August 9, 2026
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ವೃಕ್ಷಮಾತೆ ಡಾ. ಸಾಲುಮರದ ತಿಮ್ಮಕ್ಕ ನಿಧನ

ನಾಳೆ ಸರ್ಕಾರಿ ರಜೆ ಇಲ್ಲ – ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ

ಖ್ಯಾತ ಪರಿಸರ ಹೋರಾಟಗಾರ್ತಿ, ನಾಡೋಜ, ಪದ್ಮಶ್ರೀ ಪುರಸ್ಕೃತರು ಹಾಗೂ ಕರ್ನಾಟಕ ಸರ್ಕಾರದ ಮಾನ್ಯ ಪರಿಸರ ರಾಯಭಾರಿ ವೃಕ್ಷಮಾತೆ ಡಾ. ಸಾಲುಮರದ ತಿಮ್ಮಕ್ಕರವರು ಇಂದು ನವೆಂಬರ್ 14ರಂದು ಶುಕ್ರವಾರ ನಿಧನ ಹೊಂದಿದ್ದಾರೆ. ಅವರ ನಿಧನಕ್ಕೆ ಕರ್ನಾಟಕ ಸರ್ಕಾರ ತನ್ಮಯ ಸಂತಾಪ ಸೂಚಿಸಿದೆ.

ಸರ್ಕಾರದ ಅಧಿಸೂಚನೆ ಪ್ರಕಾರ, ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಗುವುದು. ಆದರೆ ರಾಜ್ಯದಲ್ಲಿ ನಾಳೆ ನವೆಂಬರ್ 15ರಂದು ಶನಿವಾರ ಯಾವುದೇ ಸರ್ಕಾರಿ ರಜೆ ಘೋಷಿಸಲಾಗಿಲ್ಲ.

ಇನ್ನೊಂದೆಡೆ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣರವರ ಕುರಿತಾಗಿ ಹೊರಬಿದ್ದಿದ್ದ ‘ಮರಣ ಆದೇಶವನ್ನು ಯಾರೋ ಕಿಡಿಗೇಡಿಗಳು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದಾರೆ. ಆ ಆದೇಶಕ್ಕೆ ಸಹಿ ಮಾಡಿದ ಅಧಿಕಾರಿ ಪ್ರಸ್ತುತ ಆ ಇಲಾಖೆಯಲ್ಲಿ ಸೇವೆಯಲ್ಲಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ, ಸರ್ಕಾರದ ಅಧೀನ ಕಾರ್ಯದರ್ಶಿ-1 (ಪ್ರ) ಬಾಣದರಂಗಯ್ಯ ಎನ್.ಆರ್. ರವರ ಸಹಿ ಸಹಿತ ಅಧಿಸೂಚನೆ ಇಂದು ಹೊರಡಿಸಲಾಗಿದೆ.

You may also like

News

CODP Extends Education Aid to Students, Spreads Awareness on Government Welfare Schemes

The Canara Organisation for Development and Peace (CODP) organised an Education Aid Cheque Distribution Programme along with an awareness session
News

ಮುದರಂಗಡಿ ಉದ್ಯಮಿ ಡೇವಿಡ್ ಡಿಸೋಜ ಹತ್ಯೆ – ಕೆಲವೇ ಗಂಟೆಗಳಲ್ಲಿ ಉಡುಪಿ ಪೊಲೀಸರಿಂದ ಆರೋಪಿ ರಾಜು ಬಂಧನ

ಮುದರಂಗಡಿ ಪೇಟೆಯಲ್ಲಿ ಹಾಡಹಗಲೇ ಉದ್ಯಮಿ ಡೇವಿಡ್ ಡಿಸೋಜ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿಗಳ ಪೈಕಿ ಒಬ್ಬನನ್ನು ಪೊಲೀಸರು ಕೆಲವೇ ಗಂಟೆಗಳಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧನದ

You cannot copy content of this page