November 8, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ರಮಾನಾಥ ರೈ ಹುಟ್ಟು ಹಬ್ಬದ ಪ್ರಯುಕ್ತ ಅಭಿನಂದನೆ, ಸನ್ಮಾನ ಹಾಗೂ ಕಾಂಗ್ರೆಸ್ ನ ಹಿರಿಯ ಕಾರ್ಯಕರ್ತರಿಗೆ ಗೌರವಾರ್ಪಣೆ

ಬಿ. ರಮಾನಾಥ ರೈ ಅಭಿಮಾನಿ ಬಳಗ ಹಾಗೂ ಸಕ್ಸಸ್ ಪರಿವಾರ ಕುಕ್ಕರಬೆಟ್ಟು ಇದರ ಆಶ್ರಯದಲ್ಲಿ ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಬಿ. ರಮಾನಾಥ ರೈ ಅವರ 74 ನೇ ಹುಟ್ಟು ಹಬ್ಬದ ಪ್ರಯುಕ್ತ ಅಭಿನಂದನೆ, ಸನ್ಮಾನ ಹಾಗೂ ಕಾಂಗ್ರೆಸ್ ನ ಹಿರಿಯ ಕಾರ್ಯಕರ್ತರಿಗೆ ಗೌರವಾರ್ಪಣೆ ಸಮಾರಂಭವು ನೇರಳಕಟ್ಟೆಯ ಜನಪ್ರಿಯ ಗಾರ್ಡನ್ ನಲ್ಲಿ ನಡೆಯಿತು. ಅಭಿನಂದನೆ ಸ್ವೀಕರಿಸಿದ ರಮಾನಾಥ ರೈಯವರು ಮಾತನಾಡಿ ಬಂಟ್ವಾಳ ಕ್ಷೇತ್ರ ಹಾಗೂ ಈ ರಾಜ್ಯದ ಜನತೆ ನನ್ನ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸಕ್ಕೆ ನಾನು ಯಾವತ್ತೂ  ಚಿರಋಣಿಯಾಗಿದ್ದೇನೆ. ಭಾರತದ ಸಂವಿಧಾನದ ಆಶಯಗಳಿಗೆ ಭದ್ದನಾಗಿ ಯಾವುದೇ ರೀತಿಯ ತಾರತಮ್ಯ ಮಾಡದೇ ನಾನು ಕಾರ್ಯ ನಿರ್ವಹಿಸಿದ್ದೇನೆ ಎಂದ ಅವರು ಕಳೆದ 6 ವರ್ಷಗಳಿಂದ ನನ್ನ ಹುಟ್ಟು ಹಬ್ಬವನ್ನು ಆಚರಿಸುತ್ತಾ ಬಂದಿರುವ ಫಾರೂಕ್ ಬಯಬೆ ಈ ಬಾರಿ ನನಗೆ ಅಭಿನಂದನೆಯ ಜೊತೆಗೆ 74 ಮಂದಿ ಕಾಂಗ್ರೆಸ್ ನ ಹಿರಿಯ ಕಾರ್ಯಕರ್ತರಿಗೆ ಗೌರವಾರ್ಪಣೆ ಮಾಡಿರುವುದು ಶ್ಲಾಘನೀಯ ಎಂದರು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಕೆಪಿಸಿಸಿ ಕಾರ್ಯದರ್ಶಿ ಎಂ. ಎಸ್. ಮುಹಮ್ಮದ್, ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಡಾ| ರಘು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪ್ರಸಾದ್ ಆಳ್ವ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಬಡಕಬೈಲು, ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಫಾರೂಕ್ ಪೆರ್ನೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಉಮಾನಾಥ ಶೆಟ್ಟಿ, ಜಯಂತಿ ವಿ. ಪೂಜಾರಿ, ಪ್ರಮುಖರಾದ ಬಿ.ಎಂ. ಅಬ್ಬಾಸ್ ಅಲಿ, ಸುದೀಪ್ ಕುಮಾರ್ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ, ಮುರಳೀಧರ ರೈ ಮಠಂದಬೆಟ್ಟು, ಮುಹಮ್ಮದ್ ಬಡಗನ್ನೂರು, ಹಮೀದ್ ಸಕ್ಸಸ್ ಕುಕ್ಕರಬೆಟ್ಟು, ಕೆ.ಬಿ. ಸಲೀಂ ಹಾಜಿ, ಅಹ್ಮದ್ ಕುಕ್ಕರಬೆಟ್ಟು, ಸಿರಾಜ್ ಕುಕ್ಕರಬೆಟ್ಟು, ರಝಾಕ್ ಕುಕ್ಕರಬೆಟ್ಟು, ಸಮಿತಾ ಡಿ. ಪೂಜಾರಿ, ಮುಹಮ್ಮದ್ ಕುಕ್ಕರಬೆಟ್ಟು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ನೆಟ್ಲಮುಡ್ನೂರು ವಲಯ ಕಾಂಗ್ರೆಸ್ ಸಮಿತಿ ವತಿಯಿಂದ ರಮಾನಾಥ ರೈಯವರನ್ನು ಸನ್ಮಾನಿಸಲಾಯಿತು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ. ತೌಸೀಫ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಭಂಡಾರಿ, ಸಹಕಾರ ಕ್ಷೇತ್ರದ ಸಾಧಕ ತೋಯಜಾಕ್ಷ ಶೆಟ್ಟಿ ಪೆರ್ನೆ ಹಾಗೂ ಸಮಾಜ ಸೇವಕ ಸುದರ್ಶನ್ ಪಡಿಯಾರ್ ವಿಟ್ಲ ಅವರನ್ನು ಸನ್ಮಾನಿಸಲಾಯಿತು.

ನೆಟ್ಲಮುಡ್ನೂರು ಗ್ರಾಮದ ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾದ ಎನ್.ಕೆ. ಕಾಸಿಂ ನೇರಳಕಟ್ಟೆ, ಪಿ.ಕೆ. ಅಬ್ದುಲ್ ಖಾದರ್ ಪರ್ಲೊಟ್ಟು, ಅಬ್ಬಾಸ್ ನೇರಳಕಟ್ಟೆ, ಪದ್ಮನಾಭ ಶೆಟ್ಟಿ ಕೊಡಂಗೆಮಾರು, ಪ್ರೇಮ ಜಯರಾಮ ಶೆಟ್ಟಿ ಹೊಸಹೊಕ್ಲು, ರಾಮಚಂದ್ರ ಶೆಟ್ಟಿ ಕೊಡಂಗೆಮಾರು, ಮುಹಮ್ಮದ್ ಹಾಜಿ ನೆಡ್ಯಾಲು, ಎನ್.ಪಿ. ಉಮ್ಮರ್ ನೇರಳಕಟ್ಟೆ, ಮೊಯಿದು ಕುಂಞಿ ಪಂತಡ್ಕ, ನಾರಾಯಣ ಗೌಡ ಮೀನಾವು, ಭವಾನಿ ಗಣೇಶ ನಗರ, ಲಕ್ಷ್ಮೀ ಪಂತಡ್ಕ, ನೀಲಯ್ಯ ಏಮಾಜೆ, ರಾಮ ನಲಿಕೆ ಏಮಾಜೆ, ಮೋಹನ ಏಮಾಜೆ, ಕಮಲ ಏಮಾಜೆ, ಇಸ್ಮಾಯಿಲ್ ಕುಕ್ಕರಬೆಟ್ಟು, ಗಂಗಯ್ಯ ಪೂಜಾರಿ ಪರ್ಲೋಟ್ಟು, ನಾರಣಪ್ಪ ಪೂಜಾರಿ ಮೀನಾವು, ಡಿ. ಹಮೀದ್ ಕನ್ಯಾನ, ಮೂಸಾ ಕುಂಞಿ ಕೆಂಪುಗುಡ್ಡೆ, ಮಾಣಿ ಗ್ರಾಮದ ಇಬ್ರಾಹಿಂ ಹಾಜಿ ಮಾಣಿ, ಪುಷ್ಪರಾಜ್ ಶೆಟ್ಟಿ ಸಾಗು, ನಾರಾಯಣ ಶೆಟ್ಟಿ ಕೊಡಾಜೆ, ಹಸೈನಾರ್ ಎಸ್.ಎಸ್. ಕೊಡಾಜೆ, ರಾಜ್ ಕಮಲ್ ಹೆಗ್ಡೆ, ಸುಲೈಮಾನ್ ಸೂರಿಕುಮೇರು, ಐತಪ್ಪ ಸಾಲ್ಯಾನ್ ಪಟ್ಲಕೋಡಿ, ಅನಂತಾಡಿ ಗ್ರಾಮದ ಜಗನ್ನಾಥ ಶೆಟ್ಟಿ ಕರಿಂಕ, ಗೌರಿ ನಿಡ್ಯಾರ, ಕಮಲಾಕ್ಷಿ ಬಾಕಿಲ, ನಾರಾಯಣ ಸಾಲ್ಯಾನ್ ಅನಂತಾಡಿ, ಹೊನ್ನಪ್ಪ ಪೂಜಾರಿ ಹಿರ್ಥಂಧ ಬೈಲ್, ವಿಮಲ ಜನತಾಗೃಹ, ವಿಮಲ ಗೌಡ ವಡಿತೇಲು, ಚಂದಪ್ಪ ಪೂಜಾರಿ ಜೋಗಿಬೆಟ್ಟು, ಪೆರ್ನೆ ಗ್ರಾಮದ ಫ್ಲೋರಿನ್ ಪಿಂಟೋ, ಚಿನ್ನಮ್ಮ ಪೂಜಾರಿ, ಅಬ್ದುಲ್ ರಝಾಕ್ ಕರುವೇಲು, ಅಬ್ದುಲ್ಲಾ ಶಾಫಿ, ಚೆನ್ನಕೇಶವ ಬಿಳಿಯೂರು, ಅಬ್ದುಲ್ ರಝಾಕ್ ಬಿಳಿಯೂರು, ಪೆರಾಜೆ ಗ್ರಾಮದ ಶಾಂತಪ್ಪ ಮೂಲ್ಯ ಏನಾಜೆ, ಹಸನಬ್ಬ ಜೋಗಿಬೆಟ್ಟು, ರಾಮಣ್ಣ ನಾಯ್ಕ ಮಡಲ, ಇಸುಬು ಬ್ಯಾರಿ ಮಡಲ, ವಸಂತ ನಾಯ್ಕ ಪೆರಾಜೆ, ಸುಂದರ ಪೂಜಾರಿ ಪೆರಾಜೆ, ಪಿ.ಎಸ್. ಕೇಶವ ಬಂಗೇರ, ಅಬ್ದುಲ್ ಖಾದರ್ ಜೋಗಿಬೆಟ್ಟು, ಪಿ.ಬಿ. ಆದಂ ಮಡಲ, ಅಬ್ದುಲ್ ಕರೀಂ ಬುಡೋಳಿ, ಕೆದಿಲ ಗ್ರಾಮದ ಹಾಜಿ ಆದಂ ಕುಂಞಿ, ರೋಬರ್ಟ್ ಲಸ್ರಾದೋ, ರಾಮಣ್ಣ ಬಂಗೇರ, ಸಾಹುಲ್ ಹಮೀದ್ ಬೀಟಿಗೆ, ಉಮ್ಮರಬ್ಬ, ಜಿ.ಮಹಮ್ಮದ್, ಗಿರಿಯಪ್ಪ ಮೂಲ್ಯ, ಯೂಸುಫ್ ಕೋಡಿ, ಬೀಪಾತಿಮ ಕೆದಿಲ, ಕೊಳ್ನಾಡು ಗ್ರಾಮದ ಸಂಕಪ್ಪ ಗೌಡ, ಯೂಸುಫ್ ಟಿ, ಗಂಗಾಧರ ಚೌಟ, ಇಬ್ರಾಹಿಂ ಟಿ, ಇಸಾಕ್ ಸಾಲ್ಮರ ಮೊದಲಾದವರು ಸೇರಿದಂತೆ ಒಟ್ಟು 74 ಮಂದಿಗೆ ಗೌರವಾರ್ಪಣೆ ಸಲ್ಲಿಸಲಾಯಿತು.

ರಮಾನಾಥ ರೈ ಅಭಿಮಾನಿ ಬಳಗದ ಮುಖ್ಯಸ್ಥ, ಎನ್.ಎಸ್.ಯು.ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಯಬೆ ಸ್ವಾಗತಿಸಿ, ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ಲತೀಫ್ ನೇರಳಕಟ್ಟೆ ವಂದಿಸಿದರು. ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.

You may also like

News

ಮಾಣಿ ಗ್ರಾಮದಲ್ಲಿ ಹಳೆ ಮನೆ ದುರಸ್ತಿ ಪರವಾನಗಿ ಪಡೆದು ಸರಕಾರಿ ಜಮೀನಿನ ಮೇಲೆ ಅಕ್ರಮವಾಗಿ ನಿರ್ಮಿಸಿದ ಐಶಾರಾಮಿ ಬಂಗ್ಲೆ

ಯಾವುದೇ ದಾಖಲೆಗಳಿಲ್ಲದೆ ಸರಕಾರಕ್ಕೆ ವಂಚನೆ ಮಾಡಿದ್ದನ್ನು ಬಯಲಿಗೆಳೆದ ಸಾಮಾಜಿಕ ಕಾರ್ಯಕರ್ತ ಅತಿಕ್ರಮಿತ ಕಟ್ಟಡ ಕೂಡಲೇ ತೆರವುಗೊಳಿಸಲು ಲೂಸಿಯಾ ಮೆಟಿಲ್ಡಾ ಪಿಂಟೊರವರಿಗೆ ಬಂಟ್ವಾಳ ತಹಶೀಲ್ದಾರ್ ನೋಟಿಸ್ ಜಾರಿ ಮಾಣಿ
News

ನಕಲಿ ದಾಖಲೆ ಪ್ರಕರಣದಲ್ಲಿ ಆರೋಪಿ ಅಬ್ದುಲ್ ಹಾಶೀಮ್ ಬಂಧನ

ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯವನ್ನು ವಂಚಿಸಿದ ಭೂಪ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ 34 ವರ್ಷ ಪ್ರಾಯದ ಅಬ್ದುಲ್ ಹಾಶೀಮ್  ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ನವೆಂಬರ್ 6ರಂದು

You cannot copy content of this page