ರಾಜ್ಯ ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿ – ವಾಮಂಜೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಮಹಿಳಾ ತಂಡ ಚಾಂಪಿಯನ್
ವಾಮಂಜೂರಿನ ಸೈಂಟ್ ಜೋಸೆಫ್ ಎಂಜಿನಿಯರಿಂಗ್ ಕಾಲೇಜಿನ ಮಹಿಳಾ ಶಟ್ಲ್ ಬ್ಯಾಡ್ಮಿಂಟನ್ ತಂಡವು ಸಪ್ಟೆಂಬರ್ 11 ಮತ್ತು 12 ರಂದು ಮಂಡ್ಯದ ಪಿ.ಎಸ್.ಸಿ.ಇ. ನಲ್ಲಿ ನಡೆದ ವಿಟಿಯು ರಾಜ್ಯ ಮಟ್ಟದ ಶಟ್ಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರ ಟ್ರೋಫಿಯನ್ನು ಪಡೆದುಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿತು.


ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ತೃತೀಯ ವರ್ಷದ ಟ್ರಿವಿಯಾ ಕ್ರೆಡಾ ವೇಗಸ್ ರವರಿಗೆ ಪಂದ್ಯಾವಳಿಯ ಅತ್ಯುತ್ತಮ ಮಹಿಳಾ ಆಟಗಾರ್ತಿ ಪ್ರಶಸ್ತಿ ದೊರಕಿತು. ಕ್ರೀಡಾ ಶಿಕ್ಷಣ ನಿರ್ದೇಶಕಿ (ಪಿಇಡಿ) ವನೀಶಾ ವಿ. ರೊಡ್ರಿಗಸ್ ಮತ್ತು ಸಹಾಯಕ ಪಿಇಡಿ ಸುಧೀರ್ ರವರ ಮಾರ್ಗದರ್ಶನದಲ್ಲಿ ತಂಡಗಳು ಶ್ರೇಷ್ಠ ಕೌಶಲ್ಯವನ್ನು ಪ್ರದರ್ಶಿಸಿದವು. ವಿಜೇತ ತಂಡವು ಟ್ರಿವಿಯಾ ಕ್ರೆಡಾ ವೇಗಸ್, ತ್ರಿಶಾ ಕ್ಲಾರಿಸ್ ವೇಗಸ್, ಕ್ರಿಸ್ಟಲ್ ಡ್ಯಾಪ್ನಿ ಮೊಂತೇರೊ ಸೇರಿದಂತೆ ಅನೇಕ ವಿಭಾಗಗಳ ಪ್ರತಿಭಾನ್ವಿತ ಆಟಗಾರರನ್ನು ಒಳಗೊಂಡಿತ್ತು.




