ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಅಶ್ರಫ್ ಬಂಧನ
ವಿಟ್ಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಎರಡು ಗಂಭೀರ ಪ್ರಕರಣಗಳ ಆರೋಪಿ ಮಂಜೇಶ್ವರ ತಾಲೂಕಿನ ಕೂಳೂರು ಗ್ರಾಮದ 32 ವರ್ಷ ಪ್ರಾಯದ ಅಶ್ರಫ್ @ ಚಿಲ್ಲಿ ಅಶ್ರಫ್ ಎಂಬಾತನನ್ನು ಸೆಪ್ಟೆಂಬರ್ 21ರಂದು ಭಾನುವಾರ ಕೂಳೂರು, ಮಂಜೇಶ್ವರದಲ್ಲಿ ಪೊಲೀಸರು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

🔹 ಪ್ರಕರಣ – 1: ವಿಟ್ಲ ಪೊಲೀಸ್ ಠಾಣಾ ಅ.ಕ್ರ. 165/2015, ಕಲಂ 397 IPC. 07-08-2015 ರಂದು ವಿಟ್ಲಪೇಟೆಯಲ್ಲಿ ಜಗದೀಶ್ ಕಾಮತ್ ಎಂಬುವವರಿಗೆ ಮೆಣಸಿನ ಪುಡಿ ಎರಚಿ ದರೋಡೆ ನಡೆಸಿದ ಪ್ರಕರಣ. ಈ ಪ್ರಕರಣದಲ್ಲಿ ಆರೋಪಿ ದಸ್ತಗಿರಿಯಾಗದೇ ತಲೆಮರೆಸಿಕೊಂಡಿದ್ದರಿಂದ LPC-03/2025 ರಂತೆ ವಾರೆಂಟ್ ಜಾರಿಯಾಗಿತ್ತು.

🔹 ಪ್ರಕರಣ – 2: ವಿಟ್ಲ ಪೊಲೀಸ್ ಠಾಣಾ ಅ.ಕ್ರ. 16/2016, ಕಲಂ 457, 380 IPC. 23-01-2016 ರಂದು ಕೊಲ್ನಾಡು ಗ್ರಾಮದ ವೈನ್ ಶಾಪ್‌ನ ಬಾಗಿಲು ಮುರಿದು ನಗದು ಕಳ್ಳತನ ಮಾಡಿದ ಪ್ರಕರಣ. ಈ ಪ್ರಕರಣದಲ್ಲಿಯೂ ಆರೋಪಿ ತಲೆಮರೆಸಿಕೊಂಡಿದ್ದರಿಂದ ಮಾನ್ಯ ನ್ಯಾಯಾಲಯವು ಕಲಂ 82 ಹಾಗೂ 83ರ ಪ್ರಕಾರ ವಾರೆಂಟ್ ಜಾರಿಗೊಳಿಸಿತ್ತು.
ಈ ಎರಡು ಪ್ರಕರಣಗಳಲ್ಲಿಯೂ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.




