ಕೊಂಕಣಿ ಭಾಷಾ ಮಂಡಳ್ ಕರ್ನಾಟಕ (ರಿ.) ನೂತನ ಪದಾಧಿಕಾರಿಗಳ ಆಯ್ಕೆ
ರಾಜ್ಯದ ಅಧ್ಯಕ್ಷರಾಗಿ ರೇಮಂಡ್ ಡಿಕೂನಾ ತಾಕೊಡೆ – ಕಾರ್ಯದರ್ಶಿಯಾಗಿ ಲಿಸ್ಟನ್ ಡಿಸೋಜ


ಮಂಗಳೂರಿನ ಹಿರಿಯ ಪತ್ರಕರ್ತ, ಬಹುಭಾಷಾ ಸಾಹಿತಿ ರೇಮಂಡ್ ಡಿಕೂನಾ ತಾಕೊಡೆ ಇವರನ್ನು ಕೊಂಕಣಿ ಭಾಷಾ ಮಂಡಳ್ ಕರ್ನಾಟಕ (ರಿ.) ಇದರ ರಾಜ್ಯಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ವಕೀಲ ಲಿಸ್ಟನ್ ಡಿಸೋಜರವರನ್ನು ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಗಿದೆ.



ಹಿರಿಯ ಪತ್ರಕರ್ತರಾಗಿರುವ ರೇಮಂಡ್ ಡಿಕೂನಾ ತಾಕೊಡೆಯವರು 1985ರಿಂದಲೇ ಪತ್ರಿಕಾ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೊಂಕಣಿ ಮತ್ತು ಕನ್ನಡದಲ್ಲಿ 17ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಮಿತ್ರ್, ಅಮ್ಚೊ ಸಂದೇಶ್, ಪಿಂಗಾರ ಸೇರಿದಂತೆ ಪತ್ರಿಕೆಗಳಲ್ಲಿ ಸಂಪಾದಕತ್ವ ವಹಿಸಿ ಕೊಂಕಣಿ ಪತ್ರಿಕೋದ್ಯಮಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ.
ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳು:
ಉಪಾಧ್ಯಕ್ಷೆ: ಮೀನಾಕ್ಷಿ ಪೈ (ಜಿಎಸ್‌ಬಿ ಮಹಿಳಾ ಮಂಡಳ್ ಕಾರ್ಯಕರ್ತೆ)
ಸಹ ಕಾರ್ಯದರ್ಶಿ: ಪ್ರಸಾದ್ ಶೆಣೈ (ಯುವ ಉದ್ಯಮಿ)
ಖಜಾಂಚಿ: ಲಯನ್ ಕೆ. ವಸಂತ ರಾವ್ (ನಿವೃತ್ತ ಬ್ಯಾಂಕ್ ಯೂನಿಯನ್ ನಾಯಕ)



ಚುನಾವಣಾ ಅಧಿಕಾರಿಯಾಗಿ ಗೀತಾ ಸಿ. ಕಿಣಿ ಕಾರ್ಯನಿರ್ವಹಿಸಿ ಹೊಸ ಪದಾಧಿಕಾರಿಗಳ ಘೋಷಣೆ ಮಾಡಿದರು. ಜೂಲಿಯೆಟ್ ಫೆರ್ನಾಂಡಿಸ್, ಲಾರೆನ್ಸ್ ಪಿಂಟೊ, ಜೊಸ್ಸಿ ಪಿಂಟೊ, ಸುರೇಶ್ ಶೆಣೈ, ಎಡೊಲ್ಫ್ ಡಿಸೋಜ, ಝೀನಾ ಫೆರ್ನಾಂಡಿಸ್, ಅರವಿಂದ್ ಶಾನ್ ಭಾಗ್ ಮತ್ತು ಶಾಂತಿ ವೆರೊನಿಕಾ ಸೇರಿದಂತೆ ಅನೇಕ ಸದಸ್ಯರು ಹಾಜರಿದ್ದರು.




