August 8, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ವಿಲ್ಫ್ರೆಡ್ ಡಿಸೋಜ ವೀಡಿಯೋ ಜರ್ನಲಿಸ್ಟ್ TV9 ಮಂಗಳೂರು ಆಯ್ಕೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ರಿ.), ದಕ್ಷಿಣ ಕನ್ನಡ ಜಿಲ್ಲಾ ಘಟಕದ 2025–28ರ ಅವಧಿಗೆ ಸಂಬಂಧಿಸಿದ ಪದಾಧಿಕಾರಿಗಳ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಚುನಾವಣೆಯು ಮಂಗಳೂರಿನ ವಾರ್ತಾ ಇಲಾಖಾ ಕಚೇರಿಯಲ್ಲಿ ನವಂಬರ್ 9ರಂದು ಭಾನುವಾರ ಯಶಸ್ವಿಯಾಗಿ ಜರುಗಿತು. ವಿವಿಧ ಮಾಧ್ಯಮಗಳಿಂದ ಬಂದ ಪತ್ರಕರ್ತರು ಉತ್ಸಾಹಭರಿತವಾಗಿ ಭಾಗವಹಿಸಿದ ಈ ಚುನಾವಣೆಯಲ್ಲಿ, ಟಿವಿ9 ಮಂಗಳೂರಿನ ಹಿರಿಯ ವೀಡಿಯೋ ಜರ್ನಲಿಸ್ಟ್ ವಿಲ್ಫ್ರೆಡ್ ಡಿಸೋಜರವರು ಉಪಾಧ್ಯಕ್ಷರಾಗಿ ಭರ್ಜರಿ ಬಹುಮತದಿಂದ ಆಯ್ಕೆಯಾಗಿದ್ದಾರೆ.

28 ವರ್ಷಗಳ ಪತ್ರಿಕೋದ್ಯಮ ಸೇವೆ ಹಾಗೂ 19 ವರ್ಷಗಳಿಂದ ಟಿವಿ9ನಲ್ಲಿ ವೀಡಿಯೋ ಜರ್ನಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿರುವ ವಿಲ್ಫ್ರೆಡ್ ಡಿಸೋಜರವರು ಕ್ಯಾಮೆರಾದ ಕಣ್ಣಿನಿಂದ ಸತ್ಯವನ್ನು ಸೆರೆಹಿಡಿಯುವ ನೈಜ ಪತ್ರಿಕೋದ್ಯಮದ ಪ್ರಬಲ ಉದಾಹರಣೆ. ಸ್ಥಳದಲ್ಲೇ ಸತ್ಯವನ್ನು ಹಿಡಿಯುವ ಅವರ ಚುರುಕುತನ, ನಿಖರ ವರದಿ ಹಾಗೂ ಪ್ರಾಮಾಣಿಕ ಶ್ರಮವು ಪತ್ರಿಕೋದ್ಯಮ ಲೋಕದಲ್ಲಿ ಅವರಿಗೆ ವಿಶಿಷ್ಟ ಸ್ಥಾನವನ್ನು ನೀಡಿದೆ.

“ಕ್ಯಾಮೆರಾದ ಕಣ್ಣಿನಲ್ಲಿ ಸತ್ಯ” — ವಿಲ್ಫ್ರೆಡ್‌ರವರ ಜೀವನ ಮಂತ್ರ:

ಸುದ್ದಿ ದೊರಕಿದ ಕ್ಷಣದಲ್ಲೇ ಸ್ಥಳಕ್ಕೆ ಧಾವಿಸಿ ನೇರ ದೃಶ್ಯಗಳ ಮೂಲಕ ಸತ್ಯವನ್ನು ಜನರ ಮುಂದೆ ತರುವ ವಿಲ್ಫ್ರೆಡ್ ಡಿಸೋಜರವರ ಪ್ರಾಮಾಣಿಕತೆ ಹಾಗೂ ನಿಷ್ಠೆ, ಪತ್ರಿಕೋದ್ಯಮದ ನಿಜವಾದ ಆತ್ಮವನ್ನು ಪ್ರತಿಬಿಂಬಿಸುತ್ತದೆ. ಲೈವ್ ಸುದ್ದಿಗಳ ಮೂಲಕ ಜನರಿಗೆ ಕ್ಷಣಕ್ಷಣದ ನಿಜಸ್ಥಿತಿಯನ್ನು ತಲುಪಿಸುವ ಅವರ ಸೇವೆ ಜನರ ವಿಶ್ವಾಸವನ್ನು ಹೆಚ್ಚಿಸಿದೆ.

ಸಮಾಜ ಸೇವೆಯಲ್ಲಿ ಮುಂಚೂಣಿ:

ವೃತ್ತಿಯ ಜೊತೆ ಸಮಾಜ ಸೇವೆಯಲ್ಲಿಯೂ ವಿಲ್ಫ್ರೆಡ್ ಡಿಸೋಜ ಮಾದರಿ ವ್ಯಕ್ತಿ.

  • 2014ರಲ್ಲಿ ಮಂಗಳೂರಿನ ಕದ್ರಿಯ ವಿಧವೆ ಪ್ರಮೀಳರವರಿಗೆ ಹೊಸ ಮನೆ ನಿರ್ಮಿಸಿ ಹಸ್ತಾಂತರಿಸಿದರು.
  • 2018ರಲ್ಲಿ ಬಂಟ್ವಾಳ ತಾಲ್ಲೂಕಿನ ಪೆರುವಾಯಿ ಗ್ರಾಮದ ಜುಲಿಯಾನ ಡಿಸೋಜರವರಿಗೆ ಹೊಸ ಮನೆ ನೀಡುವ ಕಾರ್ಯಕ್ಕೆ ಮುಂದಾದರು.
  • ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಿ, ಬಸ್ ಸೇವೆ ಮತ್ತು ರಸ್ತೆ ಸುಧಾರಣೆಗೆ ಹೋರಾಡಿ, ಸರ್ವಧರ್ಮ ಸೌಹಾರ್ದ ಕೂಟಗಳ ಆಯೋಜನೆಗೂ ಮುಂದಾದರು.

ರಾಜ್ಯ ಮಟ್ಟದ ಗೌರವಗಳು:

  • ಕಲ್ಕುರ ಪ್ರತಿಷ್ಠಾನದಿಂದ “ಪತ್ರಿಕೋದ್ಯಮದ ಅತ್ಯುತ್ತಮ ವೀಡಿಯೋ ಚಿತ್ರೀಕರಣ” ಪ್ರಶಸ್ತಿ.
  • 2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ — ದೀರ್ಘಕಾಲದ ಪತ್ರಿಕೋದ್ಯಮ ಸೇವೆ ಮತ್ತು ಸಮಾಜಮುಖಿ ಕಾರ್ಯಗಳಿಗೆ ಗೌರವ.

ಧಾರ್ಮಿಕ ಕ್ಷೇತ್ರದಲ್ಲೂ ಸೇವೆ:

ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ವಿವಿಧ ಪರಿಷತ್ತುಗಳಲ್ಲಿ ದೀರ್ಘ ಸೇವೆ ಸಲ್ಲಿಸಿರುವ ವಿಲ್ಫ್ರೆಡ್ ಡಿಸೋಜರವರು ದೇವಾಲಯದ ಅಭಿವೃದ್ಧಿಗೆ ಸರ್ಕಾರದಿಂದ  ಅನುದಾನ ತರಲು ಸಹಕರಿಸಿದ್ದಾರೆ.

You may also like

News

ನೀರುಮಾರ್ಗದ ಚರ್ಚ್ ನ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ಸಾಂಪ್ರದಾಯಿಕ ಆಹಾರ ಹಬ್ಬದ ಸಂಭ್ರಮ

ಮಂಗಳೂರು ಧರ್ಮಕ್ಷೇತ್ರಕ್ಕೆ ಒಳಪಟ್ಟ ನೀರುಮಾರ್ಗದ ಸಂತ ಜೋಸೆಫ್ ಕಾರ್ಮಿಕರ ದೇವಾಲಯದ ಮಹಿಳಾ ಆಯೋಗ ಹಾಗೂ ಮದರ್ ಮೇರಿ ಮಹಿಳಾ ಸಂಘಟನೆಯ ಜಂಟಿ ಆಶ್ರಯದಲ್ಲಿ ‘ಸಾಂಪ್ರದಾಯಿಕ ಆಹಾರ ಹಬ್ಬ’
News

Father Muller College of Nursing Strengthens Academic Collaborations Through Two more Strategic MoUs on Palliative Care and Counselling

Reinforcing its commitment to holistic nursing education, interdisciplinary learning, and community-oriented healthcare, Father Muller School & College of Nursing (FMCON)

You cannot copy content of this page