December 12, 2025
Karavali Suddi | Bilingual Kannada/English Weekly Newspaper | ಕರಾವಳಿ ಸುದ್ದಿ - ಅರವಿನತ್ತ ನಮ್ಮ ಚಿತ್ತ
Follow Us
News

ಮಂಗಳೂರಿನಲ್ಲಿ ಪೈಪ್‌ಲೈನ್ ಹಾನಿಯಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ – ದುರಸ್ತಿ ಪೂರ್ಣ

ನಾಳೆ ನವೆಂಬರ್ 20ರಂದು ಗುರುವಾರ ಬೆಳಿಗ್ಗೆ ವೇಳೆಗೆ ನೀರು ಸರಬರಾಜು ಯಥಾಸ್ಥಿತಿಗೆ

ಮಂಗಳೂರಿನ ತುಂಬೆ (80 MLD) ರೇಚಕ ಸ್ಥಾವರದಿಂದ ನಗರಕ್ಕೆ ನೀರು ಪೂರೈಸುವ 1100 ಮಿ.ಮೀ. ವ್ಯಾಸದ ಮುಖ್ಯ ಕೊಳವೆ ನವೆಂಬರ್ 17ರಂದು ಸೋಮವಾರ ಬೆಳಗ್ಗೆ ಪಡೀಲ್ ಸಮೀಪದ ಕಣ್ಣೂರು ಬಳಿ ಹಾನಿಗೊಳಗಾಗಿತ್ತು. ಈ ಹಿನ್ನೆಲೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ತುರ್ತು ದುರಸ್ತಿ ಕಾರ್ಯಗಳನ್ನು ಕೈಗೆತ್ತಿಕೊಂಡಿದ್ದು, ಕೆಲಸವನ್ನು ಇಂದು ನವೆಂಬರ್ 19ರಂದು ಬುಧವಾರ ಪೂರ್ಣಗೊಳಿಸಲಾಗಿದೆ.

ಪಾಲಿಕೆಯ ಪ್ರಕಾರ, ದುರಸ್ತಿ ಕಾರ್ಯ ಪೂರ್ಣಗೊಂಡಿರುವುದರಿಂದ ನಾಳೆ ನವೆಂಬರ್ 20ರಂದು ಗುರುವಾರ ಬೆಳಿಗ್ಗೆ ವೇಳೆಗೆ ನೀರು ಸರಬರಾಜು ಯಥಾಸ್ಥಿತಿಗೆ ಮರಳಲಿದೆ.

ಈ ಸಂದರ್ಭ ಸಾರ್ವಜನಿಕರು ಸಹಕಾರ ನೀಡುವಂತೆ  ಮಹಾನಗರ ಪಾಲಿಕೆ ವಿನಂತಿಸಿದೆ.

You may also like

News

ಪುತ್ತೂರಿಗೆ ಶಾಸಕ ಅಶೋಕ್ ರೈ ಕನಸು ನನಸಾದಂತೆ — ರೂಪಾಯಿ 5 ಕೋಟಿ ವೆಚ್ಚದ ಹೊಸ ತಾಲೂಕು ಪಂಚಾಯತ್ ಕಟ್ಟಡಕ್ಕೆ ನಾಳೆ ಡಿಸೆಂಬರ್ 13ರಂದು ಶಿಲಾನ್ಯಾಸ

ಪುತ್ತೂರಿನ ಅಭಿವೃದ್ಧಿ ಕನಸುಗಳು ಒಂದೊಂದಾಗಿ ಸಫಲವಾಗುತ್ತಿವೆ. ಹಳೆಯ ಮತ್ತು ಅಪರಿಹಾರ್ಯವಾಗಿರುವ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪುತ್ತೂರು ತಾಲೂಕು ಪಂಚಾಯತ್ ಕಚೇರಿಗೆ ಹೊಸ ಕಟ್ಟಡದ ಅಗತ್ಯವನ್ನು ಆಗಲೇ ಗುರುತಿಸಿದ್ದ ಶಾಸಕರಾದ
News

ಲೋಕಸಭೆಯಲ್ಲಿ ಮಾಜಿ ಸೈನಿಕರ ಪರ ಧ್ವನಿಯೆತ್ತಿದ ಸಂಸದ ಕ್ಯಾಪ್ಟನ್ ಬ್ರಿಜೇಶ್‌ ಚೌಟ

ಯೋಧರ ಚಿಕಿತ್ಸಾ ತೊಂದರೆ ಗಂಭೀರ – ಖಾಸಗಿ ಆಸ್ಪತ್ರೆಗಳು ಹಿಂದೆ ಸರಿಯುತ್ತಿರುವುದೇ ಆತಂಕ ಕೊಡಗಿನಲ್ಲಿ ECHS ಆಸ್ಪತ್ರೆಗಳ ಕೊರತೆ – ನಿವೃತ್ತ ಯೋಧರು 100–150 ಕಿ.ಮೀ ಪ್ರಯಾಣಿಸುವ

You cannot copy content of this page