ಹೆಣ್ಣು ನೋಡೋ ನೆಪದಲ್ಲಿ 44.80 ಲಕ್ಷ ವಂಚನೆ – ವಿಟ್ಲ ಪೊಲೀಸರಿಂದ ಪ್ರಕರಣ ದಾಖಲು
ಕೇರಳದ ತಾವರಕಡನ್ ಮೂಲದ 53ವರ್ಷ ಪ್ರಾಯದ ಮಹಮ್ಮದ್ ಅಶ್ರಫ್ ಎಂಬವರು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿದ್ದಾರೆ. 2024ರ ಸೆಪ್ಟೆಂಬರ್‌ನಲ್ಲಿ ಮದುವೆ ಸಲುವಾಗಿ ಮಂಗಳೂರಿಗೆ ಬಂದಿದ್ದ ಅವರು ಬಶೀರ್, ಸಫಿಯಾ ಹಾಗೂ ಇತರ ಆರೋಪಿತರ ಬಲೆಗೆ ಸಿಕ್ಕಿದ್ದಾರೆ.
ಪಿರ್ಯಾದಿದಾರರ ದೂರಿನಂತೆ, ಆರೋಪಿತರು “ಹೆಣ್ಣು ನೋಡೋ ನೆಪದಲ್ಲಿ” ಅಶ್ರಫ್ ರವರ ಫೋಟೋ ಹಾಗೂ ವಿಡಿಯೋಗಳನ್ನು ತೆಗೆದು, ನಂತರ ಅವುಗಳನ್ನು ಲೀಕ್ ಮಾಡುವುದಾಗಿ ಬೆದರಿಸಿ ಒಟ್ಟು ₹44.80 ಲಕ್ಷ ಹಣ ವಂಚಿಸಿದ್ದಾರೆ.

ಈ ಕುರಿತು ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ. 145/2025, ಕಲಂ 318(4), 308(2), 115(2), 351(2), r/w 3(5) BNS-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಲಾಗಿದೆ. ಪೊಲೀಸರು ಆರೋಪಿತರ ಪತ್ತೆಹಚ್ಚಲು ತನಿಖೆಯನ್ನು ಮುಂದುವರೆಸಿದ್ದಾರೆ.





