November 8, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವೀರಕಂಭ ಮಾತೃಶ್ರೀ ಗೆಳೆಯರ ಬಳಗದ ರಜತಾ ಸಂಭ್ರಮದ ಸವಿನೆನಪಿಗಾಗಿ “ಮಾತೃಶ್ರೀ ಆಶ್ರಯ’ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ

ಸಂಘ-ಸಂಸ್ಥೆ ಸಂಘಟನೆ ಗಳನ್ನು ಕಟ್ಟುವುದು ಸುಲಭ ಉಳಿಸುವುದು ಕಷ್ಟ – ರಾಜೇಶ್   ನಾಯಕ್

ಸಂಘ-ಸಂಸ್ಥೆ ಸಂಘಟನೆಗಳನ್ನು ಕಟ್ಟುವುದು ಸುಲಭ ಆದರೆ ಸಂಘ ಸಂಸ್ಥೆಗಳು ಸಂಘಟನೆಗಳು ದೀರ್ಘವಾಗಿ ಜೀವಂತಿಕೆಯಿಂದ ಕೂಡಿ ಕಾರ್ಯ ರೂಪಗೊಳ್ಳಬೇಕಾದರೆ ಅವರೊಳಗಿನ ಮನಸ್ಥಿತಿಗಳು ಏಕರೂಪವಾಗಿರಬೇಕು. ಸಮಾಜಕ್ಕೆ ಸಹಾಯ ಮಾಡುವ ಮನೋಭಾವ ಎಲ್ಲರಲ್ಲೂ ಮೂಡಿ ಬರಬೇಕು. ವಿವಿಧ ವಯೋಮಾನದ ವಿವಿಧ ಮನಸ್ಥಿತಿಗಳನ್ನು ಹೊಂದಿರುವ ಸದಸ್ಯರನ್ನೆಲ್ಲಾ ಒಂದೇ ಚೌಕಟ್ಟಿನಲ್ಲಿ ಹೊಂದಿಸಲು ಮತ್ತು ಸಮಾಜ ಸೇವೆಯ ಮನೋಭಾವನೆ ಬೆಳೆಸುವುದು ತುಂಬಾ ಕಷ್ಟದ ಕೆಲಸ, ಇಂತಹ ಪರಿಸ್ಥಿತಿಯಲ್ಲೂ ಕಳೆದ 25 ವರ್ಷಗಳಿಂದ ಊರಿನಲ್ಲಿ ಉತ್ತಮ ಸಂಘಟನೆ ಎನಿಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ತನ್ನ 25ರ ರಜತಾ ಸಂಭ್ರಮದ ಸವಿ ನೆನಪಿಗಾಗಿ ಮಾತೃಶ್ರೀ ಆಶ್ರಯ ಎನ್ನುವ ಪ್ರಯಾಣಿಕರ ತಂಗುಧಾನವನ್ನು ಮಾಡಿ ಸಮಾಜಕ್ಕೆ ಅರ್ಪಿಸಿ ಇತರರಿಗೆ ಮಾದರಿಯಾಗಿದ್ದಾರೆ ಎಂದು ಬಂಟ್ವಾಳ ಕ್ಷೇತ್ರ ಶಾಸಕ ರಾಜೇಶ್ ನಾಯಕ್ ಹೇಳಿದರು.

ಅವರು ಅಕ್ಟೋಬರ್ 19ರಂಡು ರವಿವಾರ ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಾತೃಶ್ರೀ ಗೆಳೆಯರ ಬಳಗ ವೀರಕಂಭ ಸಂಘಟನೆ ಪ್ರಾರಂಭವಾಗಿ 25 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅದರ ಸವಿನೆನಪಿಗಾಗಿ ವೀರಕಂಭ ಗ್ರಾಮದ ಅನಂತಾಡಿ ಕ್ರಾಸ್ ರಸ್ತೆಯ ಬಳಿ ನೂತನವಾಗಿ “ಮಾತೃಶ್ರೀ ಆಶ್ರಯ’ ಎಂಬ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿದ್ದು ಅದರ ಲೋಕಾರ್ಪಣೆ ಮಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾತೃಶ್ರೀ ಗೆಳೆಯರ ಬಳಗದ ಅಧ್ಯಕ್ಷ ರಮೇಶ್ ಗೌಡ ಮೈರಾ ವಹಿಸಿದ್ದರು. ಶ್ರೀ ಗಿಲ್ಕಿಂಜತಾಯಿ ಉತ್ಸವ ಸಮಿತಿಯ ಅಧ್ಯಕ್ಷ ಜಯಪ್ರಕಾಶ್ ತೆಕ್ಕಿಪಾಪು ಮಾತನಾಡಿ ಕಳೆದ 25 ವರುಷಗಳಿಂದ ವಿವಿಧ ಸಮಾಜಮುಖಿ ಕೆಲಸಗಳನ್ನು ಮಾಡಿ ಗ್ರಾಮಕ್ಕೆ ಮಾದರಿ ಸಂಘಟನೆ ಆಗಿದೆ ಇನ್ನಷ್ಟು ಸಮಾಜಮುಖಿ ಕಾರ್ಯಗಳನ್ನು ಮಾಡುವ ಶಕ್ತಿ ದೊರೆಯಲಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ವೀರಕಂಭ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಜನಾರ್ಧನ ಪೂಜಾರಿ, ಪಂಚಾಯತ್ ಸದಸ್ಯರಾದ ದಿನೇಶ್ ಪೂಜಾರಿ, ಸಂದೀಪ್ ಕೆಲಿಂಜ, ಜಯಂತಿ ಜನಾರ್ಧನ್, ಮೀನಾಕ್ಷಿ ಸುನಿಲ್ ಪಿ. ಡಬ್ಲ್ಯೂ ಕಂಟ್ರಾಕ್ಟರ್ ಪದ್ಮನಾಭ ಗೌಡ ಮೈರ, ವೀರಕಂಭ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ವೀರಪ್ಪ ಮೂಲ್ಯ ಬೆತ್ತಸರವು, ಸದಸ್ಯರುಗಳಾದ ನಾರಾಯಣ ಮೂಲ್ಯ, ಕೇಶವ ನಾಯ್ಕ ಕೆಮ್ಮಟೆ, ಆನಂದ ಮೂಲ್ಯ ಮೈರಾ, ಶ್ರೀ ಶಾರದಾ ಭಜನಾ ಮಂದಿರದ ಸಂಚಾಲಕ ನಾರಾಯಣ ಭಟ್, ರುಕ್ಮಯ ಮೂಲ್ಯ ಮೈರಾ, ಮಂಜಪ್ಪ ಮೂಲ್ಯ ಮೈರಾ, ಇಂಜಿನಿಯರ್ ರಾಮಣ್ಣ ಮೂಲ್ಯ ಮಜಿ, ಸಂಜೀವ ಮೂಲ್ಯ ಮಜಿ, ಚಂದ್ರಶೇಖರ್ ಶೆಟ್ಟಿ, ಕೇಶವ ಮೂಲ್ಯ ಮಜಿ, ಕರುಣಾಕರ ಆಳ್ವ ಮೈರಾ, ಮೊದಲಾದವರು ಉಪಸ್ಥಿತರಿದ್ದರು. ಮಾತೃಶ್ರೀ ಗೆಳೆಯರ ಬಳಗದ ಸುಧಾಕರ ಮೈರಾ ಸ್ವಾಗತಿಸಿ, ಕಾರ್ಯದರ್ಶಿ ಕಿಶೋರ್ ಮೈರಾ ವಂದಿಸಿದರು. ಕೆ.ಎಂ.ಎಫ್. ವಿಸ್ತರಣಾಧಿಕಾರಿ ಜಗದೀಶ್ ಕಾರ್ಯಕ್ರಮ ನಿರೂಪಿಸಿದರು. ಮಾತೃಶ್ರೀ ಗೆಳೆಯರ ಬಳಗದ ಸದಸ್ಯರುಗಳು ಸಹಕರಿಸಿದರು.

You may also like

News

ಮಾಣಿ ಗ್ರಾಮದಲ್ಲಿ ಹಳೆ ಮನೆ ದುರಸ್ತಿ ಪರವಾನಗಿ ಪಡೆದು ಸರಕಾರಿ ಜಮೀನಿನ ಮೇಲೆ ಅಕ್ರಮವಾಗಿ ನಿರ್ಮಿಸಿದ ಐಶಾರಾಮಿ ಬಂಗ್ಲೆ

ಯಾವುದೇ ದಾಖಲೆಗಳಿಲ್ಲದೆ ಸರಕಾರಕ್ಕೆ ವಂಚನೆ ಮಾಡಿದ್ದನ್ನು ಬಯಲಿಗೆಳೆದ ಸಾಮಾಜಿಕ ಕಾರ್ಯಕರ್ತ ಅತಿಕ್ರಮಿತ ಕಟ್ಟಡ ಕೂಡಲೇ ತೆರವುಗೊಳಿಸಲು ಲೂಸಿಯಾ ಮೆಟಿಲ್ಡಾ ಪಿಂಟೊರವರಿಗೆ ಬಂಟ್ವಾಳ ತಹಶೀಲ್ದಾರ್ ನೋಟಿಸ್ ಜಾರಿ ಮಾಣಿ
News

ನಕಲಿ ದಾಖಲೆ ಪ್ರಕರಣದಲ್ಲಿ ಆರೋಪಿ ಅಬ್ದುಲ್ ಹಾಶೀಮ್ ಬಂಧನ

ನಕಲಿ ದಾಖಲೆ ಸೃಷ್ಟಿಸಿ ನ್ಯಾಯಾಲಯವನ್ನು ವಂಚಿಸಿದ ಭೂಪ ಪುತ್ತೂರು ತಾಲೂಕಿನ ಪಡುವನ್ನೂರು ಗ್ರಾಮದ 34 ವರ್ಷ ಪ್ರಾಯದ ಅಬ್ದುಲ್ ಹಾಶೀಮ್  ಎಂಬಾತನನ್ನು ಉಪ್ಪಿನಂಗಡಿ ಪೊಲೀಸರು ನವೆಂಬರ್ 6ರಂದು

You cannot copy content of this page