July 11, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

“ಬಿಜೆಪಿಯ ಶೂನ್ಯ ಅಭಿವೃದ್ಧಿ, ಸುಳ್ಳು ಪ್ರಚಾರ ಮಾತ್ರ ಬಾಕಿ” – MLC ಐವನ್ ಡಿಸೋಜ ಕಿಡಿ

GST ಸರಳೀಕರಣದೊಂದಿಗೆ ಬೆಲೆ ಇಳಿಕೆ ಎಂಬ ಬಿಜೆಪಿ ಶಾಸಕ ಕಾಮತ್ ಸುಳ್ಳು ಸುದ್ದಿಯ ಕರಪತ್ರ ಹಂಚಿಕೆ

ಶಾಸಕ ವೇದವಾಸ ಕಾಮತ್ ರವರು ದೀಪಾವಳಿಯನ್ನು GST ಸರಳೀಕರಣದೊಂದಿಗೆ ಬೆಲೆ ಇಳಿಕೆಯ ಉಡುಗೊರೆಯೊಂದಿಗೆ ಆಚರಿಸೋಣ ಎಂಬ ತಲೆಬರಹವಿದ್ದ ಕರಪತ್ರಗಳನ್ನು ಮುದ್ರಿಸಿ ನೀಡುತ್ತಿದ್ದ ಬಗ್ಗೆ, ವಿಧಾನಪರಿಷತ್ ಸದಸ್ಯ ಐವನ್ ಡಿಸೋಜರವರು ಈ ರೀತಿ ಪ್ರತಿಕ್ರಿಯಿಸಿದರು.  “ಮಂಗಳೂರಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಬಿಜೆಪಿ ನಾಯಕರಿಗೆ ಯಾವುದೂ ಕಾಣಿಸುತ್ತಿಲ್ಲ” ಎಂದು ಕಿಡಿಕಾರಿದರು.

ವೇದವ್ಯಾಸ ಕಾಮತ್ ರವರನ್ನು ಉದ್ದೇಶಿಸಿ ಮಾತನಾಡಿದ MLC ಐವನ್ ಡಿಸೋಜ, “ದೀಪಾವಳಿಯ ಸಮಯದಲ್ಲಿ ಅವರ ಫೋಟೋ ಹಾಕಿ ಜನರನ್ನು ಮೋಸಗೊಳಿಸುವ ಪ್ರಚಾರ ಮಾಡುತ್ತಿದ್ದಾರೆ. ಇದು ಚೀಪ್ ಪಾಲಿಟಿಕ್ಸ್, ಕ್ಷುಲ್ಲಕ ರಾಜಕಾರಣ. ಜನರು ಇಂಥ ಸುಳ್ಳು ಪ್ರಚಾರವನ್ನು ನಂಬುವುದಿಲ್ಲ” ಎಂದರು.

“ಇದು ದೀಪಾವಳಿಯ ಗಿಫ್ಟ್ ಅಂತೆ! ಹಣ ಕೊಟ್ಟು ಮನೆಗೆ ತಕ್ಕೊಂಡು ಬರೋದು ಗಿಫ್ಟ್ ಆಗಲಾರದು. ಇದು ಬಿಜೆಪಿ ಬುದ್ಧಿಯ ನೈಜ ಚಿತ್ರ” ಎಂದು ವ್ಯಂಗ್ಯವಾಡಿದರು. “ಜಿಎಸ್‌ಟಿ ಹೋರಾಟ ಕಾಂಗ್ರೆಸಿನದು, ಚೀಪ್ ಪಾಲಿಟಿಕ್ಸ್ ಬಿಜೆಪಿಯದು”. ಜಿಎಸ್‌ಟಿ ಕುರಿತು ಮಾತನಾಡಿದ ಅವರು, “ಜಿಎಸ್‌ಟಿ ಕಡಿಮೆ ಮಾಡಬೇಕು ಎಂದು ಹೋರಾಟ ಮಾಡಿದ್ದು ನಾವು ಕಾಂಗ್ರೆಸ್ ನವರು. ಆದರೆ ಒಬ್ಬನೇ ಒಬ್ಬ ಬಿಜೆಪಿ ಸಂಸದ ಅಥವಾ ಶಾಸಕ ಜನರ ಪರವಾಗಿ ಬಾಯಿ ತೆರೆದಿಲ್ಲ. ಈ ಬಗ್ಗೆ ನಾನು ಸ್ವತಃ ವಿಧಾನ ಪರಿಷತ್‌ನಲ್ಲಿ ಧ್ವನಿ ಎತ್ತಿದ್ದೇನೆ” ಎಂದು ಹೇಳಿದರು.

15 ಲಕ್ಷ ಎಲ್ಲಿ?” – ಜನಧನ್ ಯೋಜನೆ ಮೇಲೆ ಟೀಕೆ:

ಪ್ರಧಾನಿ ಮೋದಿಯವರ ಜನಧನ್ ಯೋಜನೆಯನ್ನು ಉಲ್ಲೇಖಿಸಿ ಅವರು “ಜನಧನ್ ಅಕೌಂಟ್ ತೆರೆಸಿದರು, 15 ಲಕ್ಷ ಅಕೌಂಟ್ ಗೆ ಬರುತ್ತದೆ ಎಂದರು. ಆದರೆ ಅಕೌಂಟ್‌ಗಳಲ್ಲಿ ಹಣ ಶೂನ್ಯ. ಇಂತಹ ಶೂನ್ಯ ಅಕೌಂಟ್ ಗಳನ್ನು ಬ್ಯಾಂಕಿನವರು ಮುಚ್ಚಿದ್ದಾರೆ. ನಾನು ಮ್ಯಾನೇಜರ್ ಹತ್ತಿರ ಕೇಳಿದೆ “ಯಾಕೆ ರಜೆ ಹಾಕಿದ್ದೀರಿ?” ಎಲ್ಲಾ ಜನಧನ್ ಗ್ರಾಹಕರು ಬ್ಯಾಂಕಿಗೆ ಬಂದು ಬ್ಯಾಂಕ್ ಮೇಜು ಕುಟ್ಟಿ ಹದಿನೈದು ಲಕ್ಷ ಬಂತಾ ಅಂತ ಪ್ರತಿದಿನ ಕಿರಿಕಿರಿ ಮಾಡುತ್ತಾರೆ. ನನಗೆ ತಲೆಬಿಸಿಯಾಗಿ ರಜೆ ಹಾಕಿದ್ದೇನೆ ಎಂದು ತಿಳಿಸಿದರು. ಬ್ಯಾಂಕ್ ಮ್ಯಾನೇಜರ್‌ಗಳು ಜನರಿಂದ ಕಿರಿಕಿರಿಯಾಗಿದ್ದಾರೆ. ಈ ಸುಳ್ಳು ಭರವಸೆಗಳಿಂದ ಬಿಜೆಪಿ ಜನರನ್ನು ಮೋಸಗೊಳಿಸಿದ್ದಾರೆ.”

ಸುಳ್ಳಿನ ಕಂತೆ ಬಿಜೆಪಿ”:

ಕೊನೆಗೆ MLC ಐವನ್ ಡಿಸೋಜರವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ “ಬಿಜೆಪಿ ದಿನದಿಂದ ದಿನಕ್ಕೆ ಸುಳ್ಳಿನ ಕಂತೆಯಾಗಿದೆ. ಜನರಿಗೆ ನಿಜವಾದ ಅಭಿವೃದ್ಧಿ ಕೊಡುವ ಬದಲು, ಪತ್ರಿಕೆಗಳಲ್ಲಿ ಹಾಗೂ ಪೋಸ್ಟರ್‌ಗಳಲ್ಲಿ ಸುಳ್ಳು ಪ್ರಚಾರ ಮಾತ್ರ ಮಾಡುತ್ತಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಪ್ರಾಜೆಕ್ಟ್ ತೋರಿಸಿ ಎಂಬ ಸವಾಲು:

ಸಂಸದ ಧನಂಜಯ್ ಕುಮಾರ್ ಕಾಲದಿಂದಲೇ ರಾಜಕೀಯದಲ್ಲಿ ಸಕ್ರಿಯನಾಗಿರುವೆ ಎಂದು ಹೇಳಿದ ಅವರು, “ಸದಾನಂದ ಗೌಡರು ಅಥವಾ ಶೋಭಾ ಕರಂದ್ಲಾಜೆ ಇವರು ಮಾಡಿದ ಒಂದೇ ಒಂದು ಪ್ರಾಜೆಕ್ಟ್ ತೋರಿಸಲಿ” ಎಂದು ಬಿಜೆಪಿ ನಾಯಕರಿಗೆ ಸವಾಲು ಹಾಕಿದರು. ಮಂಗಳೂರು ರೈಲು ನಿಲ್ದಾಣದ ಹಾಲಿ ಸ್ಥಿತಿಯನ್ನು ಉಲ್ಲೇಖಿಸಿ ಅವರು, “ರೈಲು ನಿಲ್ದಾಣ ಸೋರ್ತಿದೆ ಆದರೂ ಅವರಿಗೆ ಕಾಣಿಸುವುದಿಲ್ಲ.” ಎಂದರು.

ಶಾಸಕ ಐವನ್ ಡಿಸೋಜರವರ ಈ ಪತ್ರಿಕಾಗೋಷ್ಠಿ ಬಿಜೆಪಿ ಸರ್ಕಾರದ “ಶೂನ್ಯ ಅಭಿವೃದ್ಧಿ” ಹಾಗೂ “ಸುಳ್ಳು ಪ್ರಚಾರ” ವಿರೋಧಿ ಧ್ವನಿಯಾಗಿ ಗಮನ ಸೆಳೆಯಿತು.

You may also like

News

Mangalore Diocese Clergy Retreat Concludes at Shanthi Kiran

The first batch of the Annual Clergy Retreat 2026 of the Diocese of Mangalore concluded on Friday, July 10, at
News

Father Muller Ushers in a New Era of Precision Orthopaedics with the Region’s First STRYKER–USA MAKO SmartRobotics™ System

Father Muller Medical College Hospital has once again reaffirmed its commitment to pioneering excellence in healthcare with the commissioning of

You cannot copy content of this page