ಡಾ. ಸುರೇಶ ನೆಗಳಗುಳಿ ವೃತ್ತಿ ಪ್ರವೃತ್ತಿ ಆವೃತ್ತಿ ಕೃತಿ ನಾಳೆ ಅಕ್ಟೋಬರ್ 26ರಂದು ಬಿಡುಗಡೆ
ಮಂಗಳೂರಿನ ಕಣಚೂರು ಆಯುರ್ವೇದ ವೈದ್ಯಕೀಯ ಕಾಲೇಜಿನ ಪ್ರಧಾನ ಸಲಹೆಗಾರ, ಮಂಗಳಾ ಆಸ್ಪತ್ರೆಯ ಮೂಲವ್ಯಾಧಿ ತಜ್ಞ ಮತ್ತು ಹೆಸರಾಂತ ಬರಹಗಾರ ಡಾ. ಸುರೇಶ ನೆಗಳಗುಳಿ ಇವರ ಕುರಿತಾದ ಬದುಕು ಬರೆಹ, ವೃತ್ತಿ ಪ್ರವೃತ್ತಿ ಅವೃತ್ತಿ ಎಂಬ ಕೃತಿಯು ನಾಳೆ ಅಕ್ಟೋಬರ್ 26ರಂದು ಭಾನುವಾರ ದೇರಳಕಟ್ಟೆಯ ವಿದ್ಯಾರತ್ನ ಶಾಲಾ ಸಭಾಂಗಣದಲ್ಲಿ ನಡೆಯುವ ಪಿ.ವಿ. ಪ್ರದೀಪ್ ಕುಮಾರ್ ರವರ ಕಥಾಬಿಂದು ವಾರ್ಷಿಕೋತ್ಸವದ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿದೆ.

ಈ ಕೃತಿಯನ್ನು ಖ್ಯಾತ ಬರಹಗಾರ ಕೊಳಚಪ್ಪೆ ಗೋವಿಂದ ಭಟ್ ರವರು ಸಂಪಾದನೆ ಮಾಡಿದ್ದು ಚೊಕ್ಕಾಡಿದ್ವಯರ ಸಹಿತ ಹಲವು ಗಣ್ಯರ ಅಶಯ ನುಡಿಗಳನ್ನು ಒಳಗೊಂಡಿದೆ. ಈ ಕೃತಿಯು ಸುರೇಶ ನೆಗಳಗುಳಿಯವರ ಶುಭ ಪ್ರಕಾಶನದ ಮೂಲಕ ಬೆಳಕಿಗೆ ಬಂದಿದೆ.





