ಸುರತ್ಕಲ್‌ನಲ್ಲಿ ಯುವಕನಿಗೆ ಚಾಕುವಿನಿಂದ ಇರಿತ
ನಾಲ್ವರು ಆರೋಪಿಗಳ ವಿರುದ್ಧ ಕೊಲೆಯತ್ನ ಅಡಿಯಲ್ಲಿ ಪ್ರಕರಣ ದಾಖಲು – ಆರೋಪಿಗಳ ಗುರುತು ಪತ್ತೆ

ಮಂಗಳೂರಿನ ಸುರತ್ಕಲ್ ದೀಪಕ್ ಬಾರ್ ಬಳಿ ನಿನ್ನೆ ಅಕ್ಟೋಬರ್ 23ರಂದು ಗುರುವಾರ ರಾತ್ರಿ 11 ಗಂಟೆಯ ಸುಮಾರಿಗೆ ಯುವಕನ ಮೇಲೆ ಚಾಕುವಿನಿಂದ ಇರಿದ ಘಟನೆ ನಡೆದಿದೆ.
ಮುಕ್ಷಿದ್, ನಿಜಾಮ್ ಹಾಗೂ ಇತರ ಇಬ್ಬರು ಬಾರ್‌ಗೆ ತೆರಳಿ ಮದ್ಯ ಸೇವಿಸುತ್ತಿದ್ದರು. ಇದೇ ವೇಳೆ ಅಲ್ಲಿ ಮಧ್ಯ ಸೇವಿಸಿದ ನಾಲ್ವರು ಅಪರಿಚಿತ ವ್ಯಕ್ತಿಗಳು ಅವರೊಂದಿಗೆ ವಾಗ್ವಾದಕ್ಕೆ ಇಳಿದರು. ಬಾರ್‌ನ ಹೊರಗೆ ಹೋದ ನಂತರವೂ ಜಗಳ ಮುಂದುವರಿದಿದ್ದು, ಅವರಲ್ಲಿ ಒಬ್ಬ ಆರೋಪಿಯು ಫ್ಲೆಕ್ಸ್ ಕತ್ತರಿಸಲು ಬಳಸುವ ಚಾಕುವಿನಿಂದ ನಿಜಾಮ್ ಅವರ ಹೊಟ್ಟೆಗೆ ಇರಿದು ಗಾಯವಾಗಿದ್ದು, ಮುಕ್ಷಿದ್ ರವರ ಕೈಗೆ ಗಾಯವಾಗಿದೆ. ಗಾಯಗಳು ಗಂಭೀರವಾಗಿಲ್ಲದೆ ನಿಜಾಮ್ ಅಪಾಯದಿಂದ ಪಾರಾಗಿದ್ದಾರೆ.





ಈ ಸಂಬಂಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ. ಪೊಲೀಸರು ತಕ್ಷಣವೇ ವಿಶೇಷ ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಗುರುತಿಸಿದ್ದಾರೆ.
ಗುರುರಾಜ್ ಸುರತ್ಕಲ್‌ನಲ್ಲಿ ರೌಡಿ ಶೀಟರ್ ಮತ್ತು ಭಜರಂಗ ದಳದಲ್ಲಿ ಸಕ್ರಿಯನಾಗಿದ್ದಾನೆ. ಅಲೆಕ್ಸ್ ಸಂತೋಷ್ ಕ್ರಿಶ್ಚಿಯನ್ ಹಾಗೂ ಗುರುರಾಜ್ ನ ಸ್ನೇಹಿತ, ಸುಶಾಂತ್ ಮತ್ತು ನಿತಿನ್ ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳು. ಪೊಲೀಸ್ ತಂಡಗಳು ರಾತ್ರಿಯೇ ಆರೋಪಿಗಳ ಅಡಗುತಾಣಕ್ಕೆ ತಲುಪಿದರೂ ಅವರು ಮೊದಲೇ ತಪ್ಪಿಸಿಕೊಂಡಿರುತ್ತಾರೆ.


ಬೆಳಗ್ಗೆ ಆಸ್ಪತ್ರೆಗೆ ಭೇಟಿ ನೀಡಿದ ಪೊಲೀಸ್ ಕಮಿಷನರ್ ವಿನೋದ್ ಕುಮಾರ್ ರೆಡ್ಡಿಯವರು ಈ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿದ್ದು ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಿ ತನಿಖೆ ನಡೆಸಲಾಗುವುದು ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.






