April 17, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ದಕ್ಷಿಣ ಕನ್ನಡ ಹಾಲು ಒಕ್ಕೂಟದ ಸಾಧನೆ – ಹಾಲು ಶೇಖರಣೆಯಲ್ಲಿ 16% ಏರಿಕೆ, ರೈತರ ಹಿತದ ಹಲವು ಯೋಜನೆಗಳು

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು 751 ಹಾಲು ಉತ್ಪಾದಕರ ಸಂಘಗಳು ಹಾಗೂ 155 ಬಲ್ಕ್ ಕೂಲಿಂಗ್ ಕೇಂದ್ರಗಳ ಮೂಲಕ ಪ್ರತಿ ದಿನ ಸರಾಸರಿ 3.97 ಲಕ್ಷ ಲೀಟರ್ ಹಾಲು ಶೇಖರಿಸುತ್ತಿದೆ. 2024-25ನೇ ಸಾಲಿನ ಹೋಲಿಕೆಯಲ್ಲಿ 16% ಏರಿಕೆ ದಾಖಲಾಗಿದ್ದು, ಹಾಲು ಉತ್ಪಾದನೆ, ಮಾರಾಟ ಹಾಗೂ ರೈತ ಹಿತದ ಕಾರ್ಯಕ್ರಮಗಳಲ್ಲಿ ಒಕ್ಕೂಟವು ಪ್ರಗತಿಶೀಲ ಹೆಜ್ಜೆ ಇಟ್ಟಿದೆ.

ಆರ್ಥಿಕ ಸಾಧನೆ : ಒಕ್ಕೂಟವು 2024-25ರಲ್ಲಿ ರೂಪಾಯಿ 1174 ಕೋಟಿ ವ್ಯವಹಾರ ನಡೆಸಿ, ರೂಪಾಯಿ 12.79 ಕೋಟಿ ನಿವ್ವಳ ಲಾಭ ಗಳಿಸಿದೆ. ಹಾಲು ಮತ್ತು ಮೊಸರು ಮಾರಾಟದಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದ್ದು, ದಿನವಹೀ 4.02 ಲಕ್ಷ ಲೀಟರ್ ಹಾಲು ಹಾಗೂ 81 ಸಾವಿರ ಕೆ.ಜಿ. ಮೊಸರು ಮಾರುಕಟ್ಟೆಗೆ ತಲುಪಿದೆ.

ರೈತರ ಕಲ್ಯಾಣ : ರೈತ ಕಲ್ಯಾಣ ಟ್ರಸ್ಟ್ ಮೂಲಕ 55 ಸಾವಿರಕ್ಕೂ ಹೆಚ್ಚು ಹೈನುಗಾರರಿಗೆ ರೂಪಾಯಿ 2.05 ಕೋಟಿ ಪರಿಹಾರ ನೀಡಲಾಗಿದೆ. 30,629 ರಾಸುಗಳಿಗೆ ವಿಮೆ ಸೌಲಭ್ಯ ಒದಗಿಸಲಾಗಿದ್ದು, 1177 ರೈತರಿಗೆ ವಿಮಾ ಹಣ ಪಾವತಿಸಲಾಗಿದೆ. ರೈತರ ಅನುಕೂಲಕ್ಕಾಗಿ ಹಸಿರು ಹುಲ್ಲು ಅಭಿವೃದ್ಧಿ, ಮಿನಿಡೇರಿ ಯೋಜನೆ, ಡೇರಿ ಉಪಕರಣಗಳ ಖರೀದಿ ಸೇರಿದಂತೆ ಹಲವು ಯೋಜನೆಗಳಿಗೆ ಒಟ್ಟು ರೂಪಾಯಿ 2.60 ಕೋಟಿ ಅನುದಾನ ನೀಡಲಾಗಿದೆ.

ರಾಸು ಅಭಿವೃದ್ಧಿ ಕಾರ್ಯಕ್ರಮಗಳು : ಹಾಸನ, ಧಾರವಾಡ ಮತ್ತು ಮೈಸೂರು ಜಿಲ್ಲೆಗಳಿಂದ ಸರಾಸರಿ 1000 ಟನ್ ರಸಮೇವು ಖರೀದಿಸಿ ರೈತರಿಗೆ ಪೂರೈಕೆ ಮಾಡಲಾಗುತ್ತಿದೆ. ಈರೋಡ್ ಸೇರಿದಂತೆ ಹೊರ ಜಿಲ್ಲೆಗಳಿಂದ ಉತ್ತಮ ತಳಿಯ ರಾಸುಗಳನ್ನು ಖರೀದಿಸಿ ರೈತರಿಗೆ ಒದಗಿಸುವ ಯೋಜನೆಯೂ ಯಶಸ್ವಿಯಾಗಿ ಸಾಗುತ್ತಿದೆ.

ಜಂತುಹುಳ ನಿವಾರಣಾ ಕಾರ್ಯಕ್ರಮ ಇಂದು ಸೆಪ್ಟೆಂಬರ್ 16ರಂದು – ಭ್ರೂಣ ವರ್ಗಾವಣೆಯ ಮೂಲಕ ಉತ್ಕೃಷ್ಟ ತಳಿಯ ರಾಸು ಉತ್ಪಾದನೆಗೆ ಒಕ್ಕೂಟ ಸಜ್ಜು

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು ರೈತರ ಹಿತಾಸಕ್ತಿಗಾಗಿ ಇಂದು ಸೆಪ್ಟೆಂಬರ್ 16ರಂದು ಉಭಯ ಜಿಲ್ಲೆಗಳ ಎಲ್ಲಾ 751 ಹಾಲು ಉತ್ಪಾದಕರ ಸಂಘಗಳಲ್ಲಿ ಸಾಮೂಹಿಕ ಜಂತುಹುಳ ನಿವಾರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಒಕ್ಕೂಟದಿಂದ ರೂ.8 ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿದೆ.

ಇದೇ ವೇಳೆ, ಹೈನುಗಾರಿಕೆಯಲ್ಲಿ ಗುಣಮಟ್ಟದ ಸುಧಾರಣೆ ತರಲು ಒಕ್ಕೂಟವು ಭ್ರೂಣ ವರ್ಗಾವಣೆ ತಂತ್ರಜ್ಞಾನವನ್ನು ಜಾರಿಗೊಳಿಸಲು ಮುಂದಾಗಿದೆ. ಈ ರೀತಿಯಾಗಿ ಸಿದ್ಧವಾದ ಭ್ರೂಣಗಳನ್ನು ಸದಸ್ಯ ರೈತರ ಆಯ್ದ ರಾಸುಗಳಿಗೆ ವರ್ಗಾಯಿಸಲಾಗುತ್ತಿದ್ದು, ಭವಿಷ್ಯದಲ್ಲಿ ಉತ್ತಮ ಉತ್ಕೃಷ್ಟ ತಳಿಯ ರಾಸುಗಳ ಉತ್ಪಾದನೆಗೆ ಒಕ್ಕೂಟವು ಮುಂದಾಗಿದೆ.

ಮುಂದಿನ ಯೋಜನೆಗಳು:-

ಒಕ್ಕೂಟವು ಮೌಲ್ಯವರ್ಧಿತ ಉತ್ಪನ್ನಗಳಾದ Guava Chilly Lassi, Seeds Magic Ladoo, Protein Paneer, Nandini Protein Punch ಮತ್ತು Whey Drinks ಬಿಡುಗಡೆಗೆ ಸಜ್ಜಾಗಿದೆ. ಮಂಗಳೂರು ಮತ್ತು ಉಡುಪಿ ಡೇರಿಯ ಬಳಕೆಗೆ ಅಗತ್ಯವಿರುವ ನೀರನ್ನು ಸಮೀಪದ ನೀರಿನ ಒರತೆಯಿರುವ ಸ್ಥಳವನ್ನು ಖರೀದಿಸಲು ಯೋಜಿಸಲಾಗಿದೆ. ಪನ್ನೀರ್ ಉತ್ಪನ್ನವನ್ನು ಆಕರ್ಷಕವಾದ ನೂತನ Vaccumaized Thermoforming ಯಂತ್ರವನ್ನು ಖರೀದಿಸಿ ಪನ್ನೀರ್ ಬಿಡುಗಡೆ ಮಾಡಲು ಯೋಜಿಸಲಾಗಿದೆ.

ಉಡುಪಿ ಡೇರಿ ಆವರಣದಲ್ಲಿ ನೂತನ ಆಡಳಿತ ಕಛೇರಿ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಶೀಘ್ರದಲ್ಲಿ ಉದ್ಘಾಟನೆ ಮಾಡಲಾಗುವುದು. ಮುಂದುವರೆದು ಪ್ರಸ್ತುತ ಕಛೇರಿ ಇರುವ ಪ್ರದೇಶದಲ್ಲಿ ನೂತನ ಸಿಹಿ ಉತ್ಪನ್ನಗಳ ಉತ್ಪಾದನೆಯನ್ನು ಆರಂಭಿಸಲು ಯೋಜಿಸಲಾಗಿದೆ.

ಉಡುಪಿ ಡೇರಿಯ ಬಳಕೆಗೆ ಅಗತ್ಯವಿರುವ ನೀರನ್ನು ವಾರಾಹಿ ಯೋಜನೆಯಿಂದ ಪೈಪ್‌ಲೈನ್ ಅಳವಡಿಸಲು ಕ್ರಮವಿಡಲಾಗುತ್ತಿದೆ. ಉಡುಪಿ ಡೇರಿಯಲ್ಲಿ ನೂತನ ಆಡಳಿತ ಕಚೇರಿ ನಿರ್ಮಾಣ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಮಂಗಳೂರು- ಉಡುಪಿ ಡೇರಿಗಳಿಗೆ ನೀರಿನ ಮೂಲಾಭಿವೃದ್ಧಿ ಯೋಜನೆ ಕೂಡ ಜಾರಿಯಲ್ಲಿದೆ.

ಹೀಗಾಗಿ, ದಕ್ಷಿಣ ಕನ್ನಡ ಸಹಕಾರಿ ಹಾಲು ಒಕ್ಕೂಟವು ಹಾಲು ಉತ್ಪಾದನೆ ಹಾಗೂ ರೈತರ ಕಲ್ಯಾಣಕ್ಕೆ ಬದ್ಧವಾಗಿ, ಹೊಸ ಯೋಜನೆಗಳ ಮೂಲಕ ಭವಿಷ್ಯದತ್ತ ಹೆಜ್ಜೆ ಇಟ್ಟಿದೆ.

You may also like

News

ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ – ಏಪ್ರಿಲ್ 18ಕ್ಕೆ ಪೂರ್ವಭಾವಿ ಸಭೆ ಹಾಗೂ ಸ್ವಾಗತ ಸಮಿತಿ ರಚನೆ

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ ಬ್ಯಾರಿ ಸಾಹಿತ್ಯ ಪರಿಷತ್ ಬಂಟ್ವಾಳ ಘಟಕದ ಸಹಯೋಗದಲ್ಲಿ ಮೇ 12ರಂದು ನಡೆಯಲಿರುವ ‘ಬಂಟ್ವಾಳ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನ’ದ ಸಿದ್ಧತೆಗಳು
News

ಮಂಗಳೂರು ಧರ್ಮಕ್ಷೇತ್ರದ ವಿವಿಧ ಧರ್ಮಗುರುಗಳ 2026 ನೇ ಸಾಲಿನ ವರ್ಗಾವಣೆ ಪಟ್ಟಿ ಪ್ರಕಟ

ಬಿಷಪ್ ಪರಮ ಪೂಜ್ಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರ ಆದೇಶ ಮಂಗಳೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ

You cannot copy content of this page