ಇಂದು ಹಸೆಮನೆ ಏರಬೇಕಿದ್ದ ಮದುಮಗಳು ಹೃದಯಾಘಾತದಿಂದ ಸಾವು
ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದನ

ಕೊರೊನಾ ಲಸಿಕೆ ಪಡೆದ ನಂತದ ಯುವಕ ಯುವತಿಯರು ಹೃದಯಾಘಾತಕ್ಕೆ ಬಲಿಯಾಗುತ್ತಾ ಇದ್ದಾರೆ. ಆದರೆ ಯಾವ ಸರಕಾರ ಕೂಡ ಈ ಬಗ್ಗೆ ತಲೆಕೆಡಿಸಿಸಿ ಕೊಳ್ಳಲಿಲ್ಲ. ಇದೀಗ ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಜೀವ ಬಲಿಯಾಗಿದ್ದು, ಮದುವೆಗೆ ಮುನ್ನ ದಿನವೇ ಕುಸಿದುಬಿದ್ದು ಹೃದಯಾಘಾತದಿಂದ ನವವಧು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿನ್ನೆ ಅಕ್ಟೋಬರ್ 30ರಂದು ಗುರುವಾರ ನಡೆದಿದೆ.

ಮೃತ ಯುವತಿ 32 ವರ್ಷ ಪ್ರಾಯದ ಶೃತಿ ಎಂದು ತಿಳಿದುಬಂದಿದೆ. ತರೀಕೆರೆಯ ದಿಲೀಪ್ ಜೊತೆ ಇಂದು ಅಕ್ಟೋಬರ್ 31ರಂದು ಶುಕ್ರವಾರ ಶೃತಿ ವಿವಾಹ ತರೀಕೆರೆ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಯಬೇಕಾಗಿತ್ತು. ಆದರೆ ವಧು ಶೃತಿ ಮನೆಯಲ್ಲಿದ್ದಾಗಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಚಿಕ್ಕಮಗಳೂರು ಜಿಲ್ಲೆಯ ಅಂಜಪುರ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಇಂದು ಮದುವೆ ಸಿದ್ಧತೆಯಲ್ಲಿದ್ದ ವಧು ನಿನ್ನೆ ಇದ್ದಕ್ಕಿದ್ದಂತೆ ಹೃದಯಾಘಾತಕ್ಕೆ ಬಲಿಯಾಗಿದ್ದಾಳೆ.




