ರಿಕ್ಷಾ ಮತ್ತು ಬೈಕ್ ನಡುವೆ ಅಪಘಾತ- ಯುವ ಇಂಜಿನಿಯರ್ ಸಾವು
ಮಂಗಳೂರು ನಗರದ ಯೆಯ್ಯಾಡಿ ಜಂಕ್ಷನ್‌ನಲ್ಲಿ ಸೆಪ್ಟೆಂಬರ್ 17ರಂದು ಬುಧವಾರ ನಡೆದ ರಿಕ್ಷಾ ಹಾಗೂ ಬುಲೆಟ್ ಅಪಘಾತದಲ್ಲಿ ಯುವ ಎಂಜಿನಿಯರ್ ಮೃತಪಟ್ಟಿದ್ದಾರೆ. ಯೆಯ್ಯಾಡಿ ಬಾರೆಬೈಲ್ ನಿವಾಸಿ ರಾಮಚಂದ್ರರವರ ಏಕೈಕ ಪುತ್ರ 27 ವರ್ಷ ಪ್ರಾಯದ ಕೌಶಿಕ್ ಮೃತಪಟ್ಟ ಯುವಕ. ಕೌಶಿಕ್ ತನ್ನ ಬುಲೆಟ್ ಬೈಕ್ ನಲ್ಲಿ ಬರುತ್ತಿದ್ದಾಗ ಯೆಯ್ಯಾಡಿ ಜಂಕ್ಷನ್ ನಲ್ಲಿ ಅಟೋರಿಕ್ಷಾ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಿಂದ ಕೆಳಗೆ ಬಿದ್ದ ಅವರ ತಲೆಗೆ ಗಂಭೀರ ಗಾಯವಾಗಿ ಮೃತಪಟ್ಟರು.

ಕೌಶಿಕ್ ರವರು ನಿತ್ಯವೂ ಬೆಳಗ್ಗೆ ಮನೆಗಳಿಗೆ ಪೇಪರ್ ಹಾಕುತ್ತಿದ್ದರು. ಪೇಪರ್ ಹಾಕಿ ಬರುತ್ತಿರಬೇಕಾದರೆ ಕೌಶಿಕ್ ಬುಲೆಟ್ ಗೆ ಆಟೋರಿಕ್ಷಾ ಡಿಕ್ಕಿ ಹೊಡೆದಿತ್ತು. ಗಂಭೀರ ಗಾಯಗೊಂಡ ಕೌಶಿಕ್ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಸಂಚಾರಿ ಪೂರ್ವ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.




