ಮೂರು ವರ್ಷದ ಮಗನ ಜೊತೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆ
ಪತಿಯ ಕಿರುಕುಳದಿಂದ ಬೇಸತ್ತ ಮಹಿಳೆಯೊಬ್ಬಳು ತನ್ನ ಮೂರು ವರ್ಷದ ಮಗನ ಜೊತೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೀಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಚೆನ್ನಮ್ಮ ದೇವಿ ದೇವಸ್ಥಾನದ ಹತ್ತಿರ ನಡೆದಿದೆ.

ಮೃತಳನ್ನು 21ವರ್ಷ ಪ್ರಾಯದ ಫಾತಿಮಾ ಹಾಗೂ ಆಕೆಯ ಪುತ್ರ 3 ವರ್ಷ ಪ್ರಾಯದ ಅಬ್ದುಲ್ ಎಂದು ತಿಳಿದುಬಂದಿದೆ. ಫಾತಿಮಾ ಪತಿ ಮಸ್ತಾನ್ ಸಾಬ್ ನೀಡಿರುವ ಕಿರುಕುಳವೇ ತನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಆರೋಪಿಸಿದ್ದಾರೆ. ಕೆರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

8 ವರ್ಷಗಳ ಹಿಂದೆ ಫಾತಿಮಾಳ ಪತಿ ಮಸ್ತಾನ್ ಸಾಬ್ ಎಂಬವರು ಜಮೇಲಾ ಎಂಬ ಯುವತಿಯೊಂದಿಗೆ ಮದುವೆ ಆಗಿದ್ದನು, ಬಳಿಕ ಫಾತಿಮಾಳನ್ನು ಪ್ರೀತಿಸಿ ಗ್ರಾಮಸ್ಥರ ಸಮ್ಮುಖದಲ್ಲೇ ವಿವಾಹವಾಗಿದ್ದನು. ಇತ್ತೀಚೆಗೆ ಫಾತಿಮಾಳಿಗೆ ಪತಿ ಮಸ್ತಾನ್ ಸಾಬ್ ಹೆಚ್ಚು ಕಿರುಕುಳ ನೀಡುತ್ತಿದ್ದನು. ಇದರಿಂದ ಬೇಸತ್ತ ಫಾತಿಮಾ ಮೂರು ದಿನಗಳ ಹಿಂದೆ ತವರಿಗೆ ಬಂದಿದ್ದಳು. ಫಾತಿಮಾ ಸಾವಿಗೆ ಆಕೆಯ ಪತಿ ನೀಡಿದ ಕಿರುಕುಳವೇ ಕಾರಣ ಎಂದು ಪೋಷಕರ ದೂರಿನಲ್ಲಿ ಉಲ್ಲೇಖಿಸಲಾಗಿದೆ.




