ವಿಟ್ಲ ಹಲವು ಪ್ರಕರಣಗಳಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ವಿಟ್ಲ ಪೊಲೀಸ್ ಠಾಣಾ ಕ್ರ. 26/2018ರಲ್ಲಿ ದಾಖಲಾಗಿರುವ ಪ್ರಕರಣದಲ್ಲಿ (IPC ಕಲಂ 447, 341, 504, 323, 324, 354, 506 r/w 34) ಆರೋಪಿ ಬಂಟ್ವಾಳ ತಾಲೂಕಿನ ವಿಟ್ಲದ ಅಳಿಕೆ ಗ್ರಾಮದ 32 ವರ್ಷ ಪ್ರಾಯದ ಮಹಮ್ಮದ್ ಇಷ್ರಾದ್ ಕೆ.ಎ. @ ಇರ್ಷಾದ್ ಎಂಬಾತನು ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದನು. ಈ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯವು C.C.1565/2023ರಲ್ಲಿ ವಾರಂಟ್ ಹೊರಡಿಸಿತ್ತು. ಆರೋಪಿ ಇರ್ಷಾದ್ ಅನ್ನು ಸೆಪ್ಟೆಂಬರ್ 26ರಂದು ಅಳಿಕೆಯಲ್ಲಿ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.




ನಂತರ ಮಾನ್ಯ ನ್ಯಾಯಾಲಯವು ಇವನಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ಇರ್ಷಾದ್ ವಿರುದ್ಧ ಇತರೆ ಹಲವು ಪ್ರಕರಣಗಳು ದಾಖಲಾಗಿದ್ದು, ಪುತ್ತೂರು ನಗರ ಠಾಣೆಯಲ್ಲಿ Cr.25/2019 (IPC ಕಲಂ 447, 326, 324, 120(b), 307, 109, 201, 34 & Arms Act 3,25), ಬಂಟ್ವಾಳ ನಗರ ಠಾಣೆಯಲ್ಲಿ Cr.103/2020 (NDPS Act ಸೆಕ್ಷನ್ 8(c), 20(b)), ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ Cr.127/2013 (IPC ಕಲಂ 457, 380) ಇವು ಸೇರಿದಂತೆ ಗಂಭೀರ ಪ್ರಕರಣಗಳಲ್ಲಿ ಆರೋಪಿ ಸಂಭಂಧಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.




