August 31, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕದ್ರಿಯ ಲೋಬೊ ಲೇನ್‌ನಲ್ಲಿ ನಕಲಿ ವೈನ್ ತಯಾರಿಕಾ ಮನೆ ಪತ್ತೆ

ರೂಪಾಯಿ 5.57 ಲಕ್ಷ ಮೌಲ್ಯದ ವಸ್ತು ಜಪ್ತಿಆರೋಪಿಯ ಬಂಧನ

ಮಾನ್ಯ ಅಬಕಾರಿ ಜಂಟಿ ಆಯುಕ್ತರು ಮಂಗಳೂರು ವಿಭಾಗದ ನಿರ್ದೇಶನದಂತೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾನ್ಯ ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ, ಮಂಗಳೂರು ಉಪ ವಿಭಾಗ–1 ರ ಅಬಕಾರಿ ಉಪ ಅಧೀಕ್ಷಕರ ನೇತೃತ್ವದಲ್ಲಿ ಮಂಗಳೂರು, ತಲಪಾಡಿ ತನಿಖಾ ಠಾಣೆ ಹಾಗೂ ಮಂಗಳೂರು ದಕ್ಷಿಣ ವಲಯ–1 ರ ಅಬಕಾರಿ ನಿರೀಕ್ಷಕರ ತಂಡವು ಸೆಪ್ಟೆಂಬರ್ 22ರಂದು ಕದ್ರಿಯ ಲೋಬೊ ಲೇನ್ ಪ್ರದೇಶದಲ್ಲಿರುವ ಮನೆ ಮೇಲೆ ದಾಳಿ ನಡೆಸಿತು.

ಮೈಕಲ್ ಬ್ಲೈಸ್ ಮಿನೇಜಸ್ ಎಂಬುವವರ ಮನೆಯಲ್ಲಿ ನಡೆದ ದಾಳಿಯಲ್ಲಿ, ಅಧಿಕಾರಿಗಳು ಪಂಚಸಾಕ್ಷಿಗಳ ಸಮ್ಮುಖದಲ್ಲಿ ಕೆಳಕಂಡ ವಸ್ತುಗಳನ್ನು ಪತ್ತೆಹಚ್ಚಿ ಜಪ್ತಿ ಮಾಡಿದರು. ನಕಲಿ ವೈನ್ – 238.500 ಲೀಟರ್, ವೈನ್ ತಯಾರಿಸಲು ಬಳಸಿದ ಕೊಳೆ – 1,500 ಲೀಟರ್, ಮದ್ಯ – 3.180 ಲೀಟರ್ ಹಾಗೂ ನಕಲಿ ವೈನ್ ತಯಾರಿಕಾ ಸಲಕರಣೆಗಳು.

ಸದರಿ ಆರೋಪಿಯನ್ನು ಬಂಧಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಆರೋಪಿಯ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 13(1)(a), 13(1)(f), 14, 15, 32(1), 32(2)(e), 34, 38(A) ರಂತೆ ಪ್ರಕರಣ ದಾಖಲಿಸಲಾಗಿದೆ. ಈ ದಾಳಿಯಲ್ಲಿ ಜಪ್ತಿ ಮಾಡಿದ ವಸ್ತುಗಳ ಒಟ್ಟು ಅಂದಾಜು ಮೌಲ್ಯ ರೂಪಾಯಿ 5,57,690/- ಎಂದು ಅಬಕಾರಿ ಇಲಾಖೆ ತಿಳಿಸಿದೆ.

You may also like

News

ಪುತ್ತೂರಿನಲ್ಲಿ ಸೆಪ್ಟೆಂಬರ್ 2 ರಂದು KSRTC ನೌಕರರ ಕೂಟದ ನೂತನ ಸಂಘಟನೆ ಪ್ರಾರಂಭೋತ್ಸವ

ಪದೋನ್ನತಿ ಪಡೆದ ಜೀವನ್ ಸಂತೋಷ್ ಮಾರ್ಟಿಸ್ ಅವರಿಗೆ ಸನ್ಮಾನ ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ (ರಿ.) ಇದರ ಪುತ್ತೂರು ವಿಭಾಗದ ನೂತನ ಕೂಟ
News

ಸೆಪ್ಟೆಂಬರ್ 8ರಂದು ಮಾತೆ ಮರಿಯಳ ಜನ್ಮದಿನದ ಹಬ್ಬಕ್ಕೆ ಸಾರ್ವತ್ರಿಕ ರಜೆ ನೀಡಲು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರಿಗೆ ಮನವಿ

ಬೈಂದೂರು: ಸೆಪ್ಟೆಂಬರ್ 8ರಂದು ಆಚರಿಸಲಾಗುವ ಕ್ರೈಸ್ತ ಸಮುದಾಯದ ಪ್ರಮುಖ ಹಬ್ಬವಾದ ತೆನೆ ಹಬ್ಬ ಹಾಗೂ ಮಾತೆ ಮರಿಯಳ ಜನ್ಮದಿನದ ಹಬ್ಬದ ಅಂಗವಾಗಿ ಸಾರ್ವತ್ರಿಕ ರಜೆ ಘೋಷಿಸಬೇಕು ಎಂದು

You cannot copy content of this page