ನಾಳೆ ಅಕ್ಟೋಬರ್ 5ರಂದು ಮಿಲಾಗ್ರಿಸ್ ಜುಬಿಲಿ ಸಭಾಭವನದಲ್ಲಿ 2023–25ರ ರಚನಾ ಪ್ರಶಸ್ತಿ ಪ್ರದಾನ ಸಮಾರಂಭ
ರಚನಾ®️ ಕ್ಯಾಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಮಂಗಳೂರು ವತಿಯಿಂದ 2023–25ರ ರಚನಾ ಪ್ರಶಸ್ತಿ ಪ್ರದಾನ ಸಮಾರಂಭವು ಅಕ್ಟೋಬರ್ 5ರಂದು ಭಾನುವಾರ ಸಂಜೆ 6 ಗಂಟೆಗೆ ಮಂಗಳೂರಿನ ಮಿಲಾಗ್ರಿಸ್ ಜುಬಿಲಿ ಸಭಾಭವನದಲ್ಲಿ ಜರುಗಲಿದೆ.



ಈ ಬಾರಿ ರಚನಾ ಉದ್ಯಮಿ ಪ್ರಶಸ್ತಿಗೆ ಬೆಂಗಳೂರಿನ ಆಸ್ಟಿನ್ ರೋಚ್, ರಚನಾ ವೃತ್ತಿಪರ ಪ್ರಶಸ್ತಿಗೆ ಮಂಗಳೂರಿನ ಜೋನ್ ರಿಚ್ಚರ್ಡ್ ಲೋಬೊ KAS, ರಚನಾ ಕೃಷಿಕ ಪ್ರಶಸ್ತಿಗೆ ಬೆಳುವಾಯಿಯ ಡಾ. ಗೊಡ್ವಿನ್ ರೊಡ್ರಿಗಸ್ PhD, ರಚನಾ ಎನ್‌ಆರ್‌ಐ ಉದ್ಯಮಿ ಪ್ರಶಸ್ತಿಗೆ ರೊನಾಲ್ಡ್ ಕುಲಾಸೊ ಹಾಗೂ ಕುಟುಂಬದಿಂದ ಪ್ರಾಯೋಜಿತ್ ದುಬಾಯ್ ಪ್ರತಾಪ್ ಮೆಂಡೋನ್ಸಾ ಹಾಗೂ ರಚನಾ ಶ್ರೇಷ್ಠ ಮಹಿಳಾ ಪ್ರಶಸ್ತಿಗೆ ದುಬಾಯ್ ಶೋಭಾ ಮೆಂಡೋನ್ಸಾ ಆಯ್ಕೆಗೊಂಡಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಅತೀ ವಂದನೀಯ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾರವರು ವಹಿಸಲಿದ್ದು, ಕರ್ನಾಟಕ ಸರ್ಕಾರದ ಇಂಧನ ಸಚಿವರಾದ ಕೆ. ಜೆ. ಜಾರ್ಜ್ ಮುಖ್ಯ ಅತಿಥಿಗಳಾಗಿರುತ್ತಾರೆ. ಕರ್ನಾಟಕ ಸರ್ಕಾರದ ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, UAE ಬರ್ಝೀಲ್ ಹೋಲ್ಡಿಂಗ್ಸ್ ಗ್ರೂಪ್ ಸಿಇಒ ಜೋನ್ ಸುನಿಲ್ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಮಾಜಿ ಕಾರ್ಯನಿರ್ವಹಣಾ ಕುಲಪತಿ ಡಾ. ಸಿಂಥಿಯಾ ಮಿನೇಜಸ್ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು.



ರಚನಾ ಪ್ರಸ್ತುತ ಅಧ್ಯಕ್ಷ ಜೋನ್ ಬಿ. ಮೊಂತೇರೊ, ಕಾರ್ಯದರ್ಶಿ ವಿಜಯ್ ವಿ. ಲೋಬೊ ಹಾಗೂ ಪ್ರಶಸ್ತಿ ಸಂಯೋಜಕಿ ಯುಲಾಲಿಯಾ ಡಿಸೋಜರವರು, ಎಲ್ಲಾ ಸದಸ್ಯರನ್ನು ಹಾಗೂ ಸಾರ್ವಜನಿಕರನ್ನು ಈ ಸಮಾರಂಭದಲ್ಲಿ ಪಾಲ್ಗೊಳ್ಳಲು ಆತ್ಮೀಯವಾಗಿ ಆಹ್ವಾನಿಸಿದ್ದಾರೆ. ಸಮಾರಂಭದ ನಂತರ ಸ್ನೇಹಸಮಾಗಮ ಮತ್ತು ಭೋಜನವನ್ನು ಏರ್ಪಡಿಸಲಾಗಿದೆ.




