July 15, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

“ಮಕ್ಕಳಿಗೆ ಭಾಷಣ ತರಬೇತಿ ನೀಡುವುದು ಅತೀ ಮುಖ್ಯ ಇದರಿಂದ ಮಕ್ಕಳ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ” – ಫಾದರ್ ವಾಲ್ಟರ್ ಡಿಮೆಲ್ಲೊ

ಮಕ್ಕಳಿಗೆ ಭಾಷಣ ತರಬೇತಿ ನೀಡಿದ ಕಥೊಲಿಕ್ ಸಭಾ ಬೆಳ್ತಂಗಡಿ ವಲಯ

ವಲಯದ 270 ಮಕ್ಕಳ ಸಕ್ರೀಯ ಭಾಗವಹಿಸುವಿಕೆ

ಸೆಪ್ಟೆಂಬರ್ 21 ರಂದು ಭಾನುವಾರ ಕಥೊಲಿಕ್ ಸಭಾ ಮಂಗ್ಳುರ್ ಪ್ರದೇಶ್ (ರಿ.) ಇದರ ಬೆಳ್ತಂಗಡಿ ವಲಯದ ಮೇಲ್ ಉಸ್ತುವಾರಿಯಲ್ಲಿ ಮಕ್ಕಳಿಗೆ ಭಾಷಣ ಸ್ಪರ್ಧೆಯ ತರಬೇತಿ ಬೆಳ್ತಂಗಡಿ ಚರ್ಚ್ ನ ಹೋಲಿ ರಿಡೀಮರ್ ಆಡಿಟೋರಿಯಂ ಸಭಾಂಗಣದಲ್ಲಿ ನಡೆಯಿತು.

ಬೆಳ್ತಂಗಡಿ ವಲಯದ ಶ್ರೇಷ್ಠ ಗುರು ಹಾಗೂ ಕಥೊಲಿಕ್ ಸಭಾ ಬೆಳ್ತಂಗಡಿ ವಲಯದ ಆಧ್ಯಾತ್ಮಿಕ ನಿರ್ದೇಶಕರಾದ ಅತೀ ವಂದನೀಯ ಫಾದರ್ ವಾಲ್ಟರ್ ಡಿಮೆಲ್ಲೊರವರು ಈ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಅವರು ಮಾತನಾಡಿ – “ಮಕ್ಕಳಿಗೆ ಭಾಷಣ ತರಬೇತಿ ನೀಡುವುದು ಅತೀ ಮುಖ್ಯ. ಇದರಿಂದ ಮಕ್ಕಳ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ, ಸಾರ್ವಜನಿಕವಾಗಿ ಮಾತನಾಡುವ ಸಾಮರ್ಥ್ಯ ಬೆಳೆಯುತ್ತದೆ. ನಾಯಕತ್ವದ ಗುಣಗಳು ಬೆಳೆಯಲು ಸಹಕಾರಿ ಆಗುತ್ತದೆ ಹಾಗೂ ಭವಿಷ್ಯದಲ್ಲಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಲು ಪ್ರೇರಣೆ ದೊರೆಯುತ್ತದೆ” ಎಂದು ಹೇಳಿದರು.

ಭಾಷಣ ತರಬೇತಿಯ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ಯೆನೆಪೋಯ ವಿಶ್ವವಿದ್ಯಾನಿಲಯದ ವಿದ್ವಾಂಸರಾದ ಮ್ಯುರಲ್ ಹೆನ್ರಿಟಾ ಕುಟಿನ್ಹಾ ಆಗಮಿಸಿದ್ದರು. ಅವರು ತಮ್ಮ ಮಾರ್ಗದರ್ಶನದಲ್ಲಿ ಕೆಳಗಿನ ಐದು ಪ್ರಮುಖ ಅಂಶಗಳನ್ನು ಮಕ್ಕಳಿಗೆ ತಿಳಿಸಿದರು:

1️ ಭಾಷಣ ಮಾಡುವಾಗ ಆತ್ಮವಿಶ್ವಾಸದಿಂದ ನಿಂತುಕೊಳ್ಳುವುದು.

2️ ಶ್ರೋತೃಗಳ ಗಮನ ಸೆಳೆಯಲು ಶಬ್ದದ ಲಯ ಹಾಗೂ ಸ್ವರದಲ್ಲಿ ವ್ಯತ್ಯಾಸ ತರುವುದು.

3️ ವಿಷಯವನ್ನು ಸರಳವಾಗಿ ಹಾಗೂ ಸ್ಪಷ್ಟವಾಗಿ ಮಂಡಿಸುವುದು.

4️ ಶರೀರಭಾಷೆ (Body Language) ಗೆ ಗಮನ ಕೊಡುವುದು.

5️ ಸಮಯ ನಿಯಂತ್ರಣವನ್ನು ಪಾಲಿಸುವುದು.

ಹೀಗೆ ಮಕ್ಕಳ ಆತ್ಮವಿಶ್ವಾಸ ಬೆಳೆಸುವಲ್ಲಿ ಈ ಭಾಷಣ ತರಬೇತಿಯು ಬೆಳ್ತಂಗಡಿಯಲ್ಲಿ ಯಶಸ್ವಿಯಾಗಿ ಆಯೋಜನೆಯಾಯಿತು. ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಕೇಂದ್ರಿಯ ಮಾಜಿ ಅಧ್ಯಕ್ಷ ಹಾಗೂ ಪ್ರಸ್ತುತ ರಾಜಕೀಯ ಸಂಚಾಲಕ ಸ್ಟ್ಯಾನಿ ಲೋಬೊ ಬಂಟ್ವಾಳ, ಕಥೊಲಿಕ್ ಸಭಾ ಬೆಳ್ತಂಗಡಿ ವಲಯದ ಅಧ್ಯಕ್ಷ ಆಲ್ಬರ್ಟ್ ಸುನಿಲ್ ಮೊನಿಸ್, ಕಾರ್ಯದರ್ಶಿ ಸ್ಟ್ಯಾನಿ ಪಿಂಟೊ, ಬೆಳ್ತಂಗಡಿ ಘಟಕದ ಅಧ್ಯಕ್ಷ ಗಿಲ್ಬರ್ಟ್ ಪಿಂಟೋ ಹಾಗೂ ವಲಯದ ಭಾಷಣ ಸ್ಪರ್ಧೆಯ ಸಂಚಾಲಕ ಡೇನಿಯಲ್ ಕ್ರಾಸ್ತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಐರಿನ್ ಸಿಕ್ವೇರಾ ಸಂಪನ್ಮೂಲ ವ್ಯಕ್ತಿಯವರ ಪರಿಚಯ ಮಾಡಿಕೊಟ್ಟರು. ವಲಯದ ಭಾಷಣ ಸ್ಪರ್ಧೆಯ ಸಂಚಾಲಕ ಡೇನಿಯಲ್ ಕ್ರಾಸ್ತಾ ಧನ್ಯವಾದವನ್ನು ಆರ್ಪಿಸಿದರು. ಬೆಳ್ತಂಗಡಿ ಚರ್ಚ್ ನ ಪಾಲನಾ ಸಮಿತಿಯ ಉಪಾಧ್ಯಕ್ಷ ವಾಲ್ಟರ್ ಮೊನಿಸ್ ಕಾರ್ಯಕ್ರಮವನ್ನು ನಿರೂಪಿಸಿದರು.

ಭಾಷಣ ತರಬೇತಿ ಕಾರ್ಯಕ್ರಮಕ್ಕೆ ಸುಮಾರು 270 ಮಕ್ಕಳು ಭಾಗವಹಿಸಿದ್ದರು. ಇದರಲ್ಲಿ ಮಡಂತ್ಯಾರ್ ಚರ್ಚ್ ನ ಮಕ್ಕಳು ಅತೀ ಹೆಚ್ಚು ಭಾಗವಹಿಸಿದ್ದರಿಂದ ಕಥೊಲಿಕ್ ಸಭಾ ಮಡಂತ್ಯಾರ್ ಘಟಕದ ಅಧ್ಯಕ್ಷ ವಿನ್ಸೆಂಟ್ ಡಿಸೋಜ ಹಾಗೂ ವಲಯದ ನಿಕಟ ಪೂರ್ವ ಅಧ್ಯಕ್ಶ ಹಾಗೂ ಪ್ರಸ್ತುತ ಕಥೊಲಿಕ್ ಸಭಾ ಕೇಂದ್ರಿಯ ದ್ವಿತೀಯ ಉಪಾಧ್ಯಕ್ಷ ಲಿಯೋ ರೊಡ್ರಿಗಸ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

You may also like

News

ಕೆನರಾ ಬ್ಯಾಂಕ್ ₹8 ಲಕ್ಷ ಸಾಲ – ಲೋಕ ಅದಾಲತ್‌ನಲ್ಲಿ ₹15 ಸಾವಿರಕ್ಕೆ ಇತ್ಯರ್ಥ

ಮಾನವೀಯತೆ ಮೆರೆದ ನ್ಯಾಯಾಲಯ ಕಾನೂನು ಕೇವಲ ನಿಯಮಗಳ ಸಂಕಲನ ಮಾತ್ರವಲ್ಲ, ಅದರ ಹಿಂದೆ ಮಾನವೀಯತೆಯ ಹೃದಯವೂ ಇದೆ ಎಂಬುದನ್ನು ಚಿಕ್ಕಮಗಳೂರಿನಲ್ಲಿ ನಡೆದ ಒಂದು ಅಪರೂಪದ ಘಟನೆ ಮತ್ತೊಮ್ಮೆ
News

Father Muller Homoeopathic Medical College Hosts Dr M.L. Dhawale Memorial Seminar 2026

The Department of Practice of Medicine, Father Muller Homoeopathic Medical College & Hospital, Deralakatte, Mangalore, organised the Dr M.L. Dhawale

You cannot copy content of this page