August 30, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆ – “ಕಡಸಲಗದ್ದೆ ಗಾಂಧಿ ಫಾಲ್ಸ್ ಹತ್ತಿರ ಮೊಬೈಲ್ ಕದಿಯಲು ಬಂದ ಕಳ್ಳರ ಬಂಧನ”

ಮೊಬೈಲ್ ಕಳ್ಳತನವಾದ ಕೂಡಲೇ ಅನುಸರಿಸಬೇಕಾದ ಮುಂಜಾಗರೂಕತಾ ಕ್ರಮಗಳ ಬಗ್ಗೆ ಸೂಚನೆ ನೀಡಿಕೆ

ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಲಖಂಡ ಗ್ರಾಮದ ಹತ್ತಿರದ ಕಡಸಲಗದ್ದೆ ಗಾಂಧಿ ಫಾಲ್ಸ್ ಗೆ ಭೇಟಿ ನೀಡುವ ಪ್ರವಾಸಿಗರ ಮೊಬೈಲ್‌ಗಳನ್ನು ಕಳ್ಳತನ ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರು ಆರೋಪಿಗಳು ಬಂಧಿತರಾಗಿದ್ದಾರೆ.

ಬಂಧಿತರಾದವರು ಮೊಹಮ್ಮದ್ ಅಮೀರ (ತಂದೆ ಸಯ್ಯದ್ ರಷೀಲ) ಹಾಗೂ ಅಬ್ದುಲ್ ರೆಹಮಾನ್ (ತಂದೆ ಮಹಮ್ಮದ್ ಅಬುಶಾಮ) ಎನ್ನಲಾಗಿದೆ. ಇವರು ಕ್ರಮವಾಗಿ ಬೆಳಲಖಂಡ ಗ್ರಾಮ ಮತ್ತು ಭಟ್ಕಳದ ಭದ್ರಾ ಕಾಲೋನಿಯ ನಿವಾಸಿಗಳಾಗಿದ್ದಾರೆ.

ಬಂಧಿತರ ವಿರುದ್ಧ ಭಾರತೀಯ ನಾಗರೀಕ ಸುರಕ್ಷಾ ಸಂಹಿತೆಯ ಕಲಂ 128 ಅಡಿಯಲ್ಲಿ ಪ್ರಕರಣ ದಾಖಲಿಸಿ, ಮುಂದಿನ ಕ್ರಮಕ್ಕಾಗಿ ಭಟ್ಕಳ ತಾಲೂಕು ಕಾರ್ಯಾಂಗೀಯ ಮ್ಯಾಜಿಸ್ಟ್ರೇಟ್ ರವರ ಮುಂದೆ ಹಾಜರುಪಡಿಸಲಾಯಿತು.

ಜನರಿಗೆ ಮುಂಜಾಗ್ರತಾ ಸೂಚನೆ

ಮೊಬೈಲು ಕಳೆದುಹೋದ ತಕ್ಷಣ IMEI ಸಂಖ್ಯೆಯನ್ನು ಬ್ಲಾಕ್ ಮಾಡಿಸಿಕೊಳ್ಳಬೇಕು. ಇದರಿಂದ ಕಳ್ಳರು ಫೋನ್ ಬಳಸಲು ಸಾಧ್ಯವಾಗುವುದಿಲ್ಲ.

‘Find My Device’ ಅಥವಾ ‘iCloud’ ಸೇವೆಗಳನ್ನು ಸಕ್ರಿಯಗೊಳಿಸಿಕೊಳ್ಳುವುದು ಅತ್ಯಗತ್ಯ.

ಮೊಬೈಲುಗಳಲ್ಲಿ ಪಾಸ್ವರ್ಡ್, ಫಿಂಗರ್‌ಪ್ರಿಂಟ್ ಅಥವಾ ಫೇಸ್ ಲಾಕ್‌ಗಳನ್ನು ಬಳಸಬೇಕು.

ಕಳ್ಳತನವಾದ ಮೊಬೈಲ್ ಬಗ್ಗೆ ತಕ್ಷಣವೇ ಪೊಲೀಸರಿಗೂ, ನೆಟ್‌ವರ್ಕ್ ಸೇವಾದಾರರಿಗೂ ಮಾಹಿತಿ ನೀಡಬೇಕು.

ಫೋನ್‌ನಲ್ಲಿ ಇರುವ ವೈಯಕ್ತಿಕ ಡೇಟಾವನ್ನು ದೂರಸ್ಥವಾಗಿ ಅಳಿಸಲು (remote wipe) ಅವಕಾಶ ಇರುವ ಆ್ಯಪ್‌ಗಳನ್ನು ಬಳಕೆ ಮಾಡುವುದು ಒಳಿತು ಎಂದು ಭಟ್ಕಳ ಗ್ರಾಮೀಣ ಪೊಲೀಸ್ ಠಾಣಾಧಿಕಾರಿಯವರು ಸಾರ್ವಜನಿಕರಲ್ಲಿ ವಿನಂತಿ ಮಾಡಿದ್ದಾರೆ.

You may also like

News

ಓಣಂ ಸಂಭ್ರಮದ ನಡುವೆ ದುರಂತ – ತೆರೆದ ಬಾವಿಗೆ ಬಿದ್ದು 10ನೇ ತರಗತಿ ವಿದ್ಯಾರ್ಥಿ ಸಾವು

ಓಣಂ ಆಚರಣೆಯ ಸಂಭ್ರಮದ ನಡುವೆ ಸಂಭವಿಸಿದ ದಾರುಣ ಘಟನೆಯೊಂದರಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ತೆರೆದ ಬಾವಿಗೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಕನ್ಹಂಗಾಡ್ ಸಮೀಪದ ಚೀಮೇನಿಯಲ್ಲಿ ನಡೆದಿದೆ. ಮೃತ
News

National Library Day Celebrated at Father Muller Charitable Institutions Mangaluru

The National Library Day was celebrated at Father Muller Charitable Institutions Central Library on 29th August 2026 at 3.00p.m. in

You cannot copy content of this page