July 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ರಾಷ್ಟ್ರ ಮಟ್ಟದ ಮಿಸ್ & ಮಿಸೆಸ್ ಇಂಡಿಯಾ ಅಸ್ಟ್ರಲ್ ಸ್ಪರ್ಧೆಯಲ್ಲಿ ಮಂಗಳೂರಿಗರ ಮೆರುಗು

ಎಲ್ಲಾ ವಿಭಾಗಗಳಲ್ಲಿ ಪ್ರಶಸ್ತಿ ಪಡೆದು ಮಂಗಳೂರಿಗರಿಗೆ ಹೆಮ್ಮೆ ತಂದ ಪ್ರತಿಭೆಗಳು

ರಾಷ್ಟ್ರೀಯ ಮಿಸ್ & ಮಿಸೆಸ್ ಇಂಡಿಯಾ ಅಸ್ಟ್ರಲ್ ಪೇಜೆಂಟ್ಸ್‌ 2025ರ 9ನೇ ಆವೃತ್ತಿಯ ಗ್ಯ್ರಾಂಡ್‌ ಫಿನಾಲೆ ಬೆಂಗಳೂರಿನಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ಜರಗಿದ್ದು, ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಮಂಗಳೂರಿನ ವನಿತೆಯರು, ಯುವತಿಯರು ಹಾಗೂ ಮಕ್ಕಳು ಬಹುತೇಕ ಎಲ್ಲಾ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವುದು ಮಂಗಳೂರಿಗರ ಹೆಮ್ಮೆಗೆ ಕಾರಣವಾಗಿದೆ.

ಬೆಂಗಳೂರಿನ ಕಿಂಗ್ಸ್‌ ಮೆಡೋಸ್‌ನಲ್ಲಿ ನಡೆದ ಈ ಸ್ಪರ್ಧೆ ಸೆಪ್ಟೆಂಬರ್‌ 4ರಿಂದ 6ರವರೆಗೆ ಮೂರು ದಿನಗಳ ಕಾಲ ವಿವಿಧ ರೀತಿಯ ಚಟುವಟಿಕೆಗಳ ಮೂಲಕ ನಡೆದು, ಸೆಪ್ಟೆಂಬರ್  6ರ ಶನಿವಾರ ಸಂಜೆ ಗ್ರ್ಯಾಂಡ್‌ ಫಿನಾಲೆ ಆಯೋಜಿಸಲಾಯಿತು.

ಪ್ರಿ ಜೂನಿಯರ್ ವಿಭಾಗದಲ್ಲಿ ಸನ್ವಿತಾ ಡಿಸೋಜಾ ಪ್ರಿ ಜೂನಿಯರ್ ಮಿಸ್ ಇಂಡಿಯಾ ಕಿರೀಟವನ್ನು ಪಡೆದು ಮಂಗಳೂರಿಗೆ ಕೀರ್ತಿ ತಂದರು. ಪ್ರತಿಭಾ ಸೌನ್ಶಿಮಠ್ ಅವರ ನೇತೃತ್ವದಲ್ಲಿ ಆಯೋಜಿಸಲಾದ ಈ ಸೌಂದರ್ಯ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಮಂಗಳೂರಿನ ಸ್ಪರ್ಧಿಗಳು, ನಗರದ ಪಾತ್ ವೇ ಮಾಡೆಲಿಂಗ್‌ ಸ್ಟುಡಿಯೋ ದೀಪಕ್ ಗಂಗೂಲಿ ಅವರಿಂದ ತರಬೇತಿ ಪಡೆದವರು.

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ನಿರ್ದೇಶಕರೂ ಆದ ಮರ್ಸಿ ವೀಣಾ ಡಿಸೋಜಾ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದರು.

You may also like

News

ಪುತ್ತೂರಿನಲ್ಲಿ ಯುವತಿಗೆ ಚಾಕು ತೋರಿಸಿ ಬೆದರಿಕೆ ಹಾಕಿದ ಆರೋಪ – ಸತ್ಯಾಂಶ ಬಿಚ್ಚಿಟ್ಟ ಪೊಲೀಸರು

ಉಭಯ ಕಡೆಯಿಂದ ದೂರು ದಾಖಲು! ಸುಳ್ಳು ಸುದ್ದಿ ಅಥವಾ ವದಂತಿಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ – ಜಿಲ್ಲಾ SP ಡಾ. ಅರುಣ್ ಕೆ. ಯುವತಿಯೊಬ್ಬಳು
News

ವೇಗದ ಅಬ್ಬರಕ್ಕೆ ವಿದ್ಯಾರ್ಥಿ ಬಲಿ – ವಾಹನ ಸಮೇತ ಚಾಲಕ ಪರಾರಿ

ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಸಂಭವಿಸಿದ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಐಟಿಐ ವಿದ್ಯಾರ್ಥಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮತ್ತೋರ್ವ ವಿದ್ಯಾರ್ಥಿ

You cannot copy content of this page