July 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಕ್ರೀಡಾಕೂಟ – 2025-26

ಖೇಲ್ ಇಂಡಿಯಾ ಮೂಲಕ ಬಂಟ್ವಾಳದಲ್ಲಿ ಕ್ರೀಡಾ ಸಂಸ್ಕೃತಿ ಬೆಳೆಸಲು, ಸುಸಜ್ಜಿತ ಕ್ರೀಡಾಂಗಣ ನಿರ್ಮಾಣಕ್ಕೆ ಯತ್ನ – ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ಬಾಲಕ-ಬಾಲಕಿಯರ ಕ್ರೀಡಾಕೂಟ ಬಂಟ್ವಾಳ ಎಸ್.ವಿ.ಎಸ್. ಶಾಲಾ ಆಟದ ಮೈದಾನದಲ್ಲಿ ಭವ್ಯವಾಗಿ ನವಂಬರ್ 3 ಮತ್ತು 4ರಂದು ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತುರವರು, “ಬಂಟ್ವಾಳದಂಥ ಪ್ರಮುಖ ತಾಲೂಕು ಕೇಂದ್ರದಲ್ಲಿ ಕ್ರೀಡಾಂಗಣವಿಲ್ಲ ಎನ್ನುವುದು ಬೇಸರದ ಸಂಗತಿ. ಖೇಲ್ ಇಂಡಿಯಾ ಯೋಜನೆ ಮುಖಾಂತರ ಬಂಟ್ವಾಳಕ್ಕೆ ಸುಸಜ್ಜಿತ ಕ್ರೀಡಾಂಗಣ ನಿರ್ಮಾಣದ ಪ್ರಸ್ತಾವನೆ ಕಳುಹಿಸಲಾಗಿದೆ. ಶಟಲ್ ಹಾಗೂ ಬ್ಯಾಡ್ಮಿಂಟನ್ ರೀತಿಯ ಕ್ರೀಡಾಕೂಟಗಳು ಬಂಟ್ವಾಳ ತಾಲೂಕು ಕೇಂದ್ರದಲ್ಲೇ ನಡೆಯುವಂತೆ ಶಾಶ್ವತ ವ್ಯವಸ್ಥೆ ಕಲ್ಪಿಸಲಾಗುವುದು. ಮುಂದಿನ ದಿನಗಳಲ್ಲಿ ಬಂಟ್ವಾಳದ ಕ್ರೀಡಾಕೂಟಗಳು ಬಂಟ್ವಾಳದಲ್ಲೇ ನಡೆಯುವಂತಾಗಬೇಕು,” ಎಂದು ಹೇಳಿದರು.

ಕ್ರೀಡಾಕೂಟದ ಉದ್ಘಾಟನೆ – ವಿವಿಧ ಗಣ್ಯರ ಸಮ್ಮಿಲನ

ಬಂಟ್ವಾಳ ಎಸ್.ವಿ.ಎಸ್. ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟವನ್ನು ಬುಡಾ ಅಧ್ಯಕ್ಷ ಬೇಬಿ ಕುಂದರ್ ರವರು ಉದ್ಘಾಟಿಸಿದರು. ಮಾಜಿ ಶಾಸಕ ಹಾಗೂ ಸಚಿವರಾದ ರಮಾನಾಥ ರೈಯವರು ಕ್ರೀಡಾಕೂಟಕ್ಕೆ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ ನಾವೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಇಂದಿರಾ, ಬಂಟ್ವಾಳ ತಹಸೀಲ್ದಾರ್ ಮಂಜುನಾಥ್, ಬಂಟ್ವಾಳ ಬಿಇಒ ಮಂಜುನಾಥನ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಆಶಾ ನಾಯಕ್, ಎಸ್.ವಿ.ಎಸ್. ಶಾಲಾ ಮುಖ್ಯ ಶಿಕ್ಷಕಿ ರೋಶನಿ, ಶಿಕ್ಷಕರ ಸಂಘದ ಅಖಿಲ್ ಶೆಟ್ಟಿ, ಜಗದೀಶ್ ರೈ, ನವೀನ್ ಪಿ.ಎಸ್., ಸುಕನ್ಯಾ ರತ್ನ, ಇಂದುಶೇಖರ ಹಾಗೂ ಇಸಿಓ ರಮಾನಂದ ನೂಜಿಪ್ಪಾಡಿ, ಸುಧಾ, ಪ್ರತಿಮಾ, ನಾವೂರು ಪಿಡಿಒ ರಾಬರ್ಟ್ ಫೆರ್ನಾಂಡಿಸ್, ಸಿಆರ್‌ಪಿ ಆಂಜನೇಯ, ಉದ್ಯಮಿ ಶನ್ಫತ್ ಶರೀಫ್, ಉಮಾನಾಥ ರೈ ಮೇರಾವು ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು. ಬಂಟ್ವಾಳದ ಕ್ರೀಡಾಕೂಟದಲ್ಲಿ ಮಕ್ಕಳ ಪ್ರತಿಭೆಗೆ ವೇದಿಕೆ ಹಾಗೂ ಭವಿಷ್ಯದಲ್ಲಿ ಕ್ರೀಡಾಂಗಣದಿಂದ ಕ್ರೀಡಾಸಂಸ್ಕೃತಿ ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತವಾಯಿತು.

ಕಾರ್ಯಕ್ರಮ ನಿರ್ವಹಣೆ ಮತ್ತು ವಂದನೆಗಳು

ಬಂಟ್ವಾಳ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಯರಾಮ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಿಕ್ಷಕ ಚಿನ್ನಪ್ಪ ಜಾಲ್ಸೂರು ವಂದನೆ ಸಲ್ಲಿಸಿದರು.

 

You may also like

News

ಶಿಲುಬೆ ಧ್ವಂಸಗೊಳಿಸಿದರೆ ನಂಬಿಕೆ ನಾಶವಾಗದು – ಪಶ್ಚಿಮ ಬಂಗಾಳದ ಚರ್ಚ್ ಮೇಲಿನ ದಾಳಿಗೆ AICU ರಾಜಾಧ್ಯಕ್ಷ ಅಲ್ವಿನ್ ಡಿಸೋಜ ಪಾನೀರ್ ಆಕ್ರೋಶ

ಪಶ್ಚಿಮ ಬಂಗಾಳದ ಬರೂಯಿಪುರದಲ್ಲಿ ಹೊಸದಾಗಿ ನಿರ್ಮಾಣಗೊಂಡಿರುವ ಚರ್ಚ್ ಮೇಲೆ ದಾಳಿ ನಡೆಸಿ, ಪವಿತ್ರ ಶಿಲುಬೆಯನ್ನು ಧ್ವಂಸಗೊಳಿಸಿರುವ ಘಟನೆ ಅತ್ಯಂತ ಖಂಡನೀಯವಾಗಿದ್ದು, ಧಾರ್ಮಿಕ ಸೌಹಾರ್ದತೆಗೆ ಧಕ್ಕೆ ತರುವ ಇಂತಹ
News

Former CSST General Councillor Sr Josephette Passes Away

The Congregation of the Carmelite Sisters of Saint Teresa (CSST) is mourning the passing of Sr Josephette, former General Councillor

You cannot copy content of this page