July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

✍️ ಕೈಯಲ್ಲೇ ಪವಿತ್ರ ಕುರ್‌ಆನ್ ಬರೆದು ಇತಿಹಾಸ ನಿರ್ಮಿಸಿದ 19 ವರ್ಷದ ಅಬೀರಾ

ಅಪ್ರತಿಮ ಏಕಾಗ್ರತೆ, ದೃಢ ನಿರ್ಧಾರಕ್ಕೆ ಸಿಕ್ಕ ಗೆಲುವು

ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿದಂತೆ ಇತರ ವಿಶ್ವ ದಾಖಲೆಗೆ ಸೇರ್ಪಡೆ ಆಗಲೆಂಬುದು ಹಾರೈಕೆ

ಮೂರು ವರ್ಷ ಏಳು ತಿಂಗಳ ಅಪ್ರತಿಮ ಏಕಾಗ್ರತೆ, ಧೈರ್ಯ ಮತ್ತು ದೃಢ ನಿರ್ಧಾರದ ಫಲವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಮೂಲದ 19 ವರ್ಷ ಪ್ರಾಯದ ವಿದ್ಯಾರ್ಥಿನಿ ಫಾತಿಮತ್ ಅಬೀರಾ ಅಲ್ ಫಾಳಿಲಾ ತಮ್ಮ ಕೈಯಲ್ಲಿ ಪವಿತ್ರ ಕುರ್‌ಆನ್ ಅನ್ನು ಸಂಪೂರ್ಣವಾಗಿ ಬರೆದು ಎಲ್ಲರ ಗಮನ ಸೆಳೆದಿದ್ದಾರೆ.

ಆಧುನಿಕ ಯುಗದಲ್ಲಿ ಎಲ್ಲ ಧಾರ್ಮಿಕ ಗ್ರಂಥಗಳು ಮುದ್ರಣ ರೂಪದಲ್ಲಿ ಲಭ್ಯವಾಗುವ ಕಾಲದಲ್ಲೂ, ಅಬೀರಾ ಕೈಯಲ್ಲಿ 610 ಪುಟಗಳ ಕುರ್‌ಆನ್ ಅನ್ನು ಬರೆದು ಒಂದು ಅಪರೂಪದ ಸಾಧನೆ ಮಾಡಿದ್ದಾರೆ. 13 ಇಂಚು ಉದ್ದ, 9 ಇಂಚು ಅಗಲ ಮತ್ತು 2.260 ಕೆ.ಜಿ ತೂಕದ ಈ ಹಸ್ತಪ್ರತಿ ಕುರ್‌ಆನ್‌ನಲ್ಲಿ ಕಪ್ಪು ಶಾಯಿ ಮತ್ತು ಪಿಂಕ್ ಪೆನ್ನು ಬಳಸಲಾಗಿದೆ.

2021ರ ಅಕ್ಟೋಬರ್ 25ರಂದು, 9ನೇ ತರಗತಿಯಲ್ಲಿ ಕಲಿಯುತ್ತಿರುವಾಗಲೇ ಬರೆಯಲು ಪ್ರಾರಂಭಿಸಿದ ಅಬೀರಾ, ನಂತರ ಪಿಯುಸಿ ಅವಧಿಯಲ್ಲಿ 30 ಕಾಂಡಗಳನ್ನೂ ಪೂರ್ಣಗೊಳಿಸಿದರು. ಇದೇ ವೇಳೆ ಅವರು ಶೈಕ್ಷಣಿಕ ಸಾಧನೆಯಲ್ಲಿ ಸಹ ಮೆರಗನ್ನು ತೋರಿದರು. ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ. ರೋಡ್ ನ ಮಿತ್ತಬೈಲ್ ದಾರುಲ್ ಉಲೂಂ ವುಮೆನ್ಸ್ ಶರೀಅತ್ ಕಾಲೇಜಿನಲ್ಲಿ ಬಿಕಾಂನೊಂದಿಗೆ ಶರೀಅತ್ ವಿದ್ಯಾಭ್ಯಾಸ ಕಲಿತಿದ್ದಾಳೆ. – ಪಿಯುಸಿಯಲ್ಲಿ 553 ಅಂಕಗಳೊಂದಿಗೆ ಡಿಸ್ಟಿಂಕ್ಷನ್, ಜೊತೆಗೆ ಸಮಸ್ತ ಫಾಳಿಲಾ ಶರೀಅತ್ ಪಬ್ಲಿಕ್ ಪರೀಕ್ಷೆಯಲ್ಲಿ 95.5% ಅಂಕಗಳೊಂದಿಗೆ ಕೇಂದ್ರೀಯ ಬೋರ್ಡ್ ಟಾಪ್ 10ರಲ್ಲಿ ಸ್ಥಾನ ಗಳಿಸಿದರು.

ಉಪ್ಪಿನಂಗಡಿ ಹಳೆಗೇಟಿನ ಹೈದರ್ ಆಲಿ ನಾಳ – ದಂಪತಿಯ ಪುತ್ರಿಯಾಗಿರುವ ಅಬೀರಾ, ಕೆಮ್ಮಾರ ಶಂಸುಲ್ ಉಲಮಾ ಶರೀಅತ್ ಕಾಲೇಜಿನ ಹಳೆ ವಿದ್ಯಾರ್ಥಿನಿ. ಇತ್ತೀಚೆಗೆ ಇದೇ ಕಾಲೇಜಿನ ಅಧ್ಯಕ್ಷ ಎಸ್.ಬಿ. ಮುಹಮ್ಮದ್ ದಾರಿಮಿ ಅವರ ನೇತೃತ್ವದಲ್ಲಿ ಈ ಹಸ್ತಪ್ರತಿ ಕುರ್‌ಆನ್ ಬಿಡುಗಡೆಗೊಳಿಸಲಾಯಿತು.

ಅಬೀರಾ ಅವರ ಅಪರೂಪದ ಈ ಸಾಧನೆ ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿದಂತೆ ಇತರ ವಿಶ್ವ ದಾಖಲೆಗೆ ಸೇರ್ಪಡೆ ಆಗಲೆಂಬುದು ಎಲ್ಲರ ಹಾರೈಕೆ.

You may also like

News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು
News

ದಾರುಸ್ಸಲಾಂ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಮಹಾಸಭೆ – ಭವ್ಯ ಸ್ವಾಗತ ಸಮಿತಿ ರಚನೆ

ಸ್ಥಳೀಯ ಸಂಸ್ಥೆಯಾದ ದಾರುಸ್ಸಲಾಂ ಸೆಂಟರ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಹಾಗೂ ಪ್ರಥಮ ಸನದುದಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೃಹತ್ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವು

You cannot copy content of this page