UAE ಲಾಟರಿಯಲ್ಲಿ ಭಾರತದ ತೆಲಂಗಾಣ ಯುವಕನಿಗೆ ಬಂಪರ್ ಅದೃಷ್ಟ
240 ಕೋಟಿ ರೂಪಾಯಿ ಪ್ರಥಮ ಬಹುಮಾನ ತನ್ನದಾಗಿಸಿ ಕೊಂಡ ಅನಿಲ್ ಕುಮಾರ್ ಬೊಲ್ಲಾ

UAE ಲಾಟರಿ ಇತಿಹಾಸದಲ್ಲೇ ಅತಿ ದೊಡ್ಡ ಬಹುಮಾನವಾದ 100 ಮಿಲಿಯನ್ ದಿರ್ಹಾಮ್ಸ್ ಭಾರತದ ಸುಮಾರು ₹240 ಕೋಟಿ ಗೆದ್ದ ಅದೃಷ್ಟಶಾಲಿ ತೆಲಂಗಾಣ ಮೂಲದ 29 ವರ್ಷದ ಅನಿಲ್ ಕುಮಾರ್ ಬೊಲ್ಲಾ ಅಬುಧಾಬಿಯಲ್ಲಿ ಹೊಸ ಇತಿಹಾಸ ರಚಿಸಿದ್ದಾರೆ.
88 ಲಕ್ಷ ಟಿಕೆಟ್‌ಗಳಲ್ಲಿ ಒಂದೇ ಒಂದು ಗೆಲ್ಲುವ ಟಿಕೆಟ್:
ಒಂದೂವರೆ ವರ್ಷಗಳ ಹಿಂದೆ ಉದ್ಯೋಗದ ನಿಮಿತ್ತ ಅಬುಧಾಬಿಗೆ ತೆರಳಿದ್ದ ಅನಿಲ್ ಕುಮಾರ್, ಯುಎಇ ಲಾಟರಿಯ 23ನೇ ಲಕ್ಕಿ ಡ್ರಾದಲ್ಲಿ ಜಯಗಳಿಸಿ ಕೋಟ್ಯಾಧಿಪತಿಯಾದರು. ಸುಮಾರು 88 ಲಕ್ಷ ಟಿಕೆಟ್‌ಗಳಲ್ಲಿ ಒಂದೇ ಒಂದು ಗೆಲ್ಲುವ ಟಿಕೆಟ್ ಅವರದೇ ಆಗಿತ್ತು.

ಅನಿಲ್ ಕುಮಾರ್ ರವರು ಟಿಕೆಟ್‌ಗಳನ್ನು ಖರೀದಿಸುವಾಗ ತಮ್ಮ ತಾಯಿಯ ಜನ್ಮ ತಿಂಗಳಾದ “11” ಸಂಖ್ಯೆಯನ್ನು ಆಯ್ಕೆ ಮಾಡಿದ್ದರಿಂದ ಈ ಗೆಲುವು ಅವರಿಗೆ ವಿಶಿಷ್ಟ ಭಾವನಾತ್ಮಕ ಅರ್ಥ ನೀಡಿದೆ. ಬಹುಮಾನ ಘೋಷಣೆ ತಿಳಿದ ಕ್ಷಣದಲ್ಲೇ ಅವರು ಅಬುಧಾಬಿಯಲ್ಲೇ ಇದ್ದು ಮೊದಲು ಸಹೋದ್ಯೋಗಿಗೆ ನಂತರ ಭಾರತದಲ್ಲಿರುವ ತಮ್ಮ ಸಹೋದರನಿಗೆ ಸುದ್ದಿ ಹಂಚಿಕೊಂಡರು.

ತಮ್ಮ ಭವ್ಯ ಗೆಲುವಿನ ಹಣವನ್ನು ಬುದ್ಧಿವಂತಿಕೆಯಿಂದ ಹೂಡಿಕೆ ಮಾಡುವ ಉದ್ದೇಶ ಹೊಂದಿರುವ ಅನಿಲ್ ಕುಮಾರ್, ಕೆಲವು ಕನಸುಗಳನ್ನು ಈಡೇರಿಸಲು ಯೋಜನೆ ಮಾಡಿದ್ದಾರೆ. ಒಂದು ಸೂಪರ್ ಕಾರು ಖರೀದಿಸುವುದು, ಏಳು ನಕ್ಷತ್ರ ಹೋಟೆಲ್‌ನಲ್ಲಿ ಯಶಸ್ಸು ಆಚರಿಸುವುದು, ತಮ್ಮ ತಾಯಿ ಮತ್ತು ತಂದೆಯವರನ್ನು ಯುಎಇಗೆ ಕರೆತಂದು ಅವರಿಗೆ ಸುಖಕರ ಜೀವನ ಒದಗಿಸುವುದು ಹಾಗೂ ಒಂದು ಭಾಗವನ್ನು ದಾನ ಕಾರ್ಯಗಳಿಗೆ ಬಳಸುವ ಆಸೆ ಅವರು ವ್ಯಕ್ತಪಡಿಸಿದ್ದಾರೆ.

ಇದೇ ಡ್ರಾದಲ್ಲಿ ಅನಿಲ್ ಕುಮಾರ್ ಜೊತೆಗೆ 7,145 ಜನರು 100 ದಿರ್ಹಾಮ್‌ನಿಂದ 100,000 ದಿರ್ಹಾಮ್‌ಗಳವರೆಗಿನ ಇತರ ಸಣ್ಣ ಬಹುಮಾನಗಳನ್ನು ಪಡೆದಿದ್ದಾರೆ.




