ಮಂಗಳೂರು ನಗರ ಪೊಲೀಸ್ ಇಲಾಖೆಯ ಶ್ಲಾಘನೀಯ ಕಾರ್ಯ
ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿಯವರಿಂದ 32 ಪೊಲೀಸ್ ಅಧಿಕಾರಿಗಳು ಹಾಗೂ 140 ಸಿಬ್ಬಂದಿಗಳಿಗೆ ಪ್ರಶಂಸನಾ ಪತ್ರ – ನಗದು ಪುರಸ್ಕಾರ ವಿತರಣೆ

ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಕಳೆದ 3 ತಿಂಗಳ ಅವಧಿಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಕರ್ತವ್ಯ ನಿಷ್ಠೆಯಿಂದ ಕಾರ್ಯನಿರ್ವಹಿಸಿ ಅಪರಾಧ ಪತ್ತೆ, ಶಾಂತಿ ಕಾಪಾಡುವಲ್ಲಿ ಯಶಸ್ವಿಯಾದ 32 ಪೊಲೀಸ್ ಅಧಿಕಾರಿಗಳು ಹಾಗೂ 140 ಸಿಬ್ಬಂದಿಗಳನ್ನು ಗುರುತಿಸಿ, ಇಂದು ಸೆಪ್ಟೆಂಬರ್ 12ರಂದು ಶುಕ್ರವಾರ ಜಿಲ್ಲಾ ಕವಾಯತು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರು ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿಯವರು ಪ್ರಶಂಸನಾ ಪತ್ರ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಿದರು.
ಇದೇ ವೇಳೆ, ನಗರದ ಕಾನೂನು-ಸುವ್ಯವಸ್ಥೆ ಕಾಪಾಡಲು ಸಹಕರಿಸಿದ 19 ವಿಶೇಷ ಕಾರ್ಯಪಡೆ ಸಿಬ್ಬಂದಿಗಳಿಗೂ ಪುರಸ್ಕಾರ ದೊರಕಿತು.


ಮೂರು ತಿಂಗಳಲ್ಲಿ ಸಾಧಿಸಿದ ಪ್ರಮುಖ ಯಶಸ್ಸುಗಳು:
27 ವರ್ಷದ ಹಿಂದಿನ ಮತೀಯ ಗಲಭೆ ಪ್ರಕರಣದ ಇಬ್ಬರು ಆರೋಪಿಗಳ ಪತ್ತೆ
52 ಎನ್.ಬಿ.ಡಬ್ಲ್ಯೂ ವಾರಂಟು ಆಸಾಮಿಗಳ ಬಂಧನ ಸ್
39 ಕಳವು ಪ್ರಕರಣಗಳ ಪತ್ತೆ – 1 ಕೋಟಿ 5 ಲಕ್ಷ ಮೌಲ್ಯದ ಸೊತ್ತು ವಶ
37 ಮಾದಕ ವಸ್ತು ಪ್ರಕರಣ ದಾಖಲೆ – 73 ಆರೋಪಿಗಳು ಬಂಧನ
89 ಡ್ರಗ್ ಸೇವನೆ ಪ್ರಕರಣ – 127 ಮಂದಿ ವಶ, ಪೆಡ್ಲರ್ಸ್‌ಗಳ ಮಾಹಿತಿ ಸಂಗ್ರಹ
ಸೋಶಿಯಲ್ ಮೀಡಿಯಾದ ದುರುಪಯೋಗದ ವಿರುದ್ಧ 22 ಆರೋಪಿಗಳ ವಿರುದ್ಧ ಕ್ರಮ




ಪ್ರಶಂಸನೆಗೆ ಪಾತ್ರರಾದ ವಿಭಾಗವಾರು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು
👉 ಎಲ್.ಪಿ.ಸಿ. ಪ್ರಕರಣಗಳ ಪತ್ತೆ ಕಾರ್ಯಕ್ಕೆ – 3 ಅಧಿಕಾರಿಗಳು ಮತ್ತು 11 ಸಿಬ್ಬಂದಿಗಳು
👉 ವಾರಂಟ್ ಆಸಾಮಿಗಳ ಪತ್ತೆ – 4 ಅಧಿಕಾರಿಗಳು ಮತ್ತು 18 ಸಿಬ್ಬಂದಿಗಳು
👉 ಕಳವು ಪ್ರಕರಣ ಪತ್ತೆ – 5 ಅಧಿಕಾರಿಗಳು ಮತ್ತು 13 ಸಿಬ್ಬಂದಿಗಳು
👉 ನ್ಯಾಯಾಲಯದಲ್ಲಿ ಶಿಕ್ಷೆ ಖಚಿತಗೊಳಿಸಲು – 3 ಅಧಿಕಾರಿಗಳು ಮತ್ತು 8 ಸಿಬ್ಬಂದಿಗಳು
👉 ಪ್ರಮುಖ ಪ್ರಕರಣಗಳಲ್ಲಿ ಆರೋಪಿ ಪತ್ತೆಗೆ – 9 ಅಧಿಕಾರಿಗಳು ಮತ್ತು 31 ಸಿಬ್ಬಂದಿಗಳು
👉 ಎನ್.ಡಿ.ಪಿ.ಎಸ್ ಪ್ರಕರಣ ಪತ್ತೆಗೆ – 3 ಅಧಿಕಾರಿಗಳು ಮತ್ತು 13 ಸಿಬ್ಬಂದಿಗಳು
👉 ಸಾಮಾಜಿಕ ಜಾಲತಾಣ ಪ್ರಚೋದನೆ ನಿಯಂತ್ರಣಕ್ಕೆ – 11 ಸಿಬ್ಬಂದಿಗಳು
👉 ಕಾನೂನು ಸುವ್ಯವಸ್ಥೆ, ಸಂಚಾರ ಸುಧಾರಣೆ ಹಾಗೂ ಇತರೆ ಕಾರ್ಯಗಳಿಗೆ – 5 ಅಧಿಕಾರಿಗಳು ಮತ್ತು 16 ಸಿಬ್ಬಂದಿಗಳು


ಆಯುಕ್ತರಿಂದ ಶ್ಲಾಘನೆ : ನಗರದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು, ಅಪರಾಧ ಪತ್ತೆ ಮಾಡುವಲ್ಲಿ ಹಾಗೂ ಡ್ರಗ್ ಮಾಫಿಯಾ ವಿರುದ್ಧ ಹೋರಾಟದಲ್ಲಿ ತೊಡಗಿರುವ ಅಧಿಕಾರಿಗಳ ಸಮರ್ಪಿತ ಕಾರ್ಯವನ್ನು ಶ್ಲಾಘಿಸಿ, ಪೊಲೀಸ್ ಆಯುಕ್ತರು ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಿದರು.




