ಶ್ರೀರಾಮ್ ಫೈನಾನ್ಸ್ 52 ವರ್ಷಗಳ ಸೇವೆಯಲ್ಲಿ ಮಾದರಿ — 868 ವಿದ್ಯಾರ್ಥಿಗಳಿಗೆ 37 ಲಕ್ಷ ವಿದ್ಯಾರ್ಥಿ ನಿಧಿ ವಿತರಣೆ
ಭವಿಷ್ಯ ರೂಪಿಸುವ 1 ಕೋಟಿ 36 ಲಕ್ಷ ಶೈಕ್ಷಣಿಕ ಪ್ರೋತ್ಸಾಹದ ಗುರಿ

ಸಾರಿಗೆ ಮತ್ತು ಉದ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ಉದ್ದೇಶದಿಂದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಕಳೆದ 13 ವರ್ಷಗಳಿಂದ ನಿರಂತರವಾಗಿ ವಿದ್ಯಾರ್ಥಿ ನಿಧಿ ವಿತರಿಸುತ್ತಿದೆ. ಸಂಸ್ಥೆಯು 52 ವರ್ಷಗಳಿಂದ ಅನೇಕ ಗ್ರಾಹಕರಿಗೆ ಸಾಲ ಸೌಲಭ್ಯ ಒದಗಿಸುತ್ತಿದ್ದು, ಸಮಾಜಮುಖಿ ಕಾರ್ಯದಲ್ಲಿ ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕೈಗೊಂಡಿರುವ ಈ ಯೋಜನೆ ಶ್ಲಾಘನೀಯವಾಗಿದೆ. ಪುತ್ತೂರು, ಸುಳ್ಯ ಹಾಗೂ ನೆಲ್ಯಾಡಿ ಶಾಖೆಗಳ ಒಟ್ಟು 868 ವಿದ್ಯಾರ್ಥಿಗಳಿಗೆ 37 ಲಕ್ಷ ರೂಪಾಯಿ ಮೌಲ್ಯದ ವಿದ್ಯಾರ್ಥಿ ನಿಧಿ ವಿತರಿಸಲಾಯಿತು. ಮುಂದಿನ ದಿನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾರ್ಥಿಗಳಿಗೆ 1 ಕೋಟಿ 36 ಲಕ್ಷ 41 ಸಾವಿರ ರೂಪಾಯಿ ಮೌಲ್ಯದ ವಿದ್ಯಾರ್ಥಿ ನಿಧಿ ಒದಗಿಸುವ ಗುರಿ ಈ ಸಂಸ್ಥೆಗಿದೆ.











ಸೆಪ್ಟೆಂಬರ್ 9ರಂದು ಪುತ್ತೂರಿನ ಕೊಂಬೆಟ್ಟಿನ ಬಂಟರ ಭವನದಲ್ಲಿ ನಡೆದ ವಿದ್ಯಾರ್ಥಿ ನಿಧಿ ವಿತರಣಾ ಸಮಾರಂಭವನ್ನು ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ನ ಝೋನಲ್ ಬಿಸಿನೆಸ್ ಹೆಡ್ ಶರಶ್ಚಂದ್ರ ಭಟ್ ಕಾಕುಂಜೆ ಉದ್ಘಾಟಿಸಿದರು. ನಿಧಿಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ವಿತರಿಸಿದರು.









ಕಾರ್ಯಕ್ರಮದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ, ನಗರ ಠಾಣಾ ನಿರೀಕ್ಷಕರಾದ ಆಂಜನೇಯ ರೆಡ್ಡಿ, ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಮುಖ್ಯಸ್ಥೆ ವಿಜಯ ಸರಸ್ವತಿ, ಸುಳ್ಯ ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೊಡುಗುಳಿ, ಧರಿತ್ರಿ ಅಸೋಸಿಯೇಟ್ಸ್ ನ ಮಾಲಕರಾದ ಮುರುಳಿಕೃಷ್ಣ ಹಸಂತಡ್ಕ, ಅಜರ್ ಲಾಜಿಸ್ಟಿಕ್ಸ್ ನ ಮಾಲಕ ಖಲಂದರ್, ಗೂಡ್ಸ್ ವಾಹನ ಚಾಲಕ ಮಾಲಕರ ಸಂಘ ಪುತ್ತೂರು ಇದರ ಅಧ್ಯಕ್ಷ ರಘುರಾಮ ಪಾಟಳಿ, ಶ್ರೀರಾಮ್ ಫೈನಾನ್ಸ್ ನ ಲೀಗಲ್ ಹೆಡ್ ಉಲ್ಲಾಸ್ ವಿ. ನಾಯಕ್, ಝೋನಲ್ ಪ್ರಾಡಕ್ಟ್ ಹೆಡ್ ನಾಗರಾಜ್ ಬಿ., ಸ್ಟೇಟ್ ಹೆಡ್ ಸದಾಶಿವ, ಝೋನಲ್ ಪ್ರಾಡಕ್ಟ್ ಹೆಡ್ ಚಂದ್ರಹಾಸ ಆಳ್ವ, ರೀಜಿನಲ್ ಬಿಸಿನೆಸ್ ಹೆಡ್ ಚೇತನ್ ಅರಸ್, ಮಹೇಶ್ ಕುಮಾರ್ ಸಿ. ಯಚ್. ಹಾಗೂ ಜಯಪ್ರಕಾಶ್ ರೈ ಬಿ ಉಪಸ್ಥಿತರಿದ್ದರು.















ಸಂಸ್ಥೆಯ ಈ ಪ್ರಯತ್ನವು ಕೇವಲ ಲಾಭದ ಉದ್ದೇಶವಲ್ಲದೆ, ಸಮಾಜಕ್ಕೆ ಕೊಡುಗೆ ನೀಡುವ ಸಹಕಾರ ಮತ್ತು ಸಹಬಾಳ್ವೆಯ ದಾರಿಯಲ್ಲಿ ಮಾದರಿಯಾದ ಹೆಜ್ಜೆ ಎಂದು ಅಭಿಪ್ರಾಯ ವ್ಯಕ್ತವಾಯಿತು.




