August 29, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಪಾಲ್ದನೆ ಚರ್ಚ್ ನಲ್ಲಿ ಪ್ರಕೃತಿಯಲ್ಲಿ ಒಂದು ದಿನ ಆಚರಣೆ

ಮಂಗಳೂರಿನ ಪಾಲ್ದನೆ ಸಂತ ತೆರೆಜಾ ಚರ್ಚ್ ಪಾಲನಾ ಸಮಿತಿ ಮತ್ತು ಚರ್ಚ್ ನ ಕ್ರೈಸ್ತ ಶಿಕ್ಷಣ ಬೋಧಿಸುವ ಶಿಕ್ಷಕ-ಶಿಕ್ಷಕಿಯರು ಜಂಟಿಯಾಗಿ ‘ಪ್ರಕೃತಿಯಲ್ಲಿ ಒಂದು ದಿನ’ ಆಚರಣೆಯ ಅಂಗವಾಗಿ ಹೊನ್ನಾವರ ಶರಾವತಿ ನದಿ ಕಿನಾರೆಯಲ್ಲಿರುವ ಹೋಲಿ ಕ್ರಾಸ್‌ ಬ್ರದರ್ಸ್ ಸಂಸ್ಥೆಯ ಆವರಣಕ್ಕೆ ಭೇಟಿ ನೀಡಿ ಪ್ರಕೃತಿ ಸೌಂದರ್ಯವನ್ನು ಸವಿದರು.

ಪಾಲ್ದನೆ ಚರ್ಚ್ ಪ್ರಧಾನ ಧರ್ಮಗುರು ವಂದನೀಯ ಫಾದರ್ ರಿಚಾರ್ಡ್ ಅಲೋಶಿಯಸ್ ಕುವೆಲ್ಲೊರವರು ಪ್ರಾರ್ಥನೆಯೊಂದಿಗೆ ಈ ಪ್ರವಾಸಕ್ಕೆ ಚಾಲನೆ ನೀಡಿದರು. ಪ್ರಕೃತಿ ಮಾನವನಿಗೆ ದೇವರು ನೀಡಿದ ಒಂದು ವರ. ದಿನವಿಡೀ ಈ ಪ್ರಕೃತಿ ಮಾನವನಿಗೆ ಜೀವನದ ಒಂದು ಅಂಗವಾಗಿರುತ್ತದೆ. ಪಾಲನಾ ಸಮಿತಿಯವರ ಈ ಪ್ರವಾಸ ಮುಂದೆ ಅವರು ಸಲ್ಲಿಸುವ ಸೇವೆಗೆ ಒಗ್ಗಟ್ಟಿನ ಮಂತ್ರವಾಗುತ್ತದೆ ಎಂದವರು ಹೇಳಿದರು.

ಈ ಸಂದಭರ್ದಲ್ಲಿ ಡೀಕನ್ ರೋವಿನ್ ಲೋಪೆಜ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್‌ ಫೆರ್ನಾಂಡಿಸ್, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಕ್ರೈಸ್ತ ಶಿಕ್ಷಣ ಸಂಯೋಜಕಿ ಲಿಝಿ ಫೆರ್ನಾಂಡಿಸ್, ಆಧ್ಯಾತ್ಮಿಕ ಸಮಿತಿಯ ಸಂಯೋಜಕಿ ಪ್ರೆಸಿಲ್ಲಾ ಫೆರ್ನಾಂಡಿಸ್, ವಾರ್ಡ್ ಮುಖ್ಯಸ್ಥರು, ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಅಧ್ಯಕ್ಷರು ಹಾಗೂ ಧರ್ಮ ಭಗಿನಿಯರು ಉಪಸ್ಥಿತರಿದ್ದರು.

You may also like

News

ನೇಪಾಳದ ದುಃಖದಲ್ಲಿ ಮಂಗಳೂರು ಧರ್ಮಕ್ಷೇತ್ರವೂ ಭಾಗಿ – ವಿಶೇಷ ಪ್ರಾರ್ಥನೆಗೆ ಬಿಷಪ್ ಸಲ್ಡಾನ್ಹಾ ಕರೆ

ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಫಾದರ್ ರೂಪೇಶ್ ಮಾಡ್ತಾ ಹಾಗೂ ರೋಯ್ ಕ್ಯಾಸ್ತೆಲಿನೊ ಜಂಟಿ ಪತ್ರಿಕಾ ಪ್ರಕಟನೆ ಮಂಗಳೂರು: ನೇಪಾಳದ ವಿವಿಧ ಭಾಗಗಳಲ್ಲಿ ಸಂಭವಿಸಿರುವ ಭೀಕರ ಪ್ರವಾಹ ಹಾಗೂ
News

ಕಾನ್ಪುರ ವಿಮಾನ ದುರಂತ – ಉಡುಪಿ ಮೂಲದ ತರಬೇತಿ ಪೈಲಟ್ ಅಭಿಷೇಕ್ ಪೂಜಾರಿ ಮೃತ್ಯು

ಉತ್ತರ ಪ್ರದೇಶದ ಕಾನ್ಪುರದಲ್ಲಿ ಖಾಸಗಿ ತರಬೇತಿ ವಿಮಾನ ಪತನಗೊಂಡು ಉಡುಪಿ ಜಿಲ್ಲೆಯ ಮೂಲದ ಯುವ ತರಬೇತಿ ಪೈಲಟ್ 22 ವರ್ಷ ಪ್ರಾಯದ ಅಭಿಷೇಕ್ ಪೂಜಾರಿ ಮೃತಪಟ್ಟಿರುವುದು ದೃಢಪಟ್ಟಿದೆ.

You cannot copy content of this page