July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮೊಗರ್ನಾಡು ಚರ್ಚ್ ನ ಹೊಸಾನ್ನಾ 250 ನೇ ವರ್ಷದ ಜುಬಿಲಿ ಪ್ರಯುಕ್ತ ವಲಯದಲ್ಲಿ ಕೌಟುಂಬಿಕ ಐಕ್ಯತಾ ಸಂಭ್ರಮಾಚರಣೆ

ಮೊಗರ್ನಾಡು ದೇವಮಾತಾ ಚರ್ಚ್ ನ 250 ನೇ ವರ್ಷದ ಜುಬಿಲಿ ಪ್ರಯುಕ್ತ ಹೊಸಾನ್ನಾ  ವಲಯದಲ್ಲಿ ಕೌಟುಂಬಿಕ ಸಂಭ್ರಮವನ್ನು ಸೆಪ್ಟೆಂಬರ್ 21ರಂದು ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆಮ್ಟೂರು ದೇವ ಮಾತ ಶಾಲೆಯ ಪ್ರಾಂಶುಪಾಲರಾದ ವಂದನೀಯ ಫಾದರ್ ನವೀನ್ ಪ್ರಕಾಶ್ ಪಿಂಟೋರವರು ವಹಿಸಿದ್ದರು. ಅವರು ಮಾತನಾಡಿ “ಪ್ರಪಂಚದಲ್ಲಿ ಯಾವುದೇ ಕುಟುಂಬವು ಪರಿಪೂರ್ಣವಲ್ಲ. ಆದರೆ ಪರಿಪೂರ್ಣವಾಗಲು ಎಲ್ಲರೂ ಶ್ರಮಿಸಬಹುದು. ಪ್ರತಿಯೊಬ್ಬರೂ ತಮ್ಮ ಕುಟುಂಬದ ಘನತೆ ಗೌರವವನ್ನು ಎತ್ತಿ ಹಿಡಿಯಬೇಕು. ಮಾತ್ರವಲ್ಲದೆ ನೆರೆಕೆರೆಯವರೊಂದಿಗೂ ಸೌಹಾರ್ದತೆಯಿಂದ ಇರಬೇಕು” ಎಂದು ಕರೆಯಿತ್ತರು.

ಸಂಪನ್ಮೂಲ ವ್ಯಕ್ತಿಗಳಾಗಿ ವಂದನೀಯ ಫಾದರ್ ಆಸ್ಟಿನ್ ಫೆರ್ನಾಂಡಿಸ್ ಆಗಮಿಸಿದ್ದರು. ಪ್ರಸ್ತುತ ಕಾಲದಲ್ಲಿನ ನಾಲ್ಕು ಅವಿಭಕ್ತ ಕುಟುಂಬಗಳನ್ನು ಹಾಗೂ ಎರಡಕ್ಕಿಂತ ಹೆಚ್ಚು ಮಕ್ಕಳನ್ನು ಹಡೆದ  9  ದಂಪತಿಗಳನ್ನು ಸನ್ಮಾನಿಸಲಾಯಿತು. ವಲಯದ 15 ಮಂದಿ ಶಿಕ್ಷಕರನ್ನೂ ಈ ಸಂದರ್ಭದಲ್ಲಿ ಶಾಲು ಹೊದಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ದೇವಮಾತಾ ಕಾನ್ವೆಂಟಿನ ಭಗಿನಿ ಆ್ಯನ್ನಿ ಡಿಸೋಜ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸಂತೋಷ್ ಡಿಸೋಜ, ಕಾರ್ಯದರ್ಶಿ ವಿಲ್ಫ್ರೆಡ್ ಲೋಬೊ, ಆಯೋಗಗಳ ಸಂಯೋಜಕಿ ಎಮಿಲಿಯಾನ ಡಿಕುನ್ಹಾ, ಸಂಚಾಲಕಿ ರೀಟಾ ಫೆರ್ನಾಂಡಿಸ್ ಮತ್ತು ನಾಲ್ಕು ವಾಳೆಗಳ ಗುರಿಕಾರರಾದ ಫೆಡ್ರಿಕ್ ಫುಡ್ತಾದೊ, ವಿಲಿಯಂ ಪಿರೇರಾ, ರವಿ ಫೆರಾವೊ ಮತ್ತು ರಾಜೇಶ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ವಲಯ ಮುಖ್ಯಸ್ಥರಾದ ಸಂತೋಷ್ ಡಿಸೋಜ ಸ್ವಾಗತಿಸಿರು. ಪ್ಲೇವಿ ಲೋಬೊ ವಂದನಾಪನಗೈದರು. ವೀಣಾ ಫೆನಾಂಡಿಸ್ ಮತ್ತು ರೆನಿಟಾ ಪ್ರಿಯ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ 136 ಕುಟುಂಬದಿಂದ ಸುಮಾರು 300 ಸದಸ್ಯರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲರಿಗೂ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು.

You may also like

News

ಬಸ್ಸಿನಲ್ಲಿ ಕಾಲೇಜು ವಿದ್ಯಾರ್ಥಿನಿಯರಿಗೆ ಗುಪ್ತಾಂಗ ಪ್ರದರ್ಶಿಸಿ ಲೈಂಗಿಕ ಕಿರುಕುಳ – ಸೆಲೆನ ಬಸ್ ಕಂಡಕ್ಟರ್ ಬಂಧನ

ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕಾಲೇಜು ವಿದ್ಯಾರ್ಥಿನಿಯರನ್ನು ಗುರಿಯಾಗಿಸಿ ಕೊಂಡು ಅಸಭ್ಯವಾಗಿ ವರ್ತಿಸಿ, ಗುಪ್ತಾಂಗ ಪ್ರದರ್ಶನ ಮಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಸೆಲೆನ ಬಸ್ ಕಂಡಕ್ಟರ್‌ನನ್ನು ಮಂಗಳೂರು
News

ದಾರುಸ್ಸಲಾಂ ದಶಮಾನೋತ್ಸವ ಹಾಗೂ ಪ್ರಥಮ ಸನದುದಾನ ಮಹಾಸಭೆ – ಭವ್ಯ ಸ್ವಾಗತ ಸಮಿತಿ ರಚನೆ

ಸ್ಥಳೀಯ ಸಂಸ್ಥೆಯಾದ ದಾರುಸ್ಸಲಾಂ ಸೆಂಟರ್‌ನ 10ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ ಹಾಗೂ ಪ್ರಥಮ ಸನದುದಾನ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೃಹತ್ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಈ ಐತಿಹಾಸಿಕ ಕಾರ್ಯಕ್ರಮವು

You cannot copy content of this page