ಮೈಸೂರು ಧರ್ಮಕ್ಷೇತ್ರದ ನೂತನ ಧರ್ಮಾಧ್ಯಕ್ಷರ ಪ್ರತಿಷ್ಠಾಪನಾ ಹಾಗೂ ಅಧಿಕಾರ ಹಸ್ತಾಂತರ
ನಾಳೆ ಅಕ್ಟೋಬರ್ 7ರಂದು ಮಂಗಳವಾರ ಸಂಜೆ 4:30ಕ್ಕೆ ಮೈಸೂರಿನ ಸಂತ ಜೋಸೆಫ್ ಪ್ರಧಾನ ದೇವಾಲಯದಲ್ಲಿ ಭವ್ಯ ಸಮಾರಂಭ

ಮೈಸೂರು ಧರ್ಮಕ್ಷೇತ್ರದ ನೂತನ ಬಿಷಪ್ ಆಗಿ ನೇಮಕಗೊಂಡ ಪರಮಪೂಜ್ಯ ಡಾ. ಫ್ರಾನ್ಸಿಸ್ ಸೆರಾವೋ ಎಸ್.ಜೆ. ರವರ ಪ್ರತಿಷ್ಠಾಪನೆ ಮತ್ತು ಅಧಿಕಾರ ಹಸ್ತಾಂತರ ಸಮಾರಂಭ ನಾಳೆ ಅಕ್ಟೋಬರ್ 7ರಂದು ಮಂಗಳವಾರ ಸಂಜೆ 4:30ಕ್ಕೆ ಮೈಸೂರಿನ ಸಂತ ಜೋಸೆಫ್ ಪ್ರಧಾನ ದೇವಾಲಯದಲ್ಲಿ ನಡೆಯಲಿದೆ.

ಈ ಭವ್ಯ ಸಮಾರಂಭಕ್ಕೆ ಬೆಂಗಳೂರು ಮಹಾ ಧರ್ಮಕ್ಷೇತ್ರದ ಅತೀ ಗೌರವಾನ್ವಿತ ಆರ್ಚ್ ಬಿಷಪ್ ಡಾ. ಪೀಟರ್ ಮಚಾದೊರವರು ಆಗಮಿಸಲಿದ್ದಾರೆ. ಅಭಿನಂದನಾ ಕಾರ್ಯಕ್ರಮವನ್ನು ಭಾರತ ಮತ್ತು ನೇಪಾಳದ ಅಪೊಸ್ತೋಲಿಕ್ ನುಂಸಿಯೋ ಅತೀ ಗೌರವಾನ್ವಿತ ಡಾ. ಲಿಯೋ ಪೋಲ್ಡೋ ಗಿರೆಲ್ಲಿ ಅವರ ಅಧ್ಯಕ್ಷತೆಯಲ್ಲಿ ನಡೆಸಲಾಗುವುದು.



ಬೆಂಗಳೂರು ಮಹಾ ಧರ್ಮಕ್ಷೇತ್ರದ ನಿವೃತ್ತ ಆರ್ಚ್ ಬಿಷಪ್ ಹಾಗೂ ಪ್ರಸ್ತುತ ಮೈಸೂರು ಧರ್ಮಕ್ಷೇತ್ರದ ಅಪೊಸ್ತೋಲಿಕ್ ಆಡಳಿತಾಧಿಕಾರಿಯಾಗಿರುವ ಅತೀ ವಂದನೀಯ ಡಾ. ಬರ್ನಾರ್ಡ್ ಮೊರಾಸ್ ಈ ಸಂದರ್ಭದಲ್ಲಿ ಉಪಸ್ಥಿತಲಿರುವರು. ವಿವಿಧ ಧರ್ಮಕ್ಷೇತ್ರಗಳ ಧರ್ಮಾಧ್ಯಕ್ಷರು, ಧರ್ಮಗುರುಗಳು, ಧರ್ಮ ಭಗಿನಿಯರು ಹಾಗೂ ಸಾವಿರಾರು ಭಕ್ತಾಧಿಗಳು ಈ ಪ್ರತಿಷ್ಠಾಪನಾ ಭವ್ಯ ಸಮಾರಂಭಕ್ಕೆ ಸಾಕ್ಷಿಯಾಗಲಿರುವರು.




