April 18, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ನಕಲಿ ದಾಖಲೆ ಜಾಲ ಬಯಲು – ಮಂಗಳೂರು ಪೊಲೀಸರ ಸಿಸಿಬಿ ದಾಳಿಯಲ್ಲಿ 5 ಮಂದಿ ಸೆರೆ

ಜಾಮೀನುಗಾಗಿ ನ್ಯಾಯಾಲಯಕ್ಕೆ ನಕಲಿ ಆಧಾರ್, ಪಹಣಿ ಪತ್ರ – ಆರೋಪಿಗಳ ಕುಯುಕ್ತಿಗೆ ಅಂತ್ಯ

ಮಂಗಳೂರು ನಗರ ಪೊಲೀಸ್ ಆಯುಕ್ತರ ಮಾರ್ಗದರ್ಶನದಲ್ಲಿ ಸಿಸಿಬಿ ಹಾಗೂ ವಿವಿಧ ಠಾಣೆಗಳ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ನಕಲಿ ದಾಖಲೆ ಪತ್ರಗಳನ್ನು ತಯಾರಿಸಿ ನ್ಯಾಯಾಲಯಕ್ಕೆ ಸಲ್ಲಿಸಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದ ಜಾಲ ಬಯಲಾಗಿದ್ದು ಒಟ್ಟು 5 ಮಂದಿಯನ್ನು ದಸ್ತಗಿರಿ ಮಾಡಲಾಗಿದೆ. ಸಿಸಿಬಿ ತಂಡದ ತನಿಖೆಯಲ್ಲಿ ಆರೋಪಿಗಳು ನಕಲಿ ಆಧಾರ್ ಕಾರ್ಡ್, ಪಹಣಿ ಪತ್ರ ತಯಾರಿಸಿ ನೈಜ ದಾಖಲೆಗಳಂತೆ ಬಳಸಿ, ನ್ಯಾಯಾಲಯದಲ್ಲಿ ನಕಲಿ ಹೆಸರಿನಲ್ಲಿ ಹಾಜರಾಗಿ ಆರೋಪಿಗಳಿಗೆ ಜಾಮೀನು ಕೊಡಿಸುತ್ತಿದ್ದ ಶಾಕಿಂಗ್ ಪ್ರಕರಣ ಬೆಳಕಿಗೆ ಬಂದಿದೆ.

ಆಧಾರ್ ಕಾರ್ಡ್ ಮತ್ತು ಪಹಣಿ ಪತ್ರಗಳನ್ನು ತಯಾರಿಸಿ ಅವುಗಳನ್ನು ನೈಜ ದಾಖಲಾತಿಗಳೆಂದು ನಂಬಿಸಿ ವಿವಿಧ ಇಲಾಖೆಗಳಿಗೆ ಮತ್ತು ಮಾನ್ಯ ನ್ಯಾಯಾಲಯಕ್ಕೆ ನೀಡಿ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಜಾಮೀನು ನೀಡಲು ಬಳಕೆ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಉರ್ವ ಪೊಲೀಸ್ ಠಾಣಾ ಸರಹದ್ದಿನ ಅಬ್ದುಲ್ ರೆಹಮಾನ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿ ಆತನು ನಕಲಿ ದಾಖಲಾತಿಗಳನ್ನು ಬಳಸಿ ಆರೋಪಿಗಳಿಗೆ ಮಾನ್ಯ ನ್ಯಾಯಾಲಯದಿಂದ ಜಾಮೀನು ಮಂಜೂರು ಮಾಡಲು ಸಹಾಯ ಮಾಡಿದ್ದರ ಬಗ್ಗೆ ಖಚಿತಗೊಂಡ ನಂತರ ಸಿಸಿಬಿ ಪೊಲೀಸರ ದೂರಿನ ಮೇರೆಗೆ ಈತನ ವಿರುದ್ಧ ಉರ್ವ ಪೊಲೀಸ್ ಠಾಣೆಯಲ್ಲಿ ಮೊ.ನಂಬ್ರ 81/2025 00 336[2] 336[3], 340[2], 342[2], 318[4], 3[5] 2.2.2 ໖ ದಾಖಲಾಗಿರುತ್ತದೆ.

ಈ ಆರೋಪಿತನನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ಮುಂದೆ ಹಾಜರುಪಡಿಸಿ ಪೊಲೀಸರು ವಶಕ್ಕೆ ಪಡೆದ ನಂತರ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ಈತನು ತನಗೆ ನಕಲಿ ದಾಖಲಾತಿಗಳನ್ನು ತಯಾರಿಸಲು ಸಹಕರಿಸುತ್ತಿದ್ದ ಕೊಡಿಯಾಲ್ ಬೈಲ್ ನ ಕಂಪ್ಯೂಟರ್ ಸೆಂಟರೊಂದರಲ್ಲಿ ಕೆಲಸಕ್ಕಿದ್ದ ಮತ್ತೊಬ್ಬ ಆರೋಪಿ ನಿಶಾಂತ್ ಕುಮಾರ್ ಎಂಬಾತನ ಬಗ್ಗೆ ಮಾಹಿತಿ ನೀಡಿದ್ದು, ಆತನನ್ನು ಸಹ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿ ಪೊಲೀಸ್ ಕಸ್ಟಡಿಗೆ ಪಡೆಯಲಾಗಿರುತ್ತದೆ. ಈ ಇಬ್ಬರೂ ಆರೋಪಿತರನ್ನು ಹೆಚ್ಚಿನ ತನಿಖೆಗೆ ಒಳಪಡಿಸಿದಾಗ ತನಿಖೆಯ ವೇಳೆ ಮಾನ್ಯ ನ್ಯಾಯಾಲಯಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವ ಸಮಯ ನಕಲಿ ಆಧಾರ್ ಕಾರ್ಡ್ ಗಳಲ್ಲಿ ತಮ್ಮ ಫೋಟೋಗಳನ್ನು ಹಾಕಿಸಿಕೊಂಡು ಅಸಲಿ ವ್ಯಕ್ತಿಗಳಂತೆ ಮಾನ್ಯ ನ್ಯಾಯಾಲಯದ ಮುಂದೆ ಹಾಜರಾಗಿ ಆರೋಪಿಗಳಿಗೆ ಜಾಮೀನು ನೀಡಿ ಮಾನ್ಯ ನ್ಯಾಯಾಲಯಕ್ಕೆ ವಂಚಿಸಿ ಎರಡು ಪ್ರಕರಣಗಳಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಗಳಿಗೆ ಜಾಮೀನು ಕೊಡಿಸಿರುವ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಉರ್ವ ಠಾಣೆಯಲ್ಲಿ ಬಪ್ಪನಾಡುವಿನ 46 ವರ್ಷ ಪ್ರಾಯದ ಅಬ್ದುಲ್ ರೆಹಮಾನ್, ತೊಕ್ಕೊಟ್ಟು ಅಂಬಿಕಾ ರಸ್ತೆ ನಿವಾಸಿ 28 ವರ್ಷ ಪ್ರಾಯದ ನಿಶಾಂತ್ ಕುಮಾರ್, ಉತ್ತರ ಠಾಣೆಯಲ್ಲಿ ಬಂಟ್ವಾಳ ತಾಲೂಕು ಪುದು ಸುಜೀರ್‌ ರಸ್ತೆ ನಿವಾಸಿ 31 ವರ್ಷ ಪ್ರಾಯದ ನಿತೀನ್ ಕುಮಾರ್, ಇಂದಿರಾನಗರ ಹಾಲಾಡಿ ಸಜಿಪ ಮುನ್ನೂರು ನಿವಾಸಿ 46 ವರ್ಷ ಪ್ರಾಯದ ಹಸನ್ ರಿಯಾಜ್ ಹಾಗೂ ಕಾವೂರು ಪಳನೀರ್‌ ನಿವಾಸಿ 39 ವರ್ಷ ಪ್ರಾಯದ ಬ್ರೋಕರ್ ಹನೀಫ್ ಬಂಧಿತರಾಗಿದ್ದಾರೆ. ಮಂಗಳೂರು ದಕ್ಷಿಣ ಹಾಗೂ ಉತ್ತರ ಠಾಣೆಗಳಲ್ಲಿ ಹಲವಾರು ಪ್ರಕರಣಗಳಲ್ಲಿ ಆರೋಪಿಗಳಿಗೆ ನಕಲಿ ದಾಖಲೆಗಳ ಮೂಲಕ ಜಾಮೀನು ಕೊಡಿಸಿದ್ದ ಸಾಕ್ಷಿ ದೊರೆತಿದ್ದು ನ್ಯಾಯಾಲಯವನ್ನು ವಂಚಿಸಿದ ಪ್ರಕರಣ ದಾಖಲಿಸಲಾಗಿದೆ.

ಈ ಕಾರ್ಯಾಚರಣೆಯು ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ IPSರವರ ಮಾರ್ಗದರ್ಶನದಲ್ಲಿ ಉಪ ಆಯುಕ್ತರು ಮಿಥುನ್ ಎಚ್.ಎನ್. IPS (ಕಾನೂನು & ಸುವ್ಯವಸ್ಥೆ) ಮತ್ತು ಕೆ. ರವಿಶಂಕರ್ KSPS (ಅಪರಾಧ & ಸಂಚಾರ) ಅವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆಯಿತು. ತನಿಖೆ ಮುಂದುವರಿದಿದ್ದು ಈ ಜಾಲದಲ್ಲಿ ಇನ್ನೂ ಕೆಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

You may also like

News

11 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಂಧನ

ಕಳೆದ 11 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ವಿದೇಶಕ್ಕೆ ಪರಾರಿಯಾಗಿದ್ದ, ಸುಮಾರು 35 ಬಾರಿ ವಾರಂಟ್ ಜಾರಿಯಾಗಿದ್ದ ಗಂಭೀರ ಪ್ರಕರಣದ ಆರೋಪಿಯನ್ನು ವಿಟ್ಲ ಪೊಲೀಸರು ಮಂಗಳೂರು ಅಂತರಾಷ್ಟ್ರೀಯ ವಿಮಾನ
News

Medical, Allied Health, Physiotherapy Graduation held at Father Muller

The 22nd Graduation Day of Father Muller Medical College (FMMC), the 29th Graduation Day of Father Muller College of Allied

You cannot copy content of this page