August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಅಲ್ಲಿಪಾದೆ ಸಂತ ಆಂತೋನಿ ಚರ್ಚ್‌ನ ಲಿನ್ ಸ್ಟನ್ ಫೆರ್ನಾಂಡಿಸ್ ರಾಜ್ಯ ಮಟ್ಟದ ಶಾಟ್‌ಪುಟ್‌ನಲ್ಲಿ ದ್ವಿತೀಯ ಸ್ಥಾನ

ಸ್ಟೂಡೆಂಟ್ ನರ್ಸಸ್ ಅಸೋಸಿಯೇಶನ್ ಆಫ್ ಇಂಡಿಯಾ, ಕರ್ನಾಟಕ ರಾಜ್ಯ ಘಟಕದ ಆಶ್ರಯದಲ್ಲಿ ಶ್ರೀ ದೇವರಾಜ ಅರಸ್ ನರ್ಸಿಂಗ್ ಕಾಲೇಜು ಕೋಲಾರದಲ್ಲಿ ಸೆಪ್ಟೆಂಬರ್ 16 ಮತ್ತು 17ರಂದು ನಡೆದ ಶೌರ್ಯ & ಜೋಶ್ 2025 ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅಲ್ಲಿಪಾದೆ ಸಂತ ಆಂತೋನಿ ಚರ್ಚ್‌ನ ಲಿನ್ ಸ್ಟನ್ ಫೆರ್ನಾಂಡಿಸ್ ಶಾಟ್‌ಪುಟ್‌ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಅವರು ಈ ಸಾಧನೆಯ ಮೂಲಕ ಪುಣೆಯಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಸ್ಪರ್ಧೆಗೆ  ಆಯ್ಕೆಯಾಗಿದ್ದಾರೆ. ಒಟ್ಟು 13 ಮಂದಿ ಸ್ಪರ್ಧಿಗಳಲ್ಲಿ ಶಾಟ್‌ಪುಟ್‌ನಲ್ಲಿ ಮಿಂಚಿದ ಲಿನ್ ಸ್ಟನ್ 4×100 ಮೀಟರ್ ರಿಲೇ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ಲಿನ್ ಸ್ಟನ್ ಫೆರ್ನಾಂಡಿಸ್ ಇವರು ಅಲ್ಲಿಪಾದೆಯ ಲಾನ್ಸಿ ಫೆರ್ನಾಂಡಿಸ್ ಮತ್ತು ಅನಿತಾ ಫೆರ್ನಾಂಡಿಸ್ ದಂಪತಿಯ ಪುತ್ರರಾಗಿದ್ದು, ಬಾಲ್ಯದಿಂದಲೇ ಉತ್ತಮ ಕ್ರೀಡಾಪಟುವಾಗಿ ಹೆಸರು ವಾಸಿಯಾಗಿದ್ದಾರೆ. ಇವರು ಟ್ರ್ಯಾಕ್ ಈವೆಂಟ್ಸ್ ಮತ್ತು ಫೀಲ್ಡ್ ಈವೆಂಟ್ಸ್ ಎರಡರಲ್ಲಿಯೂ ಸಮಾನ ಆಸಕ್ತಿ ತೋರಿದ್ದು, ಕಾಲೇಜು ಹಾಗೂ ಧರ್ಮಕ್ಷೇತ್ರದ ಹಂತದಲ್ಲಿ ಹಲವು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಅವರ ಶ್ರಮ, ಶಿಸ್ತಿನ ಅಭ್ಯಾಸ ಮತ್ತು ಕ್ರೀಡಾಸ್ಫೂರ್ತಿ ಯುವ ಪೀಳಿಗೆಗೆ ಮಾದರಿಯಾಗಿದೆ.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page