆಂಡ್ ಪ್ರವಾಸಗಳಿಗೆ ಕೆಲವೇ ತಾಸುಗಳ ದೂರದಲ್ಲಿದೆ. ಇನ್ನು ಗೋವಾ, ಶಿವಮೊಗ್ಗ, ಗೋಕರ್ಣ, ಮಡಿಕೇರಿ, ಮೈಸೂರು ಇತ್ಯಾದಿ ಪ್ರೇಕ್ಷಣೀಯ ಸ್ಥಳಗಳಿಗೆ ಸುಲಭ ಸಂಪರ್ಕ ಇರುವುದರಿಂದ ರೋಹನ್ ಮೆರಿನಾ ಒನ್ ಕೇವಲ ವಾಸಸ್ಥಳವಾಗಿರದೆ, ದಕ್ಷಿಣ ಭಾರತದ ಅತ್ಯಂತ ಸುಂದರ ಅನುಭವಗಳಿಗೆ ದಾರಿಯಾಗಿಗೂ ತನ್ನನ್ನು ಪ್ರತಿನಿಧಿಸುತ್ತದೆ.
ಶಾಲಾ ಕಾಲೇಜುಗಳು ಅಪಾರ್ಟ್‌ಮೆಂಟ್‌ಗಳಿಗೆ ಸಮೀಪದಲ್ಲಿವೆ. ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳು ಮತ್ತು ಆರೋಗ್ಯ ಸಂಸ್ಥೆಗಳು ಸಮೀಪವಿರುವುದರಿಂದ, ನಿವಾಸಿಗಳಿಗೆ ವಿಶ್ವದರ್ಜೆಯ ವೈದ್ಯಕೀಯ ಸೇವೆಗಳು ಸುಲಭವಾಗಿ ಲಭ್ಯವಾಗುತ್ತವೆ. ಕಟೀಲು, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ಮುಂತಾದ ಧಾರ್ಮಿಕ ಕೇಂದ್ರಗಳೂ ಸಮೀಪದಲ್ಲಿರುವುದರಿಂದ ಇಲ್ಲಿನ ವೈಶಿಷ್ಟ್ಯ ಹೆಚ್ಚುತ್ತದೆ. ಈ ಎಲ್ಲಾ ಪ್ರಯೋಜನಗಳಿಂದ ರೋಹನ್ ಮರಿನಾ ಒನ್, ಮಂಗಳೂರು ಕರಾವಳಿಯ ಆರ್ಥಿಕ ಮತ್ತು ಪ್ರವಾಸೋದ್ಯಮ ಬೆಳವಣಿಗೆಯಲ್ಲಿ ಮಹತ್ತರ ಕೊಡುಗೆಯನ್ನು ನೀಡಲಿದೆ.

ರೋಹನ್ ಕಾರ್ಪೊರೇಷನ್ ಬಗ್ಗೆಕಳೆದ 32 ವರ್ಷಗಳಿಂದ, ರೋಹನ್ ಕಾರ್ಪೊರೇಷನ್ ಭಾರತದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ವಿಶ್ವಾಸ, ವಿನೂತನ ಪ್ರಯೋಗ ಮತ್ತು ಉತ್ಕೃಷ್ಟತೆಗೆ ಹಿಡಿದ ಕೈಗನ್ನಡಿಯಾಗಿದೆ. ಗುಣಮಟ್ಟದ ವಸತಿ ಮತ್ತು ವಾಣಿಜ್ಯ ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಕ್ರಿಯೆಯಲ್ಲಿ ಸಂಸ್ಥೆಯು ದಿಟ್ಟತನದಿಂದ ಮುಂದುವರೆಸಿದೆ. ಮಂಗಳೂರಿನ ಪ್ರಮುಖ ಸ್ಥಳಗಳಲ್ಲಿ 25ಕ್ಕೂ ಹೆಚ್ಚು ಯೋಜನೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಗರಿಮೆಯನ್ನು ಹೊಂದಿರುವ ರೋಹನ್ ಕಾರ್ಪೊರೇಷನ್, ಸುಂದರ, ಗುಣಮಟ್ಟ ಮತ್ತು ದೀರ್ಘಬಾಳಿಕೆಯ ವಿಶ್ವಾಸವನ್ನು ಧೃಡಪಡಿಸುವ ಯೋಜನೆಗಳನ್ನು ನೀಡುವುದರಲ್ಲಿ ಪ್ರಸಿದ್ಧವಾಗಿದೆ.

You may also like

News

ಮಾಣಿ ಗ್ರಾಮದಲ್ಲಿ ಹಳೆ ಮನೆ ದುರಸ್ತಿ ಪರವಾನಗಿ ಪಡೆದು ಸರಕಾರಿ ಜಮೀನಿನ ಮೇಲೆ ಅಕ್ರಮವಾಗಿ ನಿರ್ಮಿಸಿದ ಐಶಾರಾಮಿ ಬಂಗ್ಲೆ

ಯಾವುದೇ ದಾಖಲೆಗಳಿಲ್ಲದೆ ಸರಕಾರಕ್ಕೆ ವಂಚನೆ ಮಾಡಿದ್ದನ್ನು ಬಯಲಿಗೆಳೆದ ಸಾಮಾಜಿಕ ಕಾರ್ಯಕರ್ತ ಅತಿಕ್ರಮಿತ ಕಟ್ಟಡ ಕೂಡಲೇ ತೆರವುಗೊಳಿಸಲು ಲೂಸಿಯಾ ಮೆಟಿಲ್ಡಾ ಪಿಂಟೊರವರಿಗೆ ಬಂಟ್ವಾಳ ತಹಶೀಲ್ದಾರ್ ನೋಟಿಸ್ ಜಾರಿ ಮಾಣಿ
News

ನಕಲಿ ದಾಖಲೆ ಪ್ರಕರಣದಲ್ಲಿ ಆರೋಪಿ ಅಬ್ದುಲ್ ಹಾಶೀಮ್ ಬಂಧನ

ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯವನ್ನು ವಂಚಿಸಿದ ಭೂಪ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ 34 ವರ್ಷ ಪ್ರಾಯದ ಅಬ್ದುಲ್ ಹಾಶೀಮ್  ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ನವೆಂಬರ್ 6ರಂದು

You cannot copy content of this page