ICYM, ಕಥೊಲಿಕ್ ಸಭಾ ಸಂಪಿಗೆ ಘಟಕ ಹಾಗೂ ಇತರ ಸಂಸ್ಥೆಗಳಿಂದ ಪುತ್ತಿಗೆಯಲ್ಲಿ ಬೃಹತ್ ಆರೋಗ್ಯ ಶಿಬಿರ
ICYM ಕೇಂದ್ರೀಯ ಅಧ್ಯಕ್ಷ ವಿಜೋಯ್ ಅಶ್ವಿನ್ ಕಾರ್ಡೋಜರವರ ನೇತೃತ್ವ

ವಿಜೋಯ್ ಅಶ್ವಿನ್ ಕಾರ್ಡೋಜ ಅವರ ನೇತೃತ್ವದಲ್ಲಿ, ಗ್ರಾಮ ಪಂಚಾಯತ್ ಪುತ್ತಿಗೆ ಹಾಗೂ AJ ಆಸ್ಪತ್ರೆ ಮಂಗಳೂರು ಇವರ ಸಹಯೋಗದಲ್ಲಿ, ಶ್ರೀ ಸೋಮನಾಥೇಶ್ವರ ಸಂಜೀವಿನಿ ಒಕ್ಕೂಟ ಪುತ್ತಿಗೆ, ICYM, ಕಥೊಲಿಕ್ ಸಭಾ ಸಂಪಿಗೆ ಘಟಕ, ಡೈಲಿ, ಶ್ರೀದೇವಿ ಕ್ರಿಕೆಟರ್ಸ್, ನೆಲ್ಲಿಗುಡ್ಡೆ ಮಿತ್ರ ಮಂಡಳಿ ಹಾಗೂ ಇನ್ನರ್ ವೀಲ್ ಕ್ಲಬ್ ಮೂಡಬಿದಿರೆ ಇವರ ಸಹಕಾರದೊಂದಿಗೆ ಬೃಹತ್ ಆರೋಗ್ಯ ಶಿಬಿರವು ಪುತ್ತಿಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟೆಂಬರ್ 21ರಂದು ಭಾನುವಾರ ಜರುಗಿತು.




ಕಾರ್ಯಕ್ರಮವನ್ನು ಇನ್ನರ್ ವೀಲ್ ಕ್ಲಬ್ ಮೂಡಬಿದಿರೆಯ ಅಧ್ಯಕ್ಷೆ ಶ್ವೇತಾ ಜೈನ್ ಉದ್ಘಾಟಿಸಿ ಮಾತನಾಡಿ, “ಉಚಿತ ಆರೋಗ್ಯ ಶಿಬಿರವು ಸಾರ್ವಜನಿಕರಿಗೆ ತಮ್ಮ ಆರೋಗ್ಯವನ್ನು ಪರೀಕ್ಷಿಸಲು ಉತ್ತಮ ಅವಕಾಶವಾಗಿದೆ” ಎಂದು ಹೇಳಿದರು. ಈ ಶಿಬಿರದಲ್ಲಿ ದಂತ ಚಿಕಿತ್ಸೆ, ಕಣ್ಣು ತಪಾಸಣೆ, ಮಕ್ಕಳ ತಜ್ಞರ ಸಲಹೆ ಹಾಗೂ ಸ್ತ್ರೀರೋಗ ಸಂಬಂಧಿತ ತಪಾಸಣೆಗಳನ್ನು ನಡೆಸಲಾಯಿತು. ಸುಮಾರು 120 ಮಂದಿ ಸಾರ್ವಜನಿಕರು ಈ ಶಿಬಿರದಲ್ಲಿ ಭಾಗವಹಿಸಿ ಸೂಕ್ತ ಚಿಕಿತ್ಸೆ ಹಾಗೂ ಆರೋಗ್ಯ ಸಂಬಂಧಿತ ಮಾಹಿತಿಯನ್ನು ಪಡೆದರು.

“ಉಚಿತ ಆರೋಗ್ಯ ಶಿಬಿರವು ಗ್ರಾಮೀಣ ಪ್ರದೇಶದ ಜನತೆಗೆ ತಜ್ಞ ವೈದ್ಯರನ್ನು ಸಂಪರ್ಕಿಸಲು ಮತ್ತು ತಕ್ಷಣದ ವೈದ್ಯಕೀಯ ಸಲಹೆ ಪಡೆಯಲು ಮಹತ್ತರ ವೇದಿಕೆಯಾಯಿತು. ಆರೋಗ್ಯ ತಪಾಸಣೆ ಜೊತೆಗೆ ಸರಿಯಾದ ಜೀವನಶೈಲಿಯ ಕುರಿತು ಅರಿವು ಮೂಡಿಸುವ ಕಾರ್ಯವೂ ನಡೆಯಿತು. ಇಂತಹ ಶಿಬಿರಗಳು ಜನಸಾಮಾನ್ಯರಲ್ಲಿ ಆರೋಗ್ಯ ಜಾಗೃತಿ ಹೆಚ್ಚಿಸಲು ನೆರವಾಗುತ್ತವೆ” ಎಂದು ಸಾರ್ವಜನಿಕರು ಶಿಬಿರದ ಪ್ರಯೋಜನ ಪಡೆದು ಹರ್ಷ ವ್ಯಕ್ತಪಡಿಸಿದರು.


ಶಿಬಿರದಲ್ಲಿ ಪುತ್ತಿಗೆ ಪಂಚಾಯತ್ ಉಪಾಧ್ಯಕ್ಷ ದಯಾನಂದ, ಫುಡಾರ್ ಗ್ರೂಪ್ ಕಂಪೆನಿಯ CEO ವಿಜೋಯ್ ಅಶ್ವಿನ್ ಕಾರ್ಡೋಜ ಹಾಗೂ ಇನ್ನರ್ ವೀಲ್ ಕ್ಲಬ್ ಮೂಡಬಿದಿರೆ ಅಧ್ಯಕ್ಷೆ ಶ್ವೇತಾ ಜೈನ್ ಉಪಸ್ಥಿತರಿದ್ದರು.




