August 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕೊಂಕಣಿ ಲೇಖಕರ ಸಂಘ, ಕರ್ನಾಟಕ  – ವಾರ್ಷಿಕ ಸಭೆ

ಕೊಂಕಣಿ ಲೇಖಕರ ಸಂಘ, ಕರ್ನಾಟಕದ ವಾರ್ಷಿಕ ಸಭೆ ಸಂದೇಶ ಪ್ರತಿಷ್ಠಾನದಲ್ಲಿ ನಡೆಯಿತು. ಸಂಘದ ಸಂಚಾಲಕರಾದ ರಿಚ್ಚಾರ್ಡ್ ಮೊರಸ್ ಖರ್ಚು–ವೆಚ್ಚದ ಲೆಕ್ಕಪತ್ರವನ್ನು ಮಂಡಿಸಿದ್ದು, ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.

ಮುಖ್ಯ ಆಕರ್ಷಣೆಯಾಗಿ ನಿವೃತ್ತ ಪೋಸ್ಟ್ ಮಾಸ್ಟರ್ ಜನರಲ್ ಡಾ. ಚಾರ್ಲ್ಸ್ ಲೋಬೊ IPS ಅವರೊಂದಿಗೆ ಖ್ಯಾತ ಕವಿ–ಲೇಖಕ ಅ್ಯಂಡ್ರು ಎಲ್. ಡಿಕುನ್ಹಾ ಮುಕ್ತ ಸಂವಾದ ನಡೆಸಿದರು. ಡಾ. ಲೋಬೊ ಅವರ ವೃತ್ತಿ ಜೀವನ, ಆಡಳಿತ ಸಾಧನೆಗಳು ಹಾಗೂ ಕೊಂಕಣಿ ಭಾಷೆ–ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ಈ ಸಂದರ್ಭದಲ್ಲಿ ವಿವರಿಸಲಾಯಿತು.

ಸಭೆಗೆ ಡೊಲ್ಫಿ ಕಾಸ್ಸಿಯಾ ಪ್ರಾಸ್ತವಿಕ  ಭಾಷಣ ಮಾಡಿ ಸ್ವಾಗತ ಮಾಡಿದರು. ಹೆನ್ರಿ ಮಸ್ಕರೇನಸ್ ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮವನ್ನು ಡಾ. ಅ್ಯನಿ ಕ್ಯಾಸ್ತಲಿನೊ ನುಡಿಗಟ್ಟುಗಳೊಂದಿಗೆ ಸುಂದರವಾಗಿ ನಿರ್ವಹಿಸಿದರು.

You may also like

News

ಸಿಬ್ಬಂದಿ ಕೊರತೆ ನೀಗಿಸಲು ಮೆಸ್ಕಾಂಗೆ 395 ಪವರ್‌ಮ್ಯಾನ್‌ಗಳು – ಅಧ್ಯಕ್ಷ ಕೆ. ಹರೀಶ್ ಕುಮಾರ್

ಮಂಗಳೂರು: ವಿದ್ಯುತ್ ಸರಬರಾಜು ಮತ್ತು ನಿರ್ವಹಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮೆಸ್ಕಾಂ ವ್ಯಾಪ್ತಿಗೆ 395 ಹೊಸ ಪವರ್‌ಮ್ಯಾನ್‌ಗಳನ್ನು ನೇಮಕ ಮಾಡಲಾಗಿದೆ ಎಂದು ಮೆಸ್ಕಾಂ ಅಧ್ಯಕ್ಷ ಕೆ.
News

ಓಣಂ ಸಂಭ್ರಮದ ನಡುವೆ ದುರಂತ – ತೆರೆದ ಬಾವಿಗೆ ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು

ಓಣಂ ಆಚರಣೆಯ ಸಂಭ್ರಮದ ನಡುವೆ ಸಂಭವಿಸಿದ ದಾರುಣ ಘಟನೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಕನ್ಹಂಗಾಡ್ ಸಮೀಪದ ಚೀಮೇನಿಯಲ್ಲಿ ನಡೆದಿದೆ. ಮೃತ

You cannot copy content of this page